ನಿರ್ಮಾಪಕ ಇಮ್ತಿಯಾಜ್​ ಖತ್ರಿ ಮನೆ ಮೇಲೆ ಎನ್​ಸಿಬಿ ದಾಳಿ; ಬಾಲಿವುಡ್​ ಸೆಲೆಬ್ರಿಟಿಗಳಿಗೆ ನಡುಕ ಶುರು

ವಿವಿಐಪಿ ಯೂನಿವರ್ಸಲ್​ ಎಂಟರ್​ಟೇನ್ಮೆಂಟ್​ ಕಂಪನಿ ಮೂಲಕ ನಿರ್ಮಾಪಕನಾಗಿ ಇಮ್ತಿಯಾಜ್​ ಖತ್ರಿ ಗುರುತಿಸಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳಿಗೆ ಅವರು ಮಾದಕ ವಸ್ತು ಪೂರೈಕೆ ಮಾಡುತ್ತಾರೆ ಎಂಬ ಆರೋಪ ಇದೆ.

ನಿರ್ಮಾಪಕ ಇಮ್ತಿಯಾಜ್​ ಖತ್ರಿ ಮನೆ ಮೇಲೆ ಎನ್​ಸಿಬಿ ದಾಳಿ; ಬಾಲಿವುಡ್​ ಸೆಲೆಬ್ರಿಟಿಗಳಿಗೆ ನಡುಕ ಶುರು
ಇಮ್ತಿಯಾಜ್​ ಖತ್ರಿ, ಆರ್ಯನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 09, 2021 | 9:55 AM

ಡ್ರಗ್ಸ್​ ಕೇಸ್​ನಲ್ಲಿ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಬಂಧನದ ಬಳಿಕ ತನಿಖೆ ಚುರುಕಾಗಿದೆ. ವಿಚಾರಣೆ ವೇಳೆ ಅನೇಕ ಹೆಸರುಗಳು ಹೊರಬರುತ್ತಿವೆ. ಬಾಲಿವುಡ್​ ನಿರ್ಮಾಪಕ ಇಮ್ತಿಯಾಜ್​ ಖತ್ರಿ ಮನೆ ಮತ್ತು ಕಚೇರಿ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಬೈನ ಬಾಂದ್ರಾದಲ್ಲಿರುವ ಮನೆ ಮತ್ತು ಆಫೀಸ್​ನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಮುಂಬೈನ ಉದ್ಯಮಿಯೊಬ್ಬರ ಪುತ್ರನಾದ ಇಮ್ತಿಯಾಜ್​ ಖತ್ರಿಗೆ ಬಾಲಿವುಡ್​ನ ಹಲವು ಮಂದಿ ಜೊತೆ ಸಂಪರ್ಕ ಇದೆ. ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದದ್ದು ಇದೇ ಇಮ್ತಿಯಾಜ್​ ಖತ್ರಿ ಎಂದು ಈ ಹಿಂದೆ ಸುಶಾಂತ್ ಮ್ಯಾನೇಜರ್​ ಶ್ರುತಿ ಮೋದಿ ಆರೋಪ ಮಾಡಿದ್ದರು. ಖತ್ರಿಗೆ ರಾಜಕೀಯ ವ್ಯಕ್ತಿಗಳ ಜೊತೆಗೂ ನಂಟು ಇದೆ ಎಂದು ಶ್ರುತಿ ಮೋದಿ ಪರ ವಕೀಲರು ಹೇಳಿಕೆ ನೀಡಿದ್ದರು.

ವಿವಿಐಪಿ ಯೂನಿವರ್ಸಲ್​ ಎಂಟರ್​ಟೇನ್ಮೆಂಟ್​ ಕಂಪನಿ ಮೂಲಕ ನಿರ್ಮಾಪಕನಾಗಿ ಇಮ್ತಿಯಾಜ್​ ಖತ್ರಿ ಗುರುತಿಸಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳಿಗೆ ಅವರು ಮಾದಕ ವಸ್ತು ಪೂರೈಕೆ ಮಾಡುತ್ತಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಎನ್​ಸಿಬಿ ದಾಳಿ ನಡೆಸಿದೆ. ಶಾರುಖ್​ ಪುತ್ರನಿಗೆ ಅವರೇ ಡ್ರಗ್ಸ್​ ಸಪ್ಲೈ ಮಾಡಿರಬಹುದು ಎಂಬ ಶಂಕೆ ಕೂಡ ಮೂಡಿದೆ. ಪೂರ್ತಿ ವಿಚಾರಣೆ ಬಳಿಕ ಸತ್ಯ ಹೊರಬರಬೇಕಿದೆ.

ಆರ್ಯನ್​ಗೆ ಸಿಕ್ಕಿಲ್ಲ ಜಾಮೀನು:

ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ (ಅ.8) ಮುಂಬೈನ ನ್ಯಾಯಾಲಯದಲ್ಲಿ ನಡೆಯಿತು. 23 ವರ್ಷದ ಆರ್ಯನ್ ಪರ ಸತೀಶ್ ಮಾನೆಶಿಂಧೆ ವಾದ ಮಂಡಿಸಿದರು. ಈ ಕುರಿತು ತೀರ್ಪು ನೀಡಿರುವ ನ್ಯಾಯಾಲಯವು ಆರ್ಯನ್​ಗೆ ಜಾಮೀನು ನೀಡಿಲ್ಲ. ಗುರುವಾರ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಾಲಯವು ಆರ್ಯನ್ ಖಾನ್​ಗೆ ಎನ್​ಸಿಬಿ ಕಸ್ಟಡಿಯನ್ನು ವಿಸ್ತರಿಸಲು ನಿರಾಕರಿಸಿತ್ತು. ಈಗಾಗಲೇ ಅಗತ್ಯವಿದ್ದಷ್ಟು ಸಮಯವನ್ನು ಎನ್​ಸಿಬಿಗೆ ನೀಡಲಾಗಿದೆ ಎಂದು ಹೆಚ್ಚುವರಿ ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಆರ್​.ಎಂ .ನಿರ್ಲೇಕರ್ ತಿಳಿಸಿದ್ದರು. ನಂತರ ಅವರು ಆರ್ಯನ್ ಖಾನ್ ಸೇರಿದಂತೆ 8 ಜನರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು.

ಪ್ರಕರಣದ 8 ಆರೋಪಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಸೆಷನ್ ಕೋರ್ಟ್ ಮೊರೆ ಹೋಗಲು ಆರ್ಯನ್ ಖಾನ್ ಪರ ವಕೀಲರು ಈಗ ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್​ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್​ ಖಾನ್​ ಇತಿಹಾಸ

‘ಪ್ರೀತಿಯ ಆರ್ಯನ್​ ಖಾನ್​..’: ಶಾರುಖ್​ ಪುತ್ರನಿಗೆ ಹೃತಿಕ್​ ರೋಷನ್​ ಬಹಿರಂಗ ಪತ್ರ

Published On - 9:47 am, Sat, 9 October 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ