750 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್​ ನಟರ ಸಂಭಾವನೆ 75 ಕೋಟಿ

750 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್​ ನಟರ ಸಂಭಾವನೆ 75 ಕೋಟಿ
ನಿತೇಶ್​ ತಿವಾರಿ

ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಜೆಟ್​ 750 ಕೋಟಿ ಮೀರಲಿದೆ ಎನ್ನಲಾಗಿದೆ. ರಾಮಾಯಣ ಸಿನಿಮಾ ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷೆಗಳಿಗೂ ಡಬ್​ ಆಗಿ ತೆರೆಕಾಣಲಿದೆ.

TV9kannada Web Team

| Edited By: Rajesh Duggumane

Oct 09, 2021 | 2:28 PM

ರಾಮಾಯಣ ಹಾಗೂ ಮಹಾಭಾರತವನ್ನು ಆಧರಿಸಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಹಾಗೂ ಸಿನಿಮಾಗಳು ಸಿದ್ಧವಾಗಿವೆ. ಈ ಮಹಾಕಾವ್ಯಗಳ ಕಥೆಯ ಒಂದೆಳೆ ಇಟ್ಟುಕೊಂಡು ಸಿನಿಮಾ ಸಿದ್ಧಪಡಿಸಿದ ಉದಾಹರಣೆಯೂ ಇದೆ. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್​ ನಟರನ್ನು ಇಟ್ಟುಕೊಂಡು ಈ ರೀತಿಯ ಸಿನಿಮಾಗಳನ್ನು ಮಾಡಲಾಗುತ್ತಿದೆ. ಈಗ ಬಾಲಿವುಡ್​ ಅಂಗಳದಲ್ಲಿ ಅಂಥದ್ದೇ ಸಿನಿಮಾ ರೆಡಿ ಆಗುತ್ತಿದೆ. ಇದರ ಬಜೆಟ್​ ಬರೋಬ್ಬರಿ 750 ಕೋಟಿ ರೂಪಾಯಿ ಅನ್ನೋದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ನಿತೇಶ್​ ತಿವಾರಿ ಅವರು ರಾಮಾಯಣ ಕಥೆ ಆಧರಿಸಿ ಸಿನಿಮಾ ನಿರ್ದೇಶನ ಮಾಡೋಕೆ ರೆಡಿ ಆಗಿದ್ದಾರೆ. ಮಧು ಮಂತೆನಾ ಅವರು ಇದನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಜೆಟ್​ 750 ಕೋಟಿ ಮೀರಲಿದೆ ಎನ್ನಲಾಗಿದೆ.

ಹೃತಿಕ್​ ರೋಷನ್​ ಹಾಗೂ ರಣಬೀರ್​ ಕಪೂರ್​ಗೆ ಬಾಲಿವುಡ್​ನಲ್ಲಿ ಭಾರೀ ಬೇಡಿಕೆ ಇದೆ. ಇವರು ದಕ್ಷಿಣ ಭಾರತದ ಸಿನಿಪ್ರಿಯರಿಗೂ ಪರಿಚಯ. ರಾಮಾಯಣ ಸಿನಿಮಾ ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷೆಗಳಿಗೂ ಡಬ್​ ಆಗಿ ತೆರೆಕಾಣಲಿದೆ. ಹೀಗಾಗಿ, ಹೃತಿಕ್​ ಹಾಗೂ ರಣಬೀರ್​ ಅವರನ್ನು ಅನುಕ್ರಮವಾಗಿ ರಾವಣ ಮತ್ತು ರಾಮನ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಜತೆಗೆ ಕೆಲ ದಕ್ಷಿಣ ಭಾರತದ ಕಲಾವಿದರೂ ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ.

ಹಾಗಾದರೆ ಈ ಸಿನಿಮಾದ ಬಜೆಟ್​ ಇಷ್ಟೊಂದು ಹೆಚ್ಚಾಗಲು ಕಾರಣವೇನು? ಆ ಪ್ರಶ್ನೆಗೂ ಉತ್ತರವಿದೆ. ಈ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿರುವ ರಣಬೀರ್​ಗೆ ಹಾಗೂ ರಾವಣನ ಪಾತ್ರ ಮಾಡುತ್ತಿರುವ ಹೃತಿಕ್​ಗೆ ಚಿತ್ರತಂಡ ಬರೋಬ್ಬರಿ 75 ಕೋಟಿ ರೂಪಾಯಿ ಸಂಭಾವನೆ ಆಫರ್​ ಮಾಡಿದೆ. ಇನ್ನು, ಅದ್ದೂರಿ ಸೆಟ್​ ಹಾಗೂ ಗ್ರಾಫಿಕ್​ ಕೆಲಸಗಳಿಗೆ ಹೆಚ್ಚಿನ ಹಣ ಹಿಡಿಯಲಿದೆ. ಈ ಕಾರಣಕ್ಕೆ ಸಿನಿಮಾ ಬಜೆಟ್​ ಈ ಮಟ್ಟಕ್ಕೆ ಏರಿಕೆ ಆಗಿದೆ.

ರಾಮಾಯಣ ಎಂದರೆ ಅಲ್ಲಿ ಸೀತೆಯ ಪಾತ್ರ ಬಹಳ ಮಹತ್ವ ಪಡೆದುಕೊಳ್ಳಲಿದೆ. ಈ ಕಾರಣಕ್ಕೆ ಈ ಪಾತ್ರಕ್ಕಾಗಿ ನಿರ್ಮಾಪಕರು ಹುಡುಕಾಟ ನಡೆಸಿದ್ದಾರೆ.  ಇದರ ಜತೆಗೆ ಇನ್ನೂ ಕೆಲ ಪ್ರಮುಖ ಪಾತ್ರಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ.

ರಾಮಾಯಣದ ಕಥೆ ಆಧರಿಸಿ ತೆಲುಗಿನಲ್ಲಿ ಆದಿಪುರುಷ್​ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ರಾವಣನ ಪಾತ್ರಕ್ಕೆ ಸೈಫ್​ ಅಲಿ ಖಾನ್​ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Kareena Kapoor: ಸೀತೆಯ ಪಾತ್ರಕ್ಕೆ 12 ಕೋಟಿ ಸಂಭಾವನೆ ಕೇಳಿದ ಸುದ್ದಿಗೆ ತಲೆ ಅಲ್ಲಾಡಿಸಿದ ಕರೀನಾ; ಏನಿದರ ಅರ್ಥ?

ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್​ ಖಾನ್​

Follow us on

Related Stories

Most Read Stories

Click on your DTH Provider to Add TV9 Kannada