ರಾಜ್ಯಸಭೆಯ ಕೊನೆಯ 7 ಅಧಿವೇಶನಗಳಲ್ಲಿ ಶೇ100 ಹಾಜರಾತಿ ಪಡೆದ ಏಕೈಕ ಸಂಸದ ಎಸ್‌ ಆರ್ ಬಾಲಸುಬ್ರಮಣ್ಯಂ 

Rajya Sabha Attendance: ಸಂಸತ್ತಿನ ಮೇಲ್ಮನೆಯಲ್ಲಿ ಸಂಸದರ ಹಾಜರಾತಿಯ ವಿಶ್ಲೇಷಣೆ ಪ್ರಕಾರ ಎಐಎಡಿಎಂಕೆ (AIADMK) ಸದಸ್ಯ ಎಸ್‌ಆರ್ ಬಾಲಸುಬ್ರಮಣ್ಯಂ(SR Balasubramaniam) ಅಧಿವೇಶನಕ್ಕೆ ತಪ್ಪದೇ ಹಾಜರಾಗುವ ರಾಜ್ಯಸಭಾ ಸದಸ್ಯರು ಎಂದು ಹೇಳಿದೆ

ರಾಜ್ಯಸಭೆಯ ಕೊನೆಯ 7 ಅಧಿವೇಶನಗಳಲ್ಲಿ ಶೇ100 ಹಾಜರಾತಿ ಪಡೆದ ಏಕೈಕ ಸಂಸದ ಎಸ್‌ ಆರ್ ಬಾಲಸುಬ್ರಮಣ್ಯಂ 
ರಾಜ್ಯಸಭೆ-ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 05, 2021 | 11:27 AM

ದೆಹಲಿ: ಶೇಕಡಾ 78 ರಷ್ಟು ರಾಜ್ಯಸಭಾ (Rajya Sabha) ಸದಸ್ಯರು ಸದನದ ಕಲಾಪಗಳಿಗೆ ಪ್ರತಿನಿತ್ಯ ಹಾಜರಾಗುತ್ತಿದ್ದರು ಎಂದು ಸದನದ ಸೆಕ್ರೆಟರಿಯಟ್ ನಡೆಸಿದ ಅಧ್ಯಯನವು ತೋರಿಸಿದೆ. ಸಂಸತ್ತಿನ ಮೇಲ್ಮನೆಯಲ್ಲಿ ಸಂಸದರ ಹಾಜರಾತಿಯ ವಿಶ್ಲೇಷಣೆ ಪ್ರಕಾರ ಎಐಎಡಿಎಂಕೆ (AIADMK) ಸದಸ್ಯ ಎಸ್‌ಆರ್ ಬಾಲಸುಬ್ರಮಣ್ಯಂ(SR Balasubramaniam) ಅಧಿವೇಶನಕ್ಕೆ ತಪ್ಪದೇ ಹಾಜರಾಗುವ ರಾಜ್ಯಸಭಾ ಸದಸ್ಯರು ಎಂದು ಹೇಳಿದೆ. ಅಧ್ಯಯನದ ಪ್ರಕಾರ 75ರ ಹರೆಯದ ಬಾಲಸುಬ್ರಮಣ್ಯಂ ಈ 7 ಅಧಿವೇಶನಗಳ ಎಲ್ಲಾ 138 ಕಲಾಪಗಳಲ್ಲಿ ಭಾಗವಹಿಸಿದರು. ಒಂದು ಅಧಿವೇಶನದಲ್ಲಿ ಸುಮಾರು 30 ಪ್ರತಿಶತ ಸದಸ್ಯರು ಪೂರ್ಣ ಹಾಜರಾತಿ ಹೊಂದಿದ್ದರು ಮತ್ತು ಕೇವಲ ಎರಡು ಶೇಕಡಾಕ್ಕಿಂತ ಕಡಿಮೆ ಜನರು ಮಾತ್ರ ಶೂನ್ಯ ಹಾಜರಾತಿಯನ್ನು ಹೊಂದಿದ್ದರು ಎಂದು ಅಧ್ಯಯನದಲ್ಲಿ ಹೇಳಿದೆ. ಅಶೋಕ್ ಬಾಜ್ಪೈ, ಡಿಪಿ ವತ್ಸ್, ನೀರಜ್ ಶೇಖರ್, ವಿಕಾಸ್ ಮಹಾತ್ಮೆ ಮತ್ತು ರಾಮಕುಮಾರ್ ವರ್ಮಾ ಈ ಐವರು ಸದಸ್ಯರು ಆರು ಸೆಷನ್‌ಗಳಿಗೆ ಸಂಪೂರ್ಣವಾಗಿ ಹಾಜರಾಗಿದ್ದು, ರಾಕೇಶ್ ಸಿನ್ಹಾ, ಸುಧಾಂಶು ತ್ರಿವೇದಿ, ಡಾ ಕೈಲಾಶ್ ಸೋನಿ, ನರೇಶ್ ಗುಜ್ರಾಲ್, ವಿಶಂಬರ್ ಪ್ರಸಾದ್ ನಿಶಾದ್, ಕುಮಾರ್ ಕೇತ್ಕರ್ ಮತ್ತು ಅಮೀ ಯಾಗ್ನಿಕ್ ಈ ಏಳು ಸದಸ್ಯರು ಐದು ಅಧಿವೇಶನಗಳಲ್ಲಿ ಪೂರ್ಣ ಹಾಜರಾತಿಯನ್ನು ಹೊಂದಿದ್ದರು.

ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಹಾಜರಾತಿ ಮಾದರಿಯನ್ನು ತಿಳಿಯಲು ಪ್ರಯತ್ನಿಸಿದ ನಂತರ ಸದನದ ಕಲಾಪದಲ್ಲಿ ಸಂಸತ್ತಿನ ಸದಸ್ಯರ ಭಾಗವಹಿಸುವಿಕೆಯ ಪ್ರಮಾಣವನ್ನು ಮೊದಲ ಬಾರಿಗೆ ವಿಶ್ಲೇಷಿಸಲಾಯಿತು.

ಸಚಿವರು, ಉಪ ಸಭಾಪತಿ, ಸಭಾನಾಯಕ ಮತ್ತು ಪ್ರತಿಪಕ್ಷದ ನಾಯಕ ಹಾಜರಾತಿ ನೋಂದಣಿಗೆ ಸಹಿ ಹಾಕುವ ಅಗತ್ಯವಿಲ್ಲದ ಕಾರಣ, ಸುಮಾರು 225 ಸದಸ್ಯರು ತಮ್ಮ ಹಾಜರಾತಿಯನ್ನು ಸಂಸತ್ತಿನ ಸದಸ್ಯರ (ಸಂಬಳ ಮತ್ತು ಭತ್ಯೆಗಳು) ಕಾಯಿದೆಯಡಿ ಅಗತ್ಯವಿರುವಂತೆ ಪ್ರತಿದಿನ ಗುರುತಿಸುತ್ತಾರೆ ಎಂದು ವಿಶ್ಲೇಷಣೆ ತೋರಿಸಿದೆ. 254 ನೇ ಅಧಿವೇಶನದಲ್ಲಿ (ಕಳೆದ ಮಾನ್ಸೂನ್ ಅಧಿವೇಶನ) ಅತಿಹೆಚ್ಚು ದೈನಂದಿನ ಹಾಜರಾತಿ 82.57 ಶೇಕಡಾ ವರದಿಯಾಗಿದೆ. ಆದರೆ ಹಿಂದಿನ ಒಂದು ಅವಧಿಯಲ್ಲಿ 72.88 ಶೇಕಡಾ ಕಡಿಮೆ ದಾಖಲಾಗಿದೆ ಎಂದು ಅದು ತೋರಿಸಿದೆ.

ಈ ಅವಧಿಯಲ್ಲಿ 29.14 ಪ್ರತಿಶತದಷ್ಟು ಜನರು ಸಂಪೂರ್ಣ ಹಾಜರಾತಿಯನ್ನು ವರದಿ ಮಾಡಿದ್ದಾರೆ ಆದರೆ 1.90 ಪ್ರತಿಶತದಷ್ಟು ಜನರು ಮಾತ್ರ ವಿವಿಧ ಕಾರಣಗಳಿಂದ ಹಾಜರಾಗಲಿಲ್ಲ ಮತ್ತು ಸದನದಿಂದ ರಜೆ ನೀಡಲಾಯಿತು. ಕಳೆದ ಮೂರು ಅವಧಿಗಳಲ್ಲಿ ಸಾಂಕ್ರಾಮಿಕ ರೋಗವು ಹಾಜರಾತಿಯ ಮೇಲೆ ಪರಿಣಾಮ ಬೀರಲಿಲ್ಲ ಎಂದು ವಿಶ್ಲೇಷಣೆಯು ಬಹಿರಂಗಪಡಿಸಿತು. 252 ನೇ ಅಧಿವೇಶನದಲ್ಲಿ, ಮೊದಲ ಬಾರಿಗೆ ಕೊವಿಡ್ -19 ಪ್ರೋಟೋಕಾಲ್ ಪ್ರಕಾರ ಕಲಾಪ ನಡೆದಿದ್ದು 99 ಸದಸ್ಯರು, ಒಟ್ಟು ಶೇಕಡಾ 44.19 ರಷ್ಟು, ಎಲ್ಲಾ ಹತ್ತು ಸಭೆಗಳಲ್ಲಿ ವಿಚಾರಣೆಗೆ ಹಾಜರಾದರು. ಆದರೆ 98 ಸದಸ್ಯರು ಅಂದರೆ ಶೇಕಡಾ 46 ರಷ್ಟು ಸದಸ್ಯರು 254 ನೇ ಅಧಿವೇಶನದ 17 ನೇ ಕಲಾಪದಲ್ಲಿ ಹಾಜರಾಗಿದ್ದರು.

ಇದನ್ನೂ ಓದಿ: Video: ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್​; ಪ್ರಧಾನಿ ಮೋದಿ ವಿರುದ್ಧ ಟೀಕೆ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್