ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಸಿಲುಕಿದ್ದ ವಯಸ್ಕರನ್ನು ರಕ್ಷಿಸಿದ ಮೂವರು ಆಪ್ತ ಸ್ನೇಹಿತರು! ಹೃದಯಸ್ಪರ್ಶಿ ವಿಡಿಯೊ ನೋಡಿ

Viral Video: ಮೂವರು ಸ್ನೇಹಿತರು ಸೇರಿ, ಬೆಂಕಿಯ ಉರಿ ಮತ್ತು ಹೊಗೆಯಿಂದ ಉಸಿರುಗಟ್ಟುವ ಜಾಗದಲ್ಲಿ ನಿಂತಿದ್ದ ವಯಸ್ಕರನ್ನು ರಕ್ಷಿಸಲು ಮುಂದಾಗಿದ್ದಾರೆ. ಕಟ್ಟಡವನ್ನೇರಿ ಬಾಲ್ಕನಿಯಲ್ಲಿ ನಿಂತಿದ್ದ ವಯಸ್ಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಸಿಲುಕಿದ್ದ ವಯಸ್ಕರನ್ನು ರಕ್ಷಿಸಿದ ಮೂವರು ಆಪ್ತ ಸ್ನೇಹಿತರು! ಹೃದಯಸ್ಪರ್ಶಿ ವಿಡಿಯೊ ನೋಡಿ
ಮೂವರು ಆಪ್ತ ಸ್ನೇಹಿತರು ಸೇರಿ ಬೆಂಕಿ ತಗುಲಿದ್ದ ಕಟ್ಟದಲ್ಲಿ ಸಿಲುಕಿದ್ದ ವಯಸ್ಕರನ್ನು ರಕ್ಷಿಸಿರುವ ದೃಶ್ಯ

ಬೆಂಕಿ ತಗುಲಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಸಿಲುಕಿದ್ದ ವಯಸ್ಕರನ್ನು ಮೂವರು ಆಪ್ತ ಸ್ನೇಹಿತರು ರಕ್ಷಿಸಿದ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆ ಫ್ರಾನ್ಸ್​ನಲ್ಲಿ ನಡೆದಿದ್ದು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ. ಯಾವುದೇ ತರಬೇತಿ ಅಥವಾ ಸುರಕ್ಷತಾ ಉಪಕರಣಗಳ ಸಹಾಯವಿಲ್ಲದೇ ಮೂವರು ಸ್ನೇಹಿತರು ಒಂದಾಗಿ ದೈಹಿಕ ದುರ್ಬಲರಾಗಿದ್ದ ವಯಸ್ಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ವರದಿಗಳ ಪ್ರಕಾರ, ಮೂವರು ಪಾರ್ಕ್​ನಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ದೂರದಲ್ಲಿದ್ದ ಕಟ್ಟಡದ ಮೂರನೇ ಮಹಡಿಯಿಂದ ಬೆಂಕಿಯ ಹೊಗೆ ಬರುತ್ತಿರುವುದು ಕಂಡು ಬಂದಿದೆ. ಜತೆಗೆ ವಯಸ್ಕರು ಬಾಲ್ಕನಿಯಲ್ಲಿ ನಿಂತು ಒದ್ದಾಡುತ್ತಿರುವುದು ಕಂಡು ಬಂದಿದೆ. ಕಿಂಚಿತ್ತೂ ಯೋಚಿಸದೇ ವಯಸ್ಕರನ್ನು ಕಾಪಾಡಿದ ಸ್ನೇಹಿತರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸ್ವಲ್ಪವೂ ತಡ ಮಾಡದೇ ಬೆಂಕಿಯ ಉರಿ ಮತ್ತು ಹೊಗೆಯಿಂದ ಉಸಿರುಗಟ್ಟುವ ಜಾಗದಲ್ಲಿ ನಿಂತಿದ್ದ ವಯಸ್ಕರನ್ನು ರಕ್ಷಿಸಲು ಮುಂದಾಗಿದ್ದಾರೆ. ಕಟ್ಟಡವನ್ನೇರಿ ಬಾಲ್ಕನಿಯಲ್ಲಿ ನಿಂತಿದ್ದ ವಯಸ್ಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ವಯಸ್ಕರೋರ್ವರು ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವುದರಿಂದ ಉಸಿರಾಡಲು ಕಷ್ಟಪಡುತ್ತಿದ್ದರು. ಸ್ಥಳದಿಂದ ಪಾರಾಗಲು ಕಷ್ಟಪಡುತ್ತಿದ್ದರು. ಇದನ್ನು ಗಮನಿಸಿದ ಸ್ನೇಹಿತರು ತಡ ಮಾಡದೇ ವಯಸ್ಕರನ್ನು ರಕ್ಷಿಸಲು ಮುಂದಾಗಿದ್ದಾರೆ. ಧೈರ್ಯದಿಂದ ಮುನ್ನುಗ್ಗಿ ವಯಸ್ಕರನ್ನು ರಕ್ಷಿಸಿದ ಮೂವರು ಸ್ನೇಹಿತರಿಗೆ ಸ್ಥಳೀಯರು ಅಭಿನಂದನೆ ತಿಳಿಸಿದ್ದಾರೆ. ವರದಿಗಳ ಪ್ರಕಾರ ಘಟನೆ 2020 ಏಪ್ರಿಲ್​ನಲ್ಲಿ ನಡೆದಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಬೈಕ್​ನಲ್ಲಿ ಪುಟ್ಟ ಬಾಲಕನ ಸಖತ್ ಸ್ಟಂಟ್; ವಿಡಿಯೊ ನೋಡಿ

Viral Video: ಆನೆಗಳೊಂದಿಗೆ ಹುಡುಗಿಯ ಸಕತ್ ಡಾನ್ಸ್; ವೈರಲ್​ ಆಯ್ತು ವಿಡಿಯೊ

Read Full Article

Click on your DTH Provider to Add TV9 Kannada