Ravi Dahiya: ಮಗನಿಗಾಗಿ ನಿತ್ಯ 40 ಕಿ. ಮೀ ಪ್ರಯಾಣ ಮಾಡುತ್ತಿದ್ದ ತಂದೆ! ಕುಸ್ತಿಪಟು ರವಿ ದಹಿಯಾ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು
Tokyo Olympics: 10 ನೇ ವಯಸ್ಸಿನಿಂದ ಅವರು ಸತ್ಪಾಲ್ ಸಿಂಗ್ ಮಾರ್ಗದರ್ಶನದಲ್ಲಿ ಕುಸ್ತಿ ಕಲಿಯುತ್ತಿದ್ದಾರೆ. ಸುಶೀಲ್ ಅವರನ್ನು ಈ ಆಟದ ಮಾಸ್ಟರ್ ಮಾಡಿದ್ದು ಅದೇ ಸತ್ಪಾಲ್ ಸಿಂಗ್.
ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಭಾರತೀಯ ಕುಸ್ತಿಪಟುಗಳಿಂದ ಭಾರೀ ನಿರೀಕ್ಷೆಗಳಿದ್ದವು. ನಿರೀಕ್ಷೆಗಳಿಗೆ ತಕ್ಕಂತೆ ಆಟಗಾರರು ಕೂಡ ತಮ್ಮ ಸಾಮಥ್ಯ್ರವನ್ನು ಸಾಭೀತುಪಡಿಸುತ್ತಿದ್ದಾರೆ. ರವಿ ದಹಿಯಾ 57 ಕೆಜಿ ತೂಕದ ವಿಭಾಗದ ಫೈನಲ್‌ಗೆ ತಲುಪುವ ಮೂಲಕ ದೇಶಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ. ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ರವಿ ದಹಿಯಾ ಅವರಿಂದ ಪದಕ ನಿರೀಕ್ಷಿಸಲಾಗಿತ್ತು. ಟೋಕಿಯೊದಲ್ಲಿ ಪದಕವನ್ನು ಭದ್ರಪಡಿಸುವ ಮೂಲಕ ರವಿ ತನ್ನ ಹೆಸರನ್ನು ಸುಶೀಲ್ ಕುಮಾರ್ ಮತ್ತು ಯೋಗೇಶ್ವರ್ ದತ್ ಜೊತೆ ಜೋಡಿಸಿದ್ದಾರೆ. ರವಿ ಈ ಇಬ್ಬರ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದಾರೆ. ಸುಶೀಲ್ ಮತ್ತು ಯೋಗೇಶ್ವರ್ ಕಲಿತ ಅದೇ ಅಕಾಡೆಮಿಯಿಂದ ಕುಸ್ತಿಯ ಸೂಕ್ಷ್ಮ ವಿಚಾರಗಳನ್ನು ರವಿ ಕಲಿತರು. ಅಂದರೆ, ದೆಹಲಿಯ ಛತ್ರಸಲ್ ಕ್ರೀಡಾಂಗಣದಲ್ಲಿ. ಇಲ್ಲಿಂದ, ರವಿಯ ಹೋರಾಟದ ಪಯಣ ಆರಂಭವಾಯಿತು, ಅದು ಇಂದು ಒಲಿಂಪಿಕ್ ಪದಕವನ್ನು ತಲುಪಿದೆ.
ಕಜಕಿಸ್ತಾನದಲ್ಲಿ ಆಡಿದ 2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ರವಿ ಕಂಚಿನ ಪದಕ ಗೆಲ್ಲುವ ಮೂಲಕ ಟೋಕಿಯೊ ಒಲಿಂಪಿಕ್ ಟಿಕೆಟ್ ಗೆದ್ದಿದ್ದರು. ಇಲ್ಲಿಂದ ರವಿ ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಹುದು ಎಂಬ ನಿರೀಕ್ಷೆಗಳಿದ್ದವು. ರವಿ ಹರಿಯಾಣದ ಸೋನಿಪತ್ ನಗರದ ನಹರಿ ಗ್ರಾಮದಿಂದ ಬಂದಿದ್ದು, 10 ನೇ ವಯಸ್ಸಿನಿಂದ ಅವರು ಸತ್ಪಾಲ್ ಸಿಂಗ್ ಮಾರ್ಗದರ್ಶನದಲ್ಲಿ ಕುಸ್ತಿ ಕಲಿಯುತ್ತಿದ್ದಾರೆ. ಸುಶೀಲ್ ಅವರನ್ನು ಈ ಆಟದ ಮಾಸ್ಟರ್ ಮಾಡಿದ್ದು ಅದೇ ಸತ್ಪಾಲ್ ಸಿಂಗ್. ನಹರಿ ಗ್ರಾಮವನ್ನು ಕುಸ್ತಿಪಟುಗಳ ಶಾಲೆ ಎಂದೂ ಕರೆಯುತ್ತಾರೆ. ಈ ಹಳ್ಳಿಯಿಂದ ಹೊರಬಂದ ಮತ್ತೊಬ್ಬ ಕುಸ್ತಿಪಟು ಅಮಿತ್ ದಹಿಯಾ ಕೂಡ ಸಾಕಷ್ಟು ಹೆಸರು ಗಳಿಸಿದ್ದಾರೆ.
ತಂದೆ ಶ್ರಮವೇ ರವಿ ಯಶಸ್ಸಿಗೆ ಕಾರಣವಾಯ್ತು ರವಿ ಆಟವಾಡಲು ಆರಂಭಿಸಿದಾಗ, ಅವರ ಕುಟುಂಬವು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರಲಿಲ್ಲ. ಅವರ ತಂದೆ ರಾಕೇಶ್ ದಹಿಯಾ ಅವರಿಗೆ ಸ್ವಂತ ಭೂಮಿ ಇರಲಿಲ್ಲ ಮತ್ತು ಇತರರ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಅವರು ತನ್ನ ಮಗನಿಗಾಗಿ 40 ಕಿಮೀ ಪ್ರಯಾಣಿಸಿ ದೆಹಲಿಗೆ ಬರುತ್ತಿದ್ದರು. ಅದೂ ರವಿಯವರಿಗೆ ಹಾಲು ಮತ್ತು ಹಣ್ಣುಗಳನ್ನು ಕೊಡಲು. ಈ ಕೆಲಸ ಸುಮಾರು ಒಂದು ದಶಕದವರೆಗೆ ನಡೆಯಿತು.
ಒಂದು ಕೊಠಡಿ 20 ಜನರು ರವಿ ಛತ್ರಸಲ್ ಕ್ರೀಡಾಂಗಣಕ್ಕೆ ಬಂದಾಗ, ಅವರು 20 ಜನರೊಂದಿಗೆ ಒಂದು ಕೋಣೆಯಲ್ಲಿ ವಾಸಿಸಬೇಕಾಗಿತ್ತು. ಆದರೆ ರವಿ ಉಳಿದವರಿಗಿಂತ ಭಿನ್ನನಾಗಿದ್ದರು. ಅವರಿಗೆ ಏನಾದರೂ ಮಾಡಬೇಕೆಂಬ ಉತ್ಸಾಹವಿತ್ತು. 2015 ರಲ್ಲಿ ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಅವರು ತಮ್ಮಲ್ಲಿ ಎಷ್ಟು ಪ್ರತಿಭೆ ಇದೆ ಎಂದು ತೋರಿಸಿದ್ದರು. ಅವರು ಈ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಎಲ್ಲಾ ಹೋರಾಟಗಳ ನಡುವೆಯೂ, ರವಿ ಅವರ ಗಾಯವು ಅವರನ್ನು ತುಂಬಾ ತೊಂದರೆಗೊಳಿಸಿತು, ಅದೂ ಅವರ ಆರಂಭಿಕ ವೃತ್ತಿಜೀವನದಲ್ಲಿ. ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ರವಿ ಮೊಣಕಾಲಿಗೆ ಗಾಯವಾಗಿತ್ತು. ರವಿ ಈ ಗಾಯದಿಂದ ಚೇತರಿಸಿಕೊಳ್ಳಲು ಒಂದು ವರ್ಷ ಬೇಕಾಯಿತು ಮತ್ತು ಅಂದಿನಿಂದ ರವಿ ಹಿಂತಿರುಗಿ ನೋಡಲೇ ಇಲ್ಲ. 2018 ರಲ್ಲಿ, ಅವರು ಅಂಡರ್ -23 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದರು.