ಶಾರುಖ್ ಮಗನ ಮೇಲೆ ನಡೆದ ದಾಳಿ ಒಂದು ಷಡ್ಯಂತ್ರವೇ? ಎನ್ಸಿಬಿ ಅಧಿಕಾರಿಗಳ ಮೇಲೆ ಮೂಡಿತು ಶಂಕೆ
ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಎನ್ಬಿಸಿ ಮಾಡಿದ ದಾಳಿಯ ಹಿಂದೆ ರಾಜಕೀಯದ ಉದ್ದೇಶ ಇತ್ತು ಎಂಬ ಆರೋಪ ಕೇಳಿಬಂದಿದೆ. ಆ ಬಗ್ಗೆ ಈಗ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇಲೆ ಎನ್ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಬೇಕಾಯಿತು. ಆದರೆ ಈಗ ಆ ದಾಳಿ ಬಗ್ಗೆಯೇ ಕೆಲವರಿಗೆ ಅನುಮಾನ ಮೂಡಿದೆ. ರಾಯಕೀಯ ಪ್ರೇರಿತವಾಗಿ ಶಾರುಖ್ ಮಗನ ಮೇಲೆ ನಡೆದ ಈ ದಾಳಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖಂಡ ನವಾಬ್ ಮಲಿಕ್ ಈ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ದಾಳಿಯ ನೇತೃತ್ವ ವಹಿಸಿದ್ದ ಅಧಿಕಾರಿ ಸಮೀರ್ ವಾಂಖೆಡೆ ಮೇಲೆ ಅನುಮಾನ ಮೂಡುವಂತಾಗಿದೆ.
‘ದಾಳಿ ನಡೆದ ದಿನವೇ ಬಿಜೆಪಿಗೆ ಸಂಬಂಧಿಸಿದ ವ್ಯಕ್ತಿಗಳು ಎನ್ಸಿಬಿ ಕಚೇರಿಗೆ ಭೇಟಿ ನೀಡಿದ್ದರು. ದಾಳಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಮೀರ್ ವಾಂಖಡೆ ಅವರು 8ರಿಂದ 10 ಜನರನ್ನು ಅರೆಸ್ಟ್ ಮಾಡಿದ್ದೇವೆ ಅಂತ ಹೇಳಿದ್ದರು. ಅರೆಸ್ಟ್ ಮಾಡಿದವರ ಬಗ್ಗೆ ಖಚಿತ ಲೆಕ್ಕ ಅವರಿಗೆ ಯಾಕೆ ಇರಲಿಲ್ಲ. 8 ಜನರನ್ನು ಅರೆಸ್ಟ್ ಮಾಡಿ, ಮತ್ತೂ ಇಬ್ಬರನ್ನು ಇದರಲ್ಲಿ ಸಿಕ್ಕಿ ಹಾಕಿಸುವುದು ಅವರ ಪ್ಲ್ಯಾನ್ ಆಗಿತ್ತಾ’ ಎಂದು ಟ್ವೀಟ್ ಮಾಡುವ ಮೂಲಕ ನವಾಬ್ ಮಲಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
‘ನನ್ನ ಮಗ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್; ಇಲ್ಲಿದೆ ಶಾಕಿಂಗ್ ವಿಡಿಯೋ
ಶಾರುಖ್ ಪುತ್ರನಿಗೆ ಎನ್ಸಿಬಿ ಫುಲ್ ಗ್ರಿಲ್; ಆರ್ಯನ್ ಖಾನ್ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು