ಭಾರತದ ರವಿ ದಹಿಯಾ ಟೋಕಿಯೊ ಒಲಿಂಪಿಕ್ಸ್ ನ ಕುಸ್ತಿ ವಿಭಾಗದಲ್ಲಿ ಪುರುಷರ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕದ ಭರವಸೆಯನ್ನು ಮೂಡಿಸಿದ್ದಾರೆ. ಮತ್ತೊಂದೆಡೆ, ಭಾರತದ ದೀಪಕ್ ಪೂನಿಯಾ ಪುರುಷರ 86 ಕೆಜಿ ವಿಭಾಗದಲ್ಲಿ ಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಅವರು ಕೆಲವೇ ನಿಮಿಷಗಳಲ್ಲಿ ಅಮೆರಿಕದ ಕುಸ್ತಿಪಟುವಿನ ವಿರುದ್ಧದ ಪಂದ್ಯದಲ್ಲಿ ಸೋಲೊಪ್ಪಿಕೊಂಡರು. ಅಮೆರಿಕದ ಕುಸ್ತಿಪಟು ಭಾರತದ ದೀಪಕ್ ಪೂನಿಯಾ ವಿರುದ್ಧ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ 10-0 ಅಂತರದಿಂದ ಗೆಲುವು ಸಾಧಿಸಿದರು.
ತನ್ನ ಮೊದಲ ಒಲಿಂಪಿಕ್ಸ್ ಆಡುತ್ತಿರುವ ಪೂನಿಯಾ 86 ಕೆಜಿ ವಿಭಾಗದ ಸೆಮಿಫೈನಲ್‌ಗೆ ತಲುಪಿದ್ದರು. ಡಬಲ್ ಜೂನಿಯರ್ ವಿಶ್ವ ಚಾಂಪಿಯನ್ 2018 ರ ಹಿರಿಯ ವಿಶ್ವ ಚಾಂಪಿಯನ್ ಡೇವಿಡ್ ಟೇಲರ್ ವಿರುದ್ಧ ಪೂನಿಯಾ ಹೋರಾಡಬೇಕಿತ್ತು. ಟೇಲರ್ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅತ್ಯಂತ ನಿಪುಣ ಕುಸ್ತಿಪಟುಗಳಲ್ಲಿ ಒಬ್ಬರು. ಆದರೆ ಮಕುಹರಿ ಮೆಸ್ಸೆ ಹಾಲ್ ಎ ನಲ್ಲಿ ಬುಧವಾರ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಡೇವಿಡ್ ಟೇಲರ್ ವಿರುದ್ಧ ಪುರುಷರ ಫ್ರೀಸ್ಟೈಲ್ 86 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಗ್ರ್ಯಾಪ್ಲರ್ ದೀಪಕ್ ಪುನಿಯಾ 10-0 ಅಂತರದಿಂದ ಸೋಲು ಅನುಭವಿಸಿದರು.
ಟೇಲರ್ ಈಗ ಗುರುವಾರ ಬೆಳ್ಳಿ ಅಥವಾ ಚಿನ್ನಕ್ಕಾಗಿ ಸ್ಪರ್ಧಿಸಲಿದ್ದಾರೆ. ಬುಧವಾರ ಮುಂಜಾನೆ, ಭಾರತದ ಗ್ರ್ಯಾಪ್ಲರ್ ರವಿ ಕುಮಾರ್ ದಹಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್‌ಗೆ ಪ್ರವೇಶಿಸಿದ್ದಾರೆ. ದಹಿಯಾ ಈಗ ಗುರುವಾರ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. 2012 ರಲ್ಲಿ ಸುಶೀಲ್ ನಂತರ ಫೈನಲ್ ಪ್ರವೇಶಿಸಿದ ಮೊದಲ ಸ್ಪರ್ಧಿಯಾಗಿದ್ದಾರೆ. ಮೊದಲ ಅವಧಿಯಲ್ಲಿ ರವಿ ದಹಿಯಾ 2-1 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾದರು ಮತ್ತು ಎರಡನೇ ಅವಧಿಯಲ್ಲಿ ಒತ್ತಡವು ಸಂಪೂರ್ಣವಾಗಿ ಸನಾಯೇವ್ ಮೇಲೆ ಇತ್ತು. ಅವರು ಪುನರಾಗಮನ ಮಾಡಿದರು, ಆದರೆ ದಹಿಯಾ ವಿರುದ್ಧ ಅವರಿಗೆ ಗೆಲ್ಲಲಾಗಲಿಲ್ಲ.