ನೆಲಮಂಗಲ: ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ಯತ್ನಿಸಿ ವಿಫಲ ಪ್ರಯತ್ನ, ಪಾರ್ಕ್ ನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್
ಅನುಮಾನ ಬಾರದಂತೆ ಪಾರ್ಕ್ ನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೀಣ್ಯಾ ಹೊಯ್ಸಳ ಸಿಬ್ಬಂದಿ ಬಂಧಿಸಿದ್ದಾರೆ. ಶಂಕರ(25) ಬಂಧಿತ ಆರೋಪಿ. ಪೀಣ್ಯಾದ SRS ಪಾರ್ಕ್ನಲ್ಲಿ ಅನುಮಾನ ಬಾರದಂತೆ ಗುಪ್ತವಾಗಿ ಗಾಂಜಾ ಮಾರಾಟ ಮಾಡುವಾಗ ಶಂಕರ್ ಸಿಕ್ಕಿ ಬಿದ್ದಿದ್ದಾನೆ.
ನೆಲಮಂಗಲ: ಕಾಲೇಜು ಆವರಣದಲ್ಲೇ ಸೆಕ್ಯುರಿಟಿ ಇಲ್ಲದಿರುವ ಸಮಯ ಗಮನಿಸಿ ಎಟಿಎಂನಲ್ಲಿದ್ದ ಹಣ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಪ್ರತಿಷ್ಠಿತ ಆಚಾರ್ಯ ಕಾಲೇಜಿನ ಆವರಣದಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸೇರಿದ ATM ಜಖಂ ಆಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.
ಹತ್ತಾರು ಸೆಕ್ಯುರಿಟಿ ಗಾರ್ಡ್ ಕಾಲೇಜಿನಲ್ಲಿ ದಿನನಿತ್ಯ ಕೆಲಸ ಮಾಡುತ್ತಿದ್ದರು. ಕಳೆದ ರಾತ್ರಿ ಎಟಿಎಂ ಸೆಂಟರ್ ಸೆಕ್ಯುರಿಟಿ ಮಾತ್ರ ರಾತ್ರಿ ಕೆಲಸಕ್ಕೆ ಆಗಮಿಸಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಎಟಿಎಂ ನಲ್ಲಿದ್ದ ಹಣ ದೋಚಲು ದುಷ್ಕರ್ಮಿಗಳು ಯತ್ನಿಸಿದ್ದು ಪ್ರಯತ್ನ ವಿಫಲವಾಗಿದೆ. ಆದ್ರೆ ಎಟಿಎಂ ಮಿಷನ್ ಜಖಂ ಆಗಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇನ್ನು ಅನುಮಾನ ಬಾರದಂತೆ ಪಾರ್ಕ್ ನಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೀಣ್ಯಾ ಹೊಯ್ಸಳ ಸಿಬ್ಬಂದಿ ಬಂಧಿಸಿದ್ದಾರೆ. ಶಂಕರ(25) ಬಂಧಿತ ಆರೋಪಿ. ಪೀಣ್ಯಾದ SRS ಪಾರ್ಕ್ನಲ್ಲಿ ಅನುಮಾನ ಬಾರದಂತೆ ಗುಪ್ತವಾಗಿ ಗಾಂಜಾ ಮಾರಾಟ ಮಾಡುವಾಗ ಶಂಕರ್ ಸಿಕ್ಕಿ ಬಿದ್ದಿದ್ದಾನೆ. ಈತನ ಬಳಿ ಗಾಂಜಾ ಖರೀದಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು ಖಚಿತ ಮಾಹಿತಿ ಮೇರೆಗೆ ಅರೋಪಿ ಜೊತೆ 300ಗ್ರಾಂ ಗಾಂಜಾ ನಗದು ಜಪ್ತಿ ಮಾಡಲಾಗಿದೆ. ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಪೊಲೀಸ್-ಸಬ್ ಇನ್ಸ್ಪೆಕ್ಟರ್ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ-2021 ಇಂದು ನಡೆಯುತ್ತಿದ್ದು ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಶ್ರೀ ಕೃಷ್ಣ ಕಾಲೇಜು ಪರೀಕ್ಷಾ ಸೆಂಟರ್ನಲ್ಲಿ ಅವ್ಯವಸ್ಥೆ ಕಂಡು ಬಂದಿದೆ.
ಪರೀಕ್ಷೆ ಬರೆಯಲು ಪರೀಕ್ಷಾರ್ಥಿಗಳು ಸಾಲಿನಲ್ಲಿ ನಿಂತಿದ್ದು ದೈಹಿಕ ಅಂತರವಿಲ್ಲದೆ ಕೊರೊನಾ ನಿಯಮವನ್ನು ಗಾಳಿಗೆ ತೂರಿದ್ದಾರೆ. ಆಡಳಿತ ಮಂಡಳಿ ಸರಿಯಾದ ವ್ಯವಸ್ಥೆ ಮಾಡಿಕೊಂಡಿಲ್ಲ. ಸೋಲದೇವನಹಳ್ಳಿ ಪೊಲೀಸರು ತಪಾಸಣೆ ಕಾರ್ಯ ನಡೆಸಿದ್ದು ಗೇಟ್ ನಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಿ ತಪಾಸಣೆ ನಡೆಸಿದ್ದಾರೆ.