Viral Video: ಬೈಕ್​ನಲ್ಲಿ ಪುಟ್ಟ ಬಾಲಕನ ಸಖತ್ ಸ್ಟಂಟ್; ವಿಡಿಯೊ ನೋಡಿ

ಅಂತರ್ಜಾಲದಲ್ಲಿ ಪುಟ್ಟ ಮಕ್ಕಳ ಹಲವು ಮುದ್ದಾದ ವಿಡಿಯೊಗಳು ವೈರಲ್ ಆಗುತ್ತವೆ. ಆದರೆ ಇಲ್ಲೊಬ್ಬ ಪೋರ ಬೈಕ್ ಸ್ಟಂಟ್ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.

Viral Video: ಬೈಕ್​ನಲ್ಲಿ ಪುಟ್ಟ ಬಾಲಕನ ಸಖತ್ ಸ್ಟಂಟ್; ವಿಡಿಯೊ ನೋಡಿ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: Oct 03, 2021 | 3:52 PM

ಪುಟಾಣಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅಗಾಧ. ಕೇವಲ ಒಂದು ವಿಷಯವಲ್ಲದೇ ಹಲವಾರು ವಿಷಯಗಳಲ್ಲಿ ಅವರಿಗೆ ಕುತೂಹಲ, ಆಸಕ್ತಿ, ಪ್ರತಿಭೆ ಇರುತ್ತದೆ. ಅದರ ಅನುಸಾರ ಸಣ್ಣ ವಯಸ್ಸಿನಿಂದಲೇ ಅವರಿಗೆ ಶಿಕ್ಷಣ ದೊರೆತಲ್ಲಿ ಬಹಳ ದೊಡ್ಡ ಸಾಧನೆಯನ್ನೂ ಅವರು ಮಾಡುತ್ತಾರೆ. ಮತ್ತೆ ಹಲವು ಮಕ್ಕಳು ಸಣ್ಣ ವಯಸ್ಸಿನಿಂದಲೇ ತಮ್ಮ ಅಗಾಧ ಪ್ರತಿಭೆಯಿಂದ ಇಷ್ಟದ ಕ್ಷೇತ್ರಗಳಲ್ಲಿ ಛಾಪನ್ನು ಮೂಡಿಸಲು ಆರಂಭಿಸುತ್ತಾರೆ. ಇದು ನಿರ್ದಿಷ್ಟವಾಗಿ‌ ಇಂಥದ್ದೇ ಕ್ಷೇತ್ರ ಎಂಬುದಕ್ಕೆ ಸೀಮಿತವಾಗಿಲ್ಲ. ಅಂಥದ್ದೇ ಒಂದು ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಪುಟ್ಟ ಬಾಲಕನೋರ್ವ ನಾಲ್ಕು ಚಕ್ರದ ಸಣ್ಣ ವಾಹನವನ್ನು ಚಲಾಯಿಸುತ್ತಿರುವುದು ವೈರಲ್ ಆಗಿದೆ.

ಬಾಲಕ ವಾಹನ ಚಾಲನೆ ಮಾಡುವುದರಲ್ಲಿ ಏನು ವಿಶೇಷ ಎಂದು ಯೋಚಿಸುತ್ತಿದ್ದೀರಾ? ನಾಲ್ಕು ಚಕ್ರದ ಬೈಕ್​ನಲ್ಲಿ ವೀಲಿಂಗ್ ಮಾಡುತ್ತಾ ಕೇವಲ ಎರಡೇ ಚಕ್ರದಲ್ಲಿ ಆತ ಚಲಾಯಿಸುತ್ತಿದ್ದಾನೆ. ಅದೂ ವಾಹನದ ಮುಂದಿನ ಚಕ್ರಗಳನ್ನು ಎತ್ತಿ ವೀಲಿಂಗ್ ಮಾಡುತ್ತಿರುವುದಲ್ಲ, ತನ್ನ ಎಡ ಭಾಗದ ಎರಡೂ ಚಕ್ರಗಳನ್ನು ನೆಲದಿಂದ ಮೇಲಕ್ಕೇರಿಸಿ ಗಾಡಿಯನ್ನು ಬಾಗಿಸಿ ರೇಸ್ ಬೈಕ್‌ನಂತೆ ಕಾರನ್ನು ಆತ ಓಡಿಸಿದ್ದಾನೆ.

ಕೇವಲ ಹತ್ತು ಸೆಕೆಂಡ್ ಗಳ ಈ ವಿಡಿಯೊ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದ್ದು, ಬಾಲಕನ ಪ್ರತಿಭೆಗೆ ಅನೇಕರು ತಲೆದೂಗಿದ್ದಾರೆ. ಹೆಲ್ಮೆಟ್ ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡೇ ಸಾಹಸವನ್ನು ಪ್ರದರ್ಶಿಸಿದ್ದು, ಇದು ಕ್ರೀಡಾ ಅಭ್ಯಾಸದ ಒಂದು ಭಾಗ ಎಂಬುದನ್ನು ಸೂಚಿಸುತ್ತದೆ. ಇದಕ್ಕೂ ಕೂಡ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೊ ಇಲ್ಲಿದೆ:

ಪುಟ್ಟ ಬಾಲಕನ ಈ ಸಾಹಸದ ವಿಡಿಯೊ ತುಣಕನ್ನು ಅಂತರ್ಜಾಲದಲ್ಲಿ ಹಲವರು ಇಷ್ಟಪಟ್ಟಿದ್ದು, ವಿಧ ವಿಧದ ಮೀಮ್ಸ್​ಗಳನ್ನು ಮಾಡಿ ಹರಿಬಿಡುತ್ತಿದ್ದಾರೆ.

ಇದನ್ನೂ ಓದಿ:

Viral Video: ಆನೆಗಳೊಂದಿಗೆ ಹುಡುಗಿಯ ಸಕತ್ ಡಾನ್ಸ್; ವೈರಲ್​ ಆಯ್ತು ವಿಡಿಯೊ

Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್