Tokyo Olympics: ವಿನೇಶ್ ಪೋಗತ್ ಆಕ್ರಮಣಕಾರಿ ಆಟ: ಕ್ವಾರ್ಟರ್ ಫೈನಲ್ಗೆ ಎಂಟ್ರಿ
Vinesh Phogat: ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪೋಗತ್ ಮೊದಲ ಬ್ರೇಕ್ನಲ್ಲಿಯೇ 5-0 ಮುನ್ನಡೆ ಸಾಧಿಸಿದರು.
ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತದ ರಸ್ಲರ್ ವಿನೇಶ್ ಪೋಗತ್ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ವೀಡನ್ನ ಸೋಫಿಯಾ ಮಾಟ್ಸನ್ ವಿರುದ್ಧ 7-1 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪೋಗತ್ ಮೊದಲ ಬ್ರೇಕ್ನಲ್ಲಿಯೇ 5-0 ಮುನ್ನಡೆ ಸಾಧಿಸಿದರು. ನಂತರದಲ್ಲಿ ಎದುರಾಳಿಗೆ ಒಂದು ಅಂಕ ಬಿಟ್ಟುಕೊಟಟ್ಟಿದ್ದು ಬಿಟ್ಟರೆ ಪೋಗತ್ ತಮ್ಮ ಶೈಲಿಯಲ್ಲಿ ಆಟವನ್ನು ಆಡಿ ಅಮೋಘ ಗೆಲುವು ಕಂಡಿರು.
ಪೋಗತ್ ಅವರಿಗೆ ಇದು ಎರಡನೇ ಒಲಿಂಪಿಕ್ಸ್. ಕಳೆದ ಬಾರಿ ರಿಯೋ ಒಲಿಂಪಿಕ್ಸ್ನಲ್ಲಿ ಅವರು ಪಾಲ್ಗೊಂಡಿದ್ದರು. ಸೋಫಿಯಾ ಈಗಾಗಲೇ ಮೂರು ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದಾರೆ.
Published On - 8:17 am, Thu, 5 August 21