Ravi Dahiya: ಕುಸ್ತಿಯಲ್ಲಿ ಇತಿಹಾಸ ರಚಿಸಿದ ರವಿಕುಮಾರ್: ಭಾರತಕ್ಕೆ ಮತ್ತೊಂದು ಪದಕ ಖಚಿತ
Tokyo Olympics: ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆದ್ದು ಭಾರತಕ್ಕೆ ಮಗದೊಂದು ಪದಕ ಖಾತ್ರಿಪಡಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತದ ಖ್ಯಾತ ಕುಸ್ತಿತಿಪಟು ರವಿಕುಮಾರ್ ಇತಿಹಾಸ ನಿರ್ಮಿಸಿದ್ದಾರೆ. ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆದ್ದು ಭಾರತಕ್ಕೆ ಮಗದೊಂದು ಪದಕ ಖಾತ್ರಿಪಡಿಸಿದ್ದಾರೆ.
ರವಿ ಅವರು ಪುರುಷರ 57 ಕೆ.ಜಿ. ವಿಭಾಗದ ಫ್ರೀ ಸ್ಟ್ರೈಲ್ ಕುಸ್ತಿ ಸ್ಪರ್ಧೆಯಲ್ಲಿ ಕೊಲಂಬಿಯಾದ ಅರ್ಬಾನೊ ಟೈಗರೋಸ್ ಎದುರು 13-2 ಅಂಕಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಅಮೋಘ ಗೆಲುವು ಸಾಧಿಸಿ ಸೆಮೀಸ್ಗೆ ಅರ್ಹತೆಗಿಟ್ಟಿಸಿಕೊಂಡಿದ್ದರು. ಇದೀಗ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರೀ ಹಿನ್ನಡೆ ಅನುಭವಿಸಿ ಕೊನೆಯ ಕ್ಷಣದಲ್ಲಿ ಕಮ್ಬ್ಯಾಕ್ ಮಾಡಿ ಅಮೋಘ ಗೆಲುವು ಕಂಡಿದ್ದಾರೆ.
ನಾಲ್ಕನೇ ಶ್ರೇಯಾಂಕ ಹೊಂದಿರುವ ರವಿ ಕುಮಾರ್ ದಹಿಯಾ ಸನವ್ಯಾವ್ ಎದುರು ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಹೋರಾಟ ನಡೆಸುವ ಮೂಲಕ ಫೈನಲ್ ಪ್ರವೇಶಿಸಿದರು. ಆರಂಭದಿಂದಲೇ ಕಜಕಿಸ್ತಾನದ ಕುಸ್ತಿಪಟು 9-2 ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಪೈಪೋಟಿ ನೀಡುವ ಮೂಲಕ ಫಲಿತಾಂಶ ತನ್ನತ್ತ ವಾಲುವಂತೆ ಮಾಡಿಕೊಳ್ಳುವಲ್ಲಿ ದಹಿಯಾ ಯಶಸ್ವಿಯಾಗಿದ್ದಾರೆ.
From trailing 2-9 to pinning down his opponent, what a comeback for Ravi Kumar! ?#GoforGold champ! ?#Wrestling #Tokyo2020 #Olympics #AamchiCity ? pic.twitter.com/RkFOSAnCRv
— Mumbai City FC (@MumbaiCityFC) August 4, 2021
ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಕೆ.ಡಿ ಜಾಧವ್, ಸುಶೀಲ್ ಕುಮಾರ್, ಯೋಗೇಶ್ವರ್ ದತ್ ಮತ್ತು ಸಾಕ್ಷಿ ಮಲಿಕ್ ಪದಕ ಗೆಲ್ಲುತ್ತಿರುವ ಐದನೇ ಭಾರತೀಯ ಕುಸ್ತಿಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಸುಶೀಲ್ ಕುಮಾರ್ ಬಳಿಕ ಒಲಿಂಪಿಕ್ ಫೈನಲ್‌ಗೆ ಅರ್ಜತೆ ಪಡೆದುಕೊಂಡ ಭಾರತದ ಎರಡನೇ ಕುಸ್ತಿಪಟು ರವಿಕುಮಾರ್ ಆಗಿದ್ದಾರೆ.
ರವಿಕುಮಾರ್ ಅವರು ಮೊದಲ ರೌಂಡ್ನಲ್ಲಿ 0-1 ಹಾಗೂ ದ್ವಿತೀಯ ಸುತ್ತಿನಲ್ಲಿ 2-9ರಲ್ಲಿ ಹಿನ್ನಡೆ ಅನುಭವಿಸಿದರು. ಈ ಸಂದರ್ಭ ರವಿಕುಮಾರ್ ಸೋಲು ಖಚಿತ ಎಂದೇ ನಂಬಲಾಗಿತ್ತು. ಆದರೆ, ಕೊನೆಯ ರೌಂಡ್ನಲ್ಲಿ ಯಾರೂ ಊಹಿಸಲಾಗದ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ ರವಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.
(Tokyo Olympics 2021 Ravi Dahiya goes through to Gold medal match)
Published On - 3:24 pm, Wed, 4 August 21