Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ

ಸಿಂಹವೊಂದು ಕೊಳವೊಂದರ ಸಮೀಪ ಅಡ್ಡಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿಗೆ ಬಿದ್ದಿದೆ. ನಂತರ ಏನಾಯಿತು? ಜೊತೆಗಿದ್ದ ಸಿಂಹ ಮಾಡಿದ್ದೇನು? ವಿಡಿಯೊ ನೋಡಿ.

Viral Video: ಕೊಳದ ದಡದಲ್ಲಿ ಅಡ್ಡಾಡುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದ ಸಿಂಹ; ಆಮೇಲೇನಾಯ್ತು? ವಿಡಿಯೊ ನೋಡಿ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: shivaprasad.hs

Updated on: Oct 03, 2021 | 3:05 PM

ಅಂತರ್ಜಾಲದಲ್ಲಿ ಪ್ರಾಣಿ ಪ್ರಪಂಚದ ವಿಡಿಯೊಗಳು ಸಾಕಷ್ಟು ವೈರಲ್ ಆಗುತ್ತವೆ. ಅದರಲ್ಲೂ ಸಾಮಾನ್ಯವಾಗಿ ಮನುಷ್ಯನಿಗೆ ಕಾಣ ಸಿಗದ ಜೀವಿಗಳ ಕುರಿತು ಎಲ್ಲರಿಗೂ ಆಸಕ್ತಿ ಹೆಚ್ಚು. ಆದ್ದರಿಂದಲೇ ಸಿಂಹ, ಚಿರತೆ, ಹುಲಿ ಮೊದಲಾದ ಪ್ರಾಣಿಗಳು ನೆಟ್ಟಿಗರ ಕುತೂಹಲ ಕೆರಳಿಸುತ್ತವೆ. ಅದರಲ್ಲೂ ಅಂತಹ ಪ್ರಾಣಿಗಳ ತಮಾಷೆಯ ವಿಡಿಯೊವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅದನ್ನು ನೋಡಿ, ನಕ್ಕು ಹಗುರಾಗುತ್ತಾರೆ. ಅಂತದ್ದೇ ಒಂದು ವಿಡಿಯೊ ಇಲ್ಲಿದೆ. ಕಾಡಿನ ರಾಜ ಸಿಂಹ, ಆಯತಪ್ಪಿ ನೀರಿಗೆ ಬಿದ್ದರೆ ಏನಾಗುತ್ತದೆ? ಇಲ್ಲಿದೆ ನೋಡಿ.

ಈ ವಿಡಿಯೊ ಜರ್ಮನ್ ಮೃಗಾಲಯದ್ದು ಎನ್ನಲಾಗಿದ್ದು, ಎರಡು ಸಿಂಹಗಳು ಅವುಗಳಿಗೆ ಈಜಲೆಂದು ನಿರ್ಮಿಸಿರುವ ಕೊಳದ ದಡದಲ್ಲಿ ಓಡಾಡುತ್ತಿರುತ್ತವೆ. ಆದರೆ ಎಲ್ಲೋ ನೋಡುತ್ತಾ ತೆರಳುತ್ತಿದ್ದ ಒಂದು ಸಿಂಹ, ಆಯ ತಪ್ಪಿ ನೀರಿನೊಳಗೆ ಬೀಳುತ್ತದೆ. ಅದು ಬಿದ್ದದ್ದು ಮತ್ತೊಂದು ಸಿಂಹಕ್ಕೆ ಗಾಬರಿಯಾಗುತ್ತದೆ. ನೀರಿನತ್ತ ಬಗ್ಗಿ ಏನಾಯಿತು ಎಂದು ನೋಡುತ್ತದೆ. ನಂತರ ನೀರಿನಲ್ಲಿದ್ದ ಸಿಂಹ ಈಜುತ್ತಾ ಬಂದು ದಡ ಸೇರಿದೆ. ಸಿಂಹದ ಈ ವಿಡಿಯೊ ಸದ್ಯ ವೈರಲ್ ಆಗಿದೆ.

ವಿಡಿಯೊ ಇಲ್ಲಿದೆ:

ಈ ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಜನರು ಇದನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಸಿಂಹ ಭಯಗೊಳ್ಳುವುದನ್ನು ತಾನು ನೋಡಿಯೇ ಇರಲಿಲ್ಲ. ಆದರೆ ದಡದಲ್ಲಿ ನಿಂತಿದ್ದ ಸಿಂಹದ ನಡೆ ಆಶ್ಚರ್ಯ ಉಂಟುಮಾಡಿದೆ ಎಂದಿದ್ದಾರೆ. ಮತ್ತಷ್ಟು ಜನ ಇದು ತಮಾಷೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಹಲವರು ಇದು ಮೃಗಾಲಯಗಳಲ್ಲಿ ಕಂಡುಬರುವ ಅತ್ಯಂತ ಅಪರೂಪದ ದೃಶ್ಯ ಎಂದು ಬರೆದಿದ್ದಾರೆ.

ಇದನ್ನೂ ಓದಿ:

ಶಿವಮೊಗ್ಗ: ಕಡಜದ ಹುಳು ಕಚ್ಚಿ ಇಬ್ಬರು ಮೃತ

ನೆಲಮಂಗಲ: ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ಯತ್ನಿಸಿ ವಿಫಲ ಪ್ರಯತ್ನ, ಪಾರ್ಕ್ ನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್

ಅಫ್ಘಾನ್​-ತಜಿಕಿಸ್ತಾನ್​ ಗಡಿಯಲ್ಲಿ ಆತ್ಮಾಹುತಿ ಬಾಂಬರ್​ಗಳ ಬೆಟಾಲಿಯನ್​ ನಿಯೋಜಿಸುವುದಾಗಿ ಹೇಳಿದ ತಾಲಿಬಾನ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ