Ashika Ranganath: ಕನ್ನಡದ ಜನಪ್ರಿಯ ನಟಿ ಆಶಿಕಾ ರಂಗನಾಥ್ ಫೊಟೊ ಗ್ಯಾಲರಿ ಇಲ್ಲಿದೆ
Ashika Ranganath Birthday: ಪ್ರಸ್ತುತ ಕನ್ನಡದ ಮುಂಚೂಣಿ ನಟಿಯರಲ್ಲಿ ಆಶಿಕಾ ರಂಗನಾಥ್ ಒಬ್ಬರು. ಇಂದು ಆಶಿಕಾ ಅವರಿಗೆ 25ನೇ ವರ್ಷದ ಜನ್ಮದಿನ ಸಂಭ್ರಮ. ಕನ್ನಡದ ಖ್ಯಾತ ನಾಯಕ ನಟರೊಂದಿಗೆ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಆಶಿಕಾ ಅವರ ಸುಂದರ ಚಿತ್ರಗಳ ಫೊಟೊ ಗ್ಯಾಲರಿ ಇಲ್ಲಿದೆ.
2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಆಶಿಕಾ ರಂಗನಾಥ್ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.
3 / 10
2017ರಲ್ಲಿ ಮಾಸ್ ಲೀಡರ್ ಹಾಗೂ ಮುಗುಳುನಗೆ ಚಿತ್ರದಲ್ಲಿ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡರು. ಮುಗುಳು ನಗೆಯ ಅವರ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
4 / 10
2018ರಲ್ಲಿ ತೆರೆಕಂಡ ‘Rambo 2’ ಚಲನಚಿತ್ರ ಆಶಿಕಾ ಅವರ ವೃತ್ತಿ ಜೀವನಕ್ಕೆ ಬಹಳ ದೊಡ್ಡ ಗೆಲುವನ್ನು ತಂದುಕೊಟ್ಟ ಚಿತ್ರ. ಅದರಲ್ಲಿ ನಟ ಶರಣ್ ಅವರಿಗೆ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ.
5 / 10
‘ರಾಜು ಕನ್ನಡ ಮೀಡಿಯಂ’, ‘ತಾಯಿಗೆ ತಕ್ಕ ಮಗ’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಾಣದೇ ಹೋದರೂ ಆಶಿಕಾ ಅವರಿಗೆ ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂತು.
6 / 10
ಈಗ ಆಶಿಕಾ ಅವರ ಕೈಯಲ್ಲಿ ಹಲವಾರು ಚಿತ್ರಗಳಿವೆ.
7 / 10
ಕೋಟಿಗೊಬ್ಬ 3 ಚಿತ್ರದಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ನಟಿಸಿರುವ ಆಶಿಕಾ, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.
8 / 10
ನಟ ಶರಣ್ ಜೊತೆಗೆ ತೆರೆ ಹಂಚಿಕೊಂಡಿರುವ ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಅವತಾರ ಪುರುಷ ಚಿತ್ರದಲ್ಲೂ ಆಶಿಕಾ ನಾಯಕಿ
9 / 10
ಶ್ರೀ ಮುರುಳಿ ನಟಿಸುತ್ತಿರುವ ‘ಮದಗಜ’ ಚಿತ್ರ, ರೇಮೋ ಚಿತ್ರ ಹಾಗೂ ‘ಗರುಡ’ ಚಿತ್ರಗಳು ಆಶಿಕಾ ಅವರ ಬತ್ತಳಿಕೆಯಲ್ಲಿವೆ. ಹೀಗೆ ಸಾಲು ಸಾಲಾಗಿ ಕನ್ನಡದ ಖ್ಯಾತ ನಟರೊಂದಿಗೆ ಕಾಣಿಸಿಕೊಳ್ಳುತ್ತಿರುವ ಆಶಿಕಾ ಸದ್ಯ ಕನ್ನಡದ ಮುಂಚೂಣಿ ನಟಿಯೆಂದರೆ ತಪ್ಪಾಗಲಾರದು.