‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’​​; ಶಾರುಖ್​ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್​

ಶಾರುಖ್​ ಖಾನ್​ ಹಾಗೂ ಸಲ್ಮಾನ್​ ಖಾನ್​ ನಡುವೆ ವೈಮನಸ್ಸು ಬೆಳೆದಿತ್ತು. ಆದರೆ, ಕಾಲಾಂತರದಲ್ಲಿ ಇಬ್ಬರ  ನಡುವೆ ಇದ್ದ ದ್ವೇಷ ಕರಗಿ ಫ್ರೆಂಡ್​ಶಿಪ್​ ಬೆಳೆದಿತ್ತು. ಇಂಡಸ್ಟ್ರಿಯಲ್ಲಿ ಮತ್ತೆ ಇಬ್ಬರೂ ಗೆಳೆಯರಾದರು.

‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’​​; ಶಾರುಖ್​ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್​
ಆರ್ಯನ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 09, 2021 | 6:55 PM

ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಡ್ರಗ್​ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅಲ್ಲಿಯವರೆಗೆ ಅವರು ಜೈಲಿನಲ್ಲಿರೋದು ಅನಿವಾರ್ಯವಾಗಿದೆ. ಆರ್ಯನ್​ ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಮೊದಲು ಶಾರುಖ್​ ಅವರನ್ನು ಭೇಟಿ ಮಾಡಿದ್ದು ಸಲ್ಮಾನ್​ ಖಾನ್​​. ಅವರು ರಾತ್ರಿ ವೇಳೆ ಶಾರುಖ್​ ಮನೆಗೆ ತೆರಳಿ ಮಾತುಕತೆ ಮಾಡಿ ಬಂದಿದ್ದರು. ‘ನನ್ನ ಕುಟುಂಬ ಸಂಕಷ್ಟದಲ್ಲಿದ್ದಾಗ ಸಲ್ಲು ಯಾವಾಗಲೂ ಸಹಾಯಕ್ಕೆ ಬರುತ್ತಾರೆ’ ಎಂದು ಶಾರುಖ್​​ ಖಾನ್​ ಹೇಳಿದ ಹಳೆಯ ವಿಡಿಯೋ ಒಂದು ಈಗ ವೈರಲ್​ ಆಗುತ್ತಿದೆ.

ಶಾರುಖ್​ ಖಾನ್​ ಹಾಗೂ ಸಲ್ಮಾನ್​ ಖಾನ್​ ನಡುವೆ ವೈಮನಸ್ಸು ಬೆಳೆದಿತ್ತು. ಆದರೆ, ಕಾಲಾಂತರದಲ್ಲಿ ಇಬ್ಬರ  ನಡುವೆ ಇದ್ದ ದ್ವೇಷ ಕರಗಿ ಫ್ರೆಂಡ್​ಶಿಪ್​ ಬೆಳೆದಿತ್ತು. ಇಂಡಸ್ಟ್ರಿಯಲ್ಲಿ ಮತ್ತೆ ಇಬ್ಬರೂ ಗೆಳೆಯರಾದರು. ಈಗ ಸಲ್ಲು ಸಿನಿಮಾದಲ್ಲಿ ಶಾರುಖ್​ ಹಾಗೂ ಶಾರುಖ್​ ಸಿನಿಮಾದಲ್ಲಿ ಸಲ್ಲು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಪಠಾಣ್​ ಸಿನಿಮಾದಲ್ಲಿ ಸಲ್ಲು ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಅವರು ಸಂಭಾವನೆ ಕೂಡ ಪಡೆಯುತ್ತಿಲ್ಲ ಎಂದು ವರದಿಯಾಗಿದೆ. ಇವೆಲ್ಲವುಗಳ ಮಧ್ಯೆ ಇವರ ಹಳೆಯ ವಿಡಿಯೋ ವೈರಲ್​ ಆಗುತ್ತಿದೆ.

ಶಾರುಖ್​ ಹಾಗೂ ಸಲ್ಮಾನ್​ ಖಾನ್​ 2018ರಲ್ಲಿ ವೇದಿಕೆ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ‘ನಿಮ್ಮ ಕಷ್ಟ ಮತ್ತು ಸುಖ ಎರಡಕ್ಕೂ ಆಗುವವರು ಯಾರಾದರೂ ಇದಾರಾ’ ಎಂದು ಶಾರುಖ್​ ಅವರನ್ನು ಪ್ರಶ್ನೆ ಮಾಡಿದರು ಸಲ್ಮಾನ್​. ಇದಕ್ಕೆ ಶಾರುಖ್​ ಉತ್ತರ ನೀಡಿದರು.  ‘ನಾನು ಸಮಸ್ಯೆಯಲ್ಲಿದ್ದರೆ, ನಾನು ಎನ್ನುವುದಕ್ಕಿಂತ ನನ್ನ ಕುಟುಂಬ ಸಮಸ್ಯೆಯಲ್ಲಿದ್ದರೆ ನೀವಿದ್ದೀರಿ’ ಎಂದು ಹೇಳಿದ್ದರು ಕಿಂಗ್​ ಖಾನ್​. ಈ ವಿಡಿಯೋ ಈಗ ಮತ್ತೆ ವೈರಲ್​ ಆಗಿದೆ.

ಶಾರುಖ್​ ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಅವರ ಮನೆಗೆ ತೆರಳಿದ್ದು ಸಲ್ಮಾನ್​ ಖಾನ್​. ಈ ಕಾರಣಕ್ಕೆ ಅನೇಕರು ‘ಸಲ್ಮಾನ್​ ನೀವು ನಿಮ್ಮ ಮಾತನ್ನು ಉಳಿಸಿಕೊಂಡಿದ್ದೀರಿ’ ಎಂದು ಹೇಳಿದ್ದಾರೆ. ಈ ವಿಡಿಯೋಗೆ ಭರಪೂರ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ಶಾರುಖ್​ ಮಗನ ಮೇಲೆ ನಡೆದ ದಾಳಿ ಒಂದು ಷಡ್ಯಂತ್ರವೇ? ಎನ್​ಸಿಬಿ ಅಧಿಕಾರಿಗಳ ಮೇಲೆ ಮೂಡಿತು ಶಂಕೆ

ಶಾರುಖ್​ ಮಗ ಆರ್ಯನ್​ ಖಾನ್​ ಜೈಲಿನಲ್ಲಿ ಈ ನಿಯಮ ಪಾಲಿಸಲೇಬೇಕು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ