ಲವ್ಲಿನಾ 2 ಅಕ್ಟೋಬರ್ 1997 ರಂದು ಅಸ್ಸಾಂನ ಗೋಲಘಾಟ್ ಜಿಲ್ಲೆಯಲ್ಲಿ ಟಿಕನ್ ಮತ್ತು ಮಾಮೋನಿ ಬೊರ್ಗೊಹೈನ್ ದಂಪತಿಗೆ ಜನಿಸಿದರು. ಲವ್ಲಿನಾಗೆ ಒಟ್ಟು ಮೂರು ಸಹೋದರಿಯರಿದ್ದಾರೆ. ಅದಕ್ಕಾಗಿಯೇ ಅವರು ನೆರೆಹೊರೆಯವರಿಂದ ಅನೇಕ ನಿಂದನೆಯ ಮಾತುಗಳನ್ನು ಕೇಳಬೇಕಾಯ್ತು. ಆದರೆ ಇದನ್ನೆಲ್ಲ ಕಡೆಗಣಿಸಿ, ಹಿರಿಯ ಅವಳಿ ಸಹೋದರಿಯರಾದ ಲಿಚಾ ಮತ್ತು ಲಿಮಾ ಇಬ್ಬರೂ ಕಿಕ್ ಬಾಕ್ಸಿಂಗ್ ಆರಂಭಿಸಿದರು, ನಂತರ ಲವ್ಲಿನಾ ಕೂಡ ಕಿಕ್ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡರು.