AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗನಿಗಾಗಿ ನಿದ್ದೆ, ಊಟ ತ್ಯಜಿಸಿದ ಶಾರುಖ್​ ಖಾನ್​; ಹೀಗಾದರೆ ಫಿಟ್​ನೆಸ್​ ಗತಿಯೇನು?

ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಕ್ರೂಸ್​ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಆರ್ಯನ್ ಖಾನ್​ ಬಂಧನಕ್ಕೆ ಒಳಗಾದರು. ಅವರನ್ನು ಎನ್​ಸಿಬಿ ವಶಕ್ಕೆ ಪಡೆಯಿತು.

ಮಗನಿಗಾಗಿ ನಿದ್ದೆ, ಊಟ ತ್ಯಜಿಸಿದ ಶಾರುಖ್​ ಖಾನ್​; ಹೀಗಾದರೆ ಫಿಟ್​ನೆಸ್​ ಗತಿಯೇನು?
ಶಾರುಖ್​ ಕುಟುಂಬ
TV9 Web
| Edited By: |

Updated on: Oct 10, 2021 | 3:52 PM

Share

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಅವರು ಅರೆಸ್ಟ್ ಆಗಿ ವಾರ ಕಳೆದಿದೆ. ಅವರನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನದಲ್ಲಿ ಶಾರುಖ್​ ಖಾನ್​ ಇದ್ದಾರೆ. ಆದರೆ, ಅವರಿಗೆ ಜಾಮೀನು ಮಾತ್ರ ಸಿಗುತ್ತಿಲ್ಲ. ಮೊದಲು ಎನ್​ಸಿಬಿ ವಶದಲ್ಲಿದ್ದ ಆರ್ಯನ್​ ಖಾನ್​ ನಂತರ ನ್ಯಾಯಾಂಗ ಬಂಧನಕ್ಕೆ ಒಳಗಾದರು. ಮುಂಬೈ ಕೋರ್ಟ್​ನಲ್ಲಿ ಆರ್ಯನ್​ಗೆ ಜಾಮೀನು ನಿರಾಕರಿಸಲಾಯಿತು. ಇದು ಶಾರುಖ್​ ಖಾನ್​ಗೆ ಟೆನ್ಶನ್​ ತಂದಿದೆ.

ಅಕ್ಟೋಬರ್ 2ರಂದು ಮುಂಬೈನ ಐಷಾರಾಮಿ ಕ್ರೂಸ್​ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಆರ್ಯನ್ ಖಾನ್​ ಬಂಧನಕ್ಕೆ ಒಳಗಾದರು. ಅವರನ್ನು ಎನ್​ಸಿಬಿ ವಶಕ್ಕೆ ಪಡೆಯಿತು. ಕೆಲ ದಿನಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಇದಾದ ನಂತರ ಆರ್ಯನ್​ಗೆ ಕಿಲ್ಲಾ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರ್ಯನ್​ ಪರ ವಕೀಲರಾದ ಸತೀಶ್​ ಮಾನೇಶಿಂಧೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ.

ಇದು ಕೋರ್ಟ್ ವಿಚಾರ ಆದ ಕಾರಣ ಶಾರುಖ್​ ಖಾನ್​ ಪ್ರಭಾವ ಬೀರಲು ಸಾಧ್ಯವಿಲ್ಲ. ಹೀಗಾಗಿ, ಅವರು ಅಸಹಾಯಕರಾಗಿದ್ದಾರೆ. ​ಇನ್ನು, ಶಾರುಖ್​ ತುಂಬಾನೇ ಸಿಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ. ಶಾರುಖ್​ಗೆ ನಿದ್ದೆ ಬರುತ್ತಿಲ್ಲ. ಅವರು ಡಯಟ್​ಅನ್ನು ಫಾಲೋ ಮಾಡುತ್ತಿಲ್ಲ. ಇದು ಗೌರಿ ಖಾನ್​ಗೂ ತಲೆಬಿಸಿ ತಂದಿದೆ. ಮಗನ ಬಗ್ಗೆ ಚಿಂತಿಸಬೇಕೋ ಅಥವಾ ಪತಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕೋ ಎನ್ನುವ ಗೊಂದಲದಲ್ಲಿ ಅವರಿದ್ದಾರೆ. ಗೌರಿ ಖಾನ್​ ಅವರು ಮಾಧ್ಯಮದ ಮುಂದೆ ಬರುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ.

ಆರ್ಯನ್​ ಮತ್ತು ಇತರ ಆರೋಪಿಗಳನ್ನು ಆರ್ಥರ್​ ರೋಡ್​ ಜೈಲಿಗೆ ಕಳುಹಿಸಲಾಗಿದೆ. ಜೈಲಿನ ನಿಯಮದ ಪ್ರಕಾರ 2-5 ದಿನಗಳ ಕಾಲ ಇಲ್ಲಿನ ಸೆಲ್​ನಲ್ಲಿ ಕ್ವಾರಂಟೈನ್​ ಆಗಬೇಕು. ಕೊವಿಡ್​ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿದ್ದರೂ ಕ್ವಾರಂಟೈನ್​ ಆಗುವುದು ಕಡ್ಡಾಯವಾಗಿದೆ. ಜೈಲಿನಲ್ಲಿ ಇವರಿಗೆ ಸಾಮಾನ್ಯ ಅಡುಗೆಯನ್ನೇ ನೀಡಲಾಗುತ್ತದೆ. ಇನ್ನು, ನಿದ್ರಿಸೋಕೆ ಸಾಮಾನ್ಯ ವ್ಯವಸ್ಥೆ ಇರಲಿದೆ. ಇದು ಶಾರುಖ್​ ಅವರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಇದನ್ನೂ ಓದಿ: ‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’​​; ಶಾರುಖ್​ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್​

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ