Viral News: ರೋಗಿಯ ಸಮಸ್ಯೆಯನ್ನು ಪತ್ತೆಹಚ್ಚಲು iPhone 13 Pro Max ​ಫೋನ್​ ಬಳಸಿದ ವೈದ್ಯರು!

iPhone 13 Pro Max: ಅಪರೂಪದಲ್ಲಿ ಅಪರೂಪದ ಘಟನೆಯೊಂದು ಕುತೂಹಲ ಕೆರಳಿಸುವಂತಿದೆ. ರೋಗಿಗಳ ಸಮಸ್ಯೆಯನ್ನು ಪತ್ತೆ ಹಚ್ಚಲು ವೈದ್ಯರು iPhone 13 Pro Max ಫೋನ್ಅನ್ನು ಬಳಸಿದ್ದಾರೆ. ಆಶ್ಚರ್ಯದ ವಿಷಯವಾದರೂ ನಂಬೇಲೇಬೇಕಾದ ಸತ್ಯ!

Viral News: ರೋಗಿಯ ಸಮಸ್ಯೆಯನ್ನು ಪತ್ತೆಹಚ್ಚಲು iPhone 13 Pro Max ​ಫೋನ್​ ಬಳಸಿದ ವೈದ್ಯರು!
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Oct 05, 2021 | 11:44 AM

ಕಳೆದ ತಿಂಗಳು (ಸೆಪ್ಟೆಂಬರ್)ನಲ್ಲಿ  iPhone 13 Pro Max ಫೋನ್ಅನ್ನು ನಾಲ್ಕು ಹೊಸ ರೂಪಾಂತರಗಳೊಂದಿಗೆ ಪರಿಚಯಿಸಲಾಯಿತು. ಇದೀಗ ಆ್ಯಪಲ್ ಫೋನ್​ಗಳು ಹೊಂದಿರುವ ಕ್ಯಾಮರಾ ಮತ್ತು ಫೋಟೋ ಕ್ಲಿಕ್​ಗೆ ಜನಪ್ರಿಯಗೊಂಡಿದೆ. ಸಾಮಾನ್ಯವಾಗಿ ಅವು ಹೊಂದಿರುವ ಕ್ಯಾಮರಾ ಮತ್ತು ಲೆನ್ಸ್ ಗುಣಮಟ್ಟದ ಆಧಾರದ ಮೇಲೆ ಗ್ರಾಹಕರು ಖರೀದಿಸುತ್ತಿದ್ದಾರೆ. ಇದೀಗ ಅಪರೂಪದಲ್ಲಿ ಅಪರೂಪದ ಘಟನೆಯೊಂದು ಕುತೂಹಲ ಕೆರಳಿಸುವಂತಿದೆ. ರೋಗಿಗಳ ಸಮಸ್ಯೆಯನ್ನು ಪತ್ತೆ ಹಚ್ಚಲು ವೈದ್ಯರು iPhone 13 Pro Max ಫೋನ್ಅನ್ನು ಬಳಸಿದ್ದಾರೆ. ಆಶ್ಚರ್ಯದ ವಿಷಯವಾದರೂ ನಂಬೇಲೇಬೇಕಾದ ಸತ್ಯ!

ನೇತ್ರತಜ್ಞ ತಮ್ಮಲ್ಲಿ ಬರುವ ರೋಗಿಗಳ ಸಮಸ್ಯೆಯನ್ನು ಪತ್ತೆಹಚ್ಚಲು ಸುಲಭವಾಗುವಂತೆ iPhone 13 Pro Max ಫೋನ್ಅನ್ನು ಬಳಸಿರುವುದು ತಿಳಿದು ಬಂದಿದೆ. ರೋಗಿಯ ದೃಷ್ಟಿ ಪರೀಕ್ಷಿಸುವ ವಿಧಾನದ ಭಾಗವಾಗಿ ಐಫೋನ್ ಬಳಸಿರುವ ಮಾಹಿತಿ ವರದಿಗಳಿಂದ ಲಭ್ಯವಾಗಿವೆ.

ನೇತ್ರತಜ್ಞ ಡಾ. ಟಾಮಿ ಕಾರ್ನ್ ತನ್ನ ಹೊಸ ಪ್ರಯೋಗವನ್ನು ಪರಿಚಯಿಸಲು ಲಿಕ್ಡ್ಇನ್​ಗೆ ಕರೆದೊಯ್ದಿದ್ದಾರೆ. ವೈದ್ಯರು, iPhone 13 Pro Max ಫೋನ್​ನಲ್ಲಿ ಮ್ಯಾಕ್ರೋ ಮೋಡ್ ಬಳಸಿ ರೋಗಿಯ ಕಣ್ಣುಗಳ ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ, ಈ ಫೋನ್ ವೈದ್ಯರಿಗೆ ವೈದ್ಯಕೀಯ ಉದ್ದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ರೋಗಿಯ ಅಸ್ವಸ್ಥತೆಗಳನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂಬ ಅಭಿಪ್ರಾಯವನ್ನು ಹೇಳಿದ್ದಾರೆ.

ಆಂಡ್ರಾಯ್ಡ್ ಫೋನ್​ಗಳಿಗಿಂತ ಭಿನ್ನವಾಗಿ ಆ್ಯಪಲ್ ತನ್ನ ಮ್ಯಾಕ್ರೋ ಲೆನ್ಸ್​ನೊಂದಿಗೆ ಅಲ್ಟ್ರಾ-ವೈಡ್ ಕ್ಯಾಮರಾವನ್ನು ಹೊಂದಿದ್ದು, ಅದು ಲೆನ್ಸ್​ನಿಂದ ಎರಡು ಸೆಂಟಿಮೀಟರ್​ಗಳಷ್ಟು ಅಂತರದಲ್ಲಿರುವ ವಸ್ತುಗಳ ಸ್ಪಷ್ಟ ಚಿತ್ರವನ್ನು ಸೆರೆ ಹಿಡಿಯುತ್ತದೆ.

ಉದಾಹರಣೆಯಾಗಿ ಓರ್ವ ರೋಗಿಯ ಚಿಕಿತ್ಸೆ ಮಾಡುವಾಗಿನ ಅನುಭವ ಹಂಚಿಕೊಂಡ ಡಾ. ಕಾರ್ನ್, ರೋಗಿಯ ದೃಷ್ಟಿ ಹೀನತೆಯಿಂದ ಬಳಲುತ್ತಿರುವಾಗ ಅವರಿಗೆ ಕಸಿ ಮಾಡಲಾಯಿತು. ಆ ಬಳಿಕ ರೋಗಿಯ ದೃಷ್ಟಿ ದೋಷವು ವಾಸಿಯಾಗಿದೆಯೇ ಎಂದು ತಿಳಿಯಲು ವೈದ್ಯರಿಗೆ ಈ ಪೋನ್ ಸಹಾಯ ಮಾಡಿತು ಎಂಬುದನ್ನು ತಿಳಿಸಿದ್ದಾರೆ.

ವೈದ್ಯರು ಪೋಸ್ಟ್ ಮಾಡಿರುವ ಪ್ರಕಾರ, ಈ ವಾರ ಮ್ಯಾಕ್ರೋ ಕಣ್ಣಿನ ಫೋಟೋಗಳಿಗಾಗಿ iPhone 13 Pro Max ಅನ್ನು ಬಳಸಲಾಗುತ್ತಿದೆ. ಇದರಿಂದ ಪ್ರಭಾವಿತನಾಗಿದ್ದೇನೆ. ಕಸಿ ಮಾಡುವ ಮೂಲಕ ರೋಗಿಯ ದೃಷ್ಟಿ ದೋಷವನ್ನು ಪರಿಹರಿಸಲಾಗಿದೆ. iPhone 13 Pro Max ಮೂಲಕ ಸ್ಪಷ್ಟ ಚಿತ್ರಣವನ್ನು ಪಡೆಯಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ:

Viral News: ಲೇಹ್​ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ

Viral News: ಲೇಹ್​ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?