Tokyo Olympics: ಭಾರತಕ್ಕಿಂದು ಎರಡು ಪದಕದ ನಿರೀಕ್ಷೆ: ಹಾಕಿ ತಂಡದ ಮೇಲೆ ಎಲ್ಲರ ಕಣ್ಣು
ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತ ಮಹಿಳಾ ಹಾಕಿ ತಂಡ ಫೈನಲ್ಗೇರಲು ವಿಫಲವಾಯಿತು. ಬುಧವಾರ ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಭಾರತ ಇಂದು ಎರಡು ಪದಕಗಳನ್ನು ಬಾಜಿಕೊಳ್ಳುವ ಅವಕಾಶವಿದೆ. ರೆಸ್ಲರ್ ದೀಪಕ್ ಪುನಿಯಾ ಕಂಚಿನ ಪದಕಕ್ಕಾಗಿ ಗುರುವಾರ ಕಾದಾಡಲಿದ್ದಾರೆ. ಇನ್ನೊಂದೆಡೆ ಭಾರತ ಪುರುಷರ ಹಾಕಿ ತಂಡ ಜರ್ಮನಿ ವಿರುದ್ಧ ಹೋರಾಡಲಿದ್ದು, ಗೆದ್ದರೆ ಕಂಚಿನ ಪದಕವನ್ನು ತನ್ನದಾಗಿಸಿಕೊಳ್ಳಲಿದೆ.
ಇತ್ತ ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಭಾರತ ಮಹಿಳಾ ಹಾಕಿ ತಂಡ ಫೈನಲ್ಗೇರಲು ವಿಫಲವಾಯಿತು. ಬುಧವಾರ ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಆದರೆ, ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು, ಇನ್ನೊಂದು ಸೆಮಿ ಫೈನಲ್ನಲ್ಲಿ ಸೋಲುವ ತಂಡದ ವಿರುದ್ಧ ಪಂದ್ಯವಿದೆ. ಇದರಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದೆ.
ಇನ್ನೂ 57 ಕೆಜಿ ವಿಭಾಗದಲ್ಲಿ ಭಾರತದ ರೆಸ್ಲರ್ ರವಿ ದಾಹಿಯಾ ರೆಸ್ಇಂಗ್ ವಿಭಾಗದಲ್ಲಿ ಫೈನಲ್ ಹಂತಕ್ಕೇರಿದ ಎರಡನೇ ಭಾರತೀಯ ಆಟಗಾರ ಎನಿಸಿದ್ದಾರೆ. ಕಜಕಿಸ್ತಾನದ ನುರಿಸ್ಲಮ್ ಸನಯವ್ ವಿರುದ್ಧ ಗೆದ್ದು ಫೈನಲ್ ಹಂತಕ್ಕೆ ಕಾಲಿಟ್ಟಿದ್ದಾರೆ. ಮಂಗಳವಾರ ಫೈನಲ್ ಪಂದ್ಯ ನಡೆಯಲಿದ್ದು ಭಾರತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ಅವಕಾಶವಿದೆ.
ಆಗಸ್ಟ್ 5 ಭಾರತೀಯ ಆಟಗಾರರ ವೇಳಾಪಟ್ಟಿ:
ಅಥ್ಲೆಟಿಕ್ಸ್
ಪುರುಷರ 20 ಕಿಮೀ ರೇಸ್ ವಾಕ್ ಫೈನಲ್:
ಕೆಟಿ ಇರ್ಫಾನ್, ರಾಹುಲ್ ರೋಹಿಲ್ಲಾ, ಸಂದೀಪ್ ಕುಮಾರ್
ಮಧ್ಯಾಹ್ನ 1:00 ಗಂಟೆಗೆ
ಹಾಕಿ
ಪುರುಷರ ಕಂಚಿನ ಪದಕ ಪಂದ್ಯ
ಜರ್ಮನಿ vs ಭಾರತ – 7:00
ಕುಸ್ತಿ
ಮಹಿಳೆಯರ ಫ್ರೀಸ್ಟೈಲ್ 53 ಕೆಜಿ, 16ರ ಘಟ್ಟದ ಪಂದ್ಯ
ವಿನೇಶ್ ಫೋಗಟ್ vs ಸೋಫಿಯಾ ಮ್ಯಾಟ್ಸನ್
ಬೆಳಿಗ್ಗೆ 8:00 ಗಂಟೆಗೆ ಆರಂಭ
ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ಕ್ವಾರ್ಟರ್ ಫೈನಲ್(ವಿನೇಶ್ ಫೋಗಟ್ ಗೆದ್ದರೆ)
ಮಹಿಳೆಯರ ಫ್ರೀಸ್ಟೈಲ್ 53 ಕೆಜಿ ಸೆಮಿಫೈನಲ್(ವಿನೇಶ್ ಫೋಗಟ್ ಗೆದ್ದರೆ)
ಮಹಿಳೆಯರ ಫ್ರೀಸ್ಟೈಲ್ 57 ಕೆಜಿ ರಿಪೇಜ್
ಅಂಶು ಮಲಿಕ್ vs ವಲೇರಿಯಾ ಕೊಬ್ಲೋವಾ
ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್ ಪಂದ್ಯ
ರವಿ ಕುಮಾರ್ ದಹಿಯಾ vs ಜೌರ್ ಉಗುವ್
ಪುರುಷರ ಫ್ರೀಸ್ಟೈಲ್ 86 ಕೆಜಿ ಕಂಚಿನ ಪದಕ ಪಂದ್ಯ
ದೀಪಕ್ ಪುನಿಯಾ vs ರಿಪೀಚೇಜ್ ವಿಜೇತ
Tokyo Olympics: ಫೈನಲ್ಗೇರುವ ಭಾರತ ಮಹಿಳಾ ಹಾಕಿ ತಂಡದ ಕನಸು ಭಗ್ನ: ಸೆಮೀಸ್ನಲ್ಲಿ ಅರ್ಜೇಂಟಿನಾ ವಿರುದ್ಧ ಸೋಲು
(Tokyo Olympics 2021 India Manpreet Singhs men fight for bronze Ravi eyes historic gold)