Tokyo Olympics: ಕಂಚು ಗೆದ್ದ ಲವ್ಲಿನಾ, ಕುಸ್ತಿಯಲ್ಲಿ ಫೈನಲ್​ಗೇರಿದ ರವಿ.. ಹಾಕಿಯಲ್ಲಿ ನಿರಾಸೆ; ಇಂದು ಭಾರತದ ಪ್ರದರ್ಶನ ಹೀಗಿತ್ತು

Tokyo Olympics: ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಭಾರತಕ್ಕೆ ಬುಧವಾರ ಅತ್ಯಂತ ಮಹತ್ವದ ದಿನವಾಗಿತ್ತು. ಈ ದಿನ, ಭಾರತವು ಕುಸ್ತಿ, ಬಾಕ್ಸಿಂಗ್, ಹಾಕಿಯಿಂದ ಪದಕಗಳನ್ನು ನಿರೀಕ್ಷಿಸಿತು.

Tokyo Olympics: ಕಂಚು ಗೆದ್ದ ಲವ್ಲಿನಾ, ಕುಸ್ತಿಯಲ್ಲಿ ಫೈನಲ್​ಗೇರಿದ ರವಿ.. ಹಾಕಿಯಲ್ಲಿ ನಿರಾಸೆ; ಇಂದು ಭಾರತದ ಪ್ರದರ್ಶನ ಹೀಗಿತ್ತು
ರವಿ ದಹಿಯಾ, ಲೊವ್ಲಿನಾ ಬೊರ್ಗೊಹೈನ್, ಮಹಿಳಾ ಹಾಕಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Aug 04, 2021 | 8:08 PM

ಟೋಕಿಯೊ ಒಲಿಂಪಿಕ್ಸ್ -2020 ರಲ್ಲಿ ಭಾರತಕ್ಕೆ ಬುಧವಾರ ಅತ್ಯಂತ ಮಹತ್ವದ ದಿನವಾಗಿತ್ತು. ಈ ದಿನ, ಭಾರತವು ಕುಸ್ತಿ, ಬಾಕ್ಸಿಂಗ್, ಹಾಕಿಯಿಂದ ಪದಕಗಳನ್ನು ನಿರೀಕ್ಷಿಸಿತು. ಕುಸ್ತಿ ಮತ್ತು ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಒಳ್ಳೆಯ ಸುದ್ದಿ ಸಿಕ್ಕಿತು ಆದರೆ ಹಾಕಿಯಲ್ಲಿ ಭಾರತ ನಿರಾಶೆಗೊಂಡಿತು. ಮಹಿಳಾ ಹಾಕಿ ತಂಡವು ಸೆಮಿಫೈನಲ್ ನಲ್ಲಿ ಸೋತಿತು ಮತ್ತು ಇದರೊಂದಿಗೆ ಐತಿಹಾಸಿಕ ಚಿನ್ನ ಗೆಲ್ಲುವ ಕನಸು ಭಗ್ನಗೊಂಡಿತು. ಆದರೂ ಇನ್ನೂ ಕಂಚಿನ ಪದಕ ಗೆಲ್ಲುವ ಅವಕಾಶ ತಂಡಕ್ಕಿದೆ. ಕುಸ್ತಿಯಲ್ಲಿ ಪುರುಷ ಕುಸ್ತಿಪಟು ರವಿ ದಹಿಯಾ ಫೈನಲ್‌ಗೆ ತಲುಪುವ ಮೂಲಕ ಪದಕವನ್ನು ಖಚಿತಪಡಿಸಿದ್ದಾರೆ. ಅದೇ ಸಮಯದಲ್ಲಿ, ಮಹಿಳಾ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರಿಂದ ಕಂಚಿನ ಪದಕ ಬಂದಿತು. ಲೊವ್ಲಿನಾ ಸೆಮಿಫೈನಲ್‌ನಲ್ಲಿ ಸೋತರು ಮತ್ತು ಮಹಿಳಾ ತಂಡದಂತೆಯೇ ಚಿನ್ನದ ಪದಕ ಗೆಲ್ಲುವ ಕನಸು ಕೂಡ ಭಗ್ನಗೊಂಡಿತು.

ಅಥ್ಲೆಟಿಕ್ಸ್‌ನಲ್ಲಿ ನಿರೀಕ್ಷೆಯಂತೆ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಯಾವುದೇ ತೊಂದರೆಯಿಲ್ಲದೆ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅದೇ ಸಮಯದಲ್ಲಿ, ಇಂದಿನಿಂದನಪ್ರಾರಂಭವಾದ ಮಹಿಳಾ ಗಾಲ್ಫ್ ಭಾರತದ ಅದಿತಿ ಅಶೋಕ್, ತನ್ನ ಎರಡನೇ ಒಲಿಂಪಿಕ್ಸ್ ಆಡುತ್ತಾ, ಮೊದಲ ದಿನ ಬಲಿಷ್ಠ ಆಟ ತೋರಿದರು. ಬುಧವಾರ ಭಾರತದ ಪ್ರದರ್ಶನ ಹೇಗಿತ್ತು? ಇಲ್ಲಿದೆ ಮಾಹಿತಿ

ಬಾಕ್ಸಿಂಗ್‌ನಲ್ಲಿ ಕಂಚು ಗೆದ್ದ ಲವ್ಲಿನಾ ಭಾರತೀಯ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಈಗಾಗಲೇ ಸೆಮಿಫೈನಲ್ ತಲುಪುವ ಮೂಲಕ ಪದಕದ ಭರವಸೆ ಹುಟ್ಟಿಸಿದರು. ಆದರೆ ಲವ್ಲಿನಾ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಅಂತರದಿಂದ ಸೋತು ಕಂಚಿನ ಪದಕ ಗೆದ್ದರು.

ಕುಸ್ತಿಯಲ್ಲಿ ಗೆದ್ದ ರವಿ ಇಂದು ಭಾರತದ ಮೂವರು ಕುಸ್ತಿಪಟುಗಳು ಅಖಾಡಕ್ಕಿಳಿದಿದ್ದರು. ಅಂಶು ಮಲಿಕ್ ತನ್ನ ಸ್ಪರ್ಧೆಯನ್ನು ಮೊದಲು ಮಹಿಳಾ ವಿಭಾಗದಲ್ಲಿ ಆರಂಭಿಸಿದರು. 57 ಕೆಜಿ ತೂಕ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ಐರಿನಾ ಕುರಾಚಿಕಿನಾ ವಿರುದ್ಧ ಸೋತರು. ಆದಾಗ್ಯೂ, ಅಂಶುಗೆ ಇನ್ನೂ ಪದಕ ಗೆಲ್ಲುವ ಅವಕಾಶವಿದೆ.

ಕುಸ್ತಿಯಲ್ಲಿ ಅತಿದೊಡ್ಡ ಯಶಸ್ಸು ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಬಂದಿದ್ದು, ರವಿ ದಹಿಯಾ ಫೈನಲ್ ತಲುಪುವ ಮೂಲಕ ಪದಕ ಖಾತ್ರಿಪಡಿಸಿಕೊಂಡಿದ್ದಾರೆ. ರವಿ ಮೊದಲ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾದ ಆಸ್ಕರ್ ಅರ್ಬಾನಾ ಅವರನ್ನು 13-2 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದರ ನಂತರ, ಅವರು ಕ್ವಾರ್ಟರ್ ಫೈನಲ್‌ನಲ್ಲಿ ಬಲ್ಗೇರಿಯಾದ ಜಾರ್ಜಿ ವ್ಯಾಲೆಂಟಿನೋವ್ ಅವರನ್ನು 14-4ರಿಂದ ಸೋಲಿಸಿದರು ಮತ್ತು ಸೆಮಿಫೈನಲ್‌ಗಾಗಿ ಟಿಕೆಟ್ ಕಾಯ್ದಿರಿಸಿದರು. ಸೆಮಿಫೈನಲ್‌ನಲ್ಲಿ, ಅವರು ಕಜಾಕಿಸ್ತಾನದ ನುರಿಸ್ಲಾಮ್ ಅತ್ರಿನಾಘರ್ಚಿಯನ್ನು ಸೋಲಿಸಿ ರವಿ ಫೈನಲ್ ತಲುಪಿದರು. ರವಿ ಗುರುವಾರ ಚಿನ್ನದ ಪದಕಕ್ಕಾಗಿ ಜಾವೂರ್ ಯುವುಗೇವ್ ಅವರನ್ನು ಎದುರಿಸಲಿದ್ದಾರೆ.

ಅದೇ ಸಮಯದಲ್ಲಿ, ದೀಪಕ್ ಪೂನಿಯಾ ಪುರುಷರ 86 ಕೆಜಿ ತೂಕ ವಿಭಾಗದಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು, ಆದರೆ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ದೀಪಕ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ನೈಜೀರಿಯಾದ ಎಜಿಮೊರ್ ಇಕೆರೆಕೆಮೆ ಅವರನ್ನು 12-1ರಿಂದ ಸೋಲಿಸಿದ್ದರು. ಇದರ ನಂತರ, ಅವರು ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಜುಹೆನ್ ಲಿನ್ ಅವರನ್ನು 6-3 ಅಂತರದಿಂದ ಸೋಲಿಸಿ ಸೆಮಿಫೈನಲ್‌ಗೆ ಟಿಕೆಟ್ ಖಚಿತಪಡಿಸಿದರು. ದೀಪಕ್ ಸೆಮಿಫೈನಲ್‌ನಲ್ಲಿ ಡೇವಿಡ್ ಮಾರಿಸ್ ಟೇಲರ್ (ಯುಎಸ್‌ಎ) ವಿರುದ್ಧ ಸೋತರು. ಆದಾಗ್ಯೂ, ಅವರು ಇನ್ನೂ ಕಂಚಿನ ಪದಕದ ರೇಸ್‌ನಲ್ಲಿದ್ದಾರೆ.

ಅಥ್ಲೆಟಿಕ್ಸ್ ನಲ್ಲಿ ನೀರಜ್ ಪ್ರಬಲ ಆರಂಭ ನೀರಜ್ ಚೋಪ್ರಾ ಭಾರತದ ಕಡೆಯಿಂದ ಪದಕಕ್ಕಾಗಿ ಅತಿದೊಡ್ಡ ಸ್ಪರ್ಧಿಗಳಲ್ಲಿ ಒಬ್ಬರು. ಅವರು ಇಂದು ಅರ್ಹತೆಯಲ್ಲಿ ಆರಂಭಿಸಿದ ರೀತಿ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಅವರು 86.65 ಮೀಟರ್ ಎಸೆತದೊಂದಿಗೆ ಎ ಗುಂಪಿನಲ್ಲಿ ಫೈನಲ್‌ಗೆ ಅರ್ಹತೆ ಪಡೆದರು. ಮೊದಲ ಪ್ರಯತ್ನದಲ್ಲಿ ನೀರಜ್ ಈ ದೂರವನ್ನು ಕ್ರಮಿಸಿದರು, ಆದ್ದರಿಂದ ಎರಡನೇ ಪ್ರಯತ್ನದ ಅಗತ್ಯವಿಲ್ಲ. ಒಟ್ಟಾರೆ ಪಟ್ಟಿಯಲ್ಲಿ ನೀರಜ್ ಮೊದಲ ಸ್ಥಾನದಲ್ಲಿದ್ದಾರೆ. ಆತನನ್ನು ಹೊರತುಪಡಿಸಿ, ಇನ್ನೊಬ್ಬ ಭಾರತೀಯ ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್ ಕೂಡ ಅರ್ಹತೆಯಲ್ಲಿ ಭಾಗವಹಿಸಿದರೂ 76.40 ಮೀಟರ್ ಎಸೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರಿಗೆ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಗಾಲ್ಫ್‌ನಲ್ಲಿ ಮಿಶ್ರ ದಿನ ಇಂದಿನಿಂದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗಾಲ್ಫ್ ಆರಂಭವಾಗಿದೆ. ಭಾರತದ ಇಬ್ಬರು ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ರಿಯೋ ಒಲಿಂಪಿಕ್ಸ್ -2016 ರಲ್ಲಿ ಭಾಗವಹಿಸಿದ ಭಾರತದ ಅಗ್ರಮಾನ್ಯ ಮಹಿಳಾ ಆಟಗಾರ್ತಿಯರಲ್ಲಿ ಒಬ್ಬರಾದ ಅದಿತಿ ಅಶೋಕ್ ಜಂಟಿ ಎರಡನೇ ಸ್ಥಾನ ಪಡೆದರು. ಅವರು ಮೊದಲ ಸುತ್ತಿನಲ್ಲಿ 67 ಅಂಕಗಳನ್ನು ಗಳಿಸಿದರು. ಅದಿತಿ ಹೊರತಾಗಿ ಭಾರತದ ಯುವ ಆಟಗಾರ್ತಿ ದೀಕ್ಷಾ ದಾಗರ್ ಕೂಡ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಮೊದಲ ಸುತ್ತಿನಲ್ಲಿ 76 ಅಂಕಗಳನ್ನು ಗಳಿಸಿದರು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್