ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಊಹಿಸಲಾಗದ ರೀತಿ ಕಮ್ಬ್ಯಾಕ್ ಮಾಡಿರುವ ಭಾರತೀಯ ಮಹಿಳಾ ಹಾಕಿ ತಂಡ ಈಗ ಇತಿಹಾಸ ನಿರ್ಮಿಸುವತ್ತ ಚಿತ್ತ ನೆಟ್ಟಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯ ಸೆಮಿಫೈನಲ್ ಪ್ರವೇಶಿಸಿ ವಿಶೇಷ ಸಾಧನೆ ಮಾಡಿರುವ ಮಹಿಳಾ ತಂಡ ನಾಲ್ಕರ ಘಟ್ಟದ ಪಂದ್ಯದಲ್ಲಿ ಅರ್ಜೇಂಟಿನಾ ಎದುರು ಆಡಲಿದ್ದು ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭವಾಗಲಿದೆ.
ಗುಂಪು ಹಂತದ ಪಂದ್ಯದಲ್ಲಿ ಮೊದಲ 3 ಪಂದ್ಯ ಸೋತಿದ್ದ ಭಾರತ ಆ ಬಳಿಕ ಸತತ 2 ಪಂದ್ಯ ಗೆದ್ದು ಭರ್ಜರಿ ಕಮ್ಬ್ಯಾಕ್ ಮಾಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಇಲ್ಲಿ 3 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಸ್ಪ್ರೇಲಿಯಾವನ್ನು 1-0 ಗೋಲಿನಿಂದ ಕಟ್ಟಿಹಾಕಿ ಸೆಮಿ ಫೈನಲ್ಗೆ ಪ್ರವೇಶ ಪಡೆದು ಜಗತ್ತೇ ಬೆರಗಾಗುವಂತೆ ಮಾಡಿತು.
💙 𝐌𝐀𝐓𝐂𝐇𝐃𝐀𝐘 🏑
The Indian Women’s Hockey Team take on Argentina in their Semi-Final game. 💪
📍 Oi Hockey Stadium, North Pitch 🗓️ 4 August 🕞 3:30 PM IST#HaiTayyar #IndiaKaGame #Tokyo2020 #TeamIndia #StrongerTogether #HockeyInvites #WeAreTeamIndia #Hockey pic.twitter.com/vSWRjQDsqz
— Hockey India (@TheHockeyIndia) August 4, 2021
ಈಗ ನಡೆಯಲಿರುವ ಸೆಮಿಫೈನಲ್ ಪಂದ್ಯ ಭಾರತಕ್ಕೆ ಅಷ್ಟೊಂದು ಸುಲಭವಿಲ್ಲ. ಎರಡನೇ ಶ್ರೇಯಾಂಕದ ಅರ್ಜೇಂಟಿನಾವನ್ನು ಮಣಿಸಲು ರಾಣಿ ಪಡೆ ವಿಶೇಷ ಕಾರ್ಯತಂತ್ರದೊಂದಿಗೆ ಕಣಕ್ಕಿಳಿಯಬೇಕಿದೆ. ಅರ್ಜೆಂಟೀನಾ ಒಟ್ಟು 2 ಬಾರಿ ಒಲಿಂಪಿಕ್ಸ್ ಬೆಳ್ಳಿ ಗೆದ್ದ ಸಾಧನೆ ಮಾಡಿದೆ.
ಮೇಲ್ನೋಟಕ್ಕೆ ಅರ್ಜೇಂಟಿನಾ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಅಂಕಿ-ಅಂಶ ಕೂಡ ಅರ್ಜೇಂಟಿನಾ ಪರವಾಗಿದೆ. ಹೀಗಾಗಿ ಭಾರತ ತಂಡ ಆಸ್ಪ್ರೇಲಿಯಾ ವಿರುದ್ಧ ತೋರಿದ ಪ್ರದರ್ಶನವನ್ನು ಮೀರಿ ಆಟವನ್ನು ಆಡಬೇಕಿದೆ. 3:30ಕ್ಕೆ ಪಂದ್ಯ ಆರಂಭವಾಗಲಿದೆ.
Lovlina Borgohain: ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಯುವ ಬಾಕ್ಸರ್ ಲವ್ಲಿನಾ
Deepak Punia: ಸೆಮಿ ಫೈನಲ್ಗೆ ಲಗ್ಗೆಯಿಟ್ಟ ರವಿ ದಹಿಯಾ, ದೀಪಕ್ ಪುನಿಯಾ: ಭಾರತಕ್ಕೆ ಪದಕದ ನಿರೀಕ್ಷೆ
(Tokyo Olympics India will take on Argentina in the womens hockey semi-final later today from 3 30 PM)