ರಣವೀರ್ ಸಿಂಗ್ ಶರ್ಟ್ಲೆಸ್ ಫೋಟೋ ನೋಡಿ ಫಿದಾ ಆದ ಫ್ಯಾನ್ಸ್
ಈಗ ರಣವೀರ್ ಸಿಂಗ್ ಬಾಸ್ಕೆಟ್ಬಾಲ್ ಆಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬಾಸ್ಕೆಟ್ಬಾಲ್ಗಿಂತ ಅವರ ಆ್ಯಬ್ಸ್ ಎಲ್ಲರ ಗಮನ ಸೆಳೆದಿದೆ.
ರಣವೀರ್ ಸಿಂಗ್ ಅವರು ಫಿಟ್ನೆಸ್ ಹಾಗೂ ಫ್ಯಾಷನ್ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಏನೇ ಹೊಸದು ಮಾಡಿದರೂ ಅದು ಟ್ರೆಂಡ್ ಆಗುತ್ತದೆ. ರಣವೀರ್ ಸಿಂಗ್ ಅಷ್ಟರ ಮಟ್ಟಿಗೆ ಹವಾ ಸೃಷ್ಟಿ ಮಾಡಿದ್ದಾರೆ. ಫಿಟ್ನೆಸ್ಗಾಗಿ ಅವರು ನಿತ್ಯ ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ಈಗ ಅವರು ಶರ್ಟ್ಲೆಸ್ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ರಣವೀರ್ ಸಿಂಗ್ ಅವರು ರಾಷ್ಟ್ರೀಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ನ ಭಾರತದ ರಾಯಭಾರಿ ಆಗಿದ್ದಾರೆ. ಬಾಸ್ಕೆಟ್ಬಾಲ್ ಹಾಗೂ ಎನ್ಬಿಎ ಎಂದರೆ ರಣವೀರ್ ಸಿಂಗ್ಗೆ ಚಿಕ್ಕಂದಿನಿಂದಲೂ ಪ್ರೀತಿ. ಅವರಿಗೆ ಬಾಸ್ಕೆಟ್ಬಾಲ್ಮೇಲೆ ಎಲ್ಲಿಲ್ಲದ ಪ್ರೀತಿ ಇದೆ. ಈ ಕಾರಣಕ್ಕೆ ಅವರು ಅಂಬಾಸಿಡರ್ ಆಗೋಕೆ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ಅದನ್ನು ಪ್ರಮೋಟ್ ಮಾಡುತ್ತಿದ್ದಾರೆ.
ಈಗ ರಣವೀರ್ ಸಿಂಗ್ ಬಾಸ್ಕೆಟ್ಬಾಲ್ ಆಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬಾಸ್ಕೆಟ್ಬಾಲ್ಗಿಂತ ಅವರ ಆ್ಯಬ್ಸ್ ಎಲ್ಲರ ಗಮನ ಸೆಳೆದಿದೆ. ರಣವೀರ್ ಸಿಂಗ್ ಬಾಡಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ, ಈ ಬಗ್ಗೆ ನಾನಾ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಕೊವಿಡ್ ಎರಡನೇ ಅಲೆ ಬಂದಾಗ ಅದರ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಈ ಅವಧಿಯಲ್ಲಿ ರಣವೀರ್ ಸಿಂಗ್ ಮನೆಯಲ್ಲೇ ಇದ್ದರು. ಆಗ ಅವರು ಜಿಮ್ನಲ್ಲಿ ವರ್ಕೌಟ್ ಮಾಡಿದ್ದಾರೆ. ಈ ಮೂಲಕ ದೇಹದ ಫಿಟ್ನೆಸ್ ಹಾಳಾಗದಂತೆ ನೋಡಿಕೊಂಡಿದ್ದಾರೆ.
View this post on Instagram
ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಕಬೀರ್ ಖಾನ್ ನಿರ್ದೇಶನದ ಈ ಸಿನಿಮಾ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಕಥೆಯನ್ನು ಹೇಳಲಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ಮೊದಲು ರಿಲೀಸ್ ಆದ ಪೋಸ್ಟರ್ಗಳನ್ನು ನೋಡಿ ಅಭಿಮಾನಿಗಳು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಪಿಲ್ ದೇವ್ ಪಾತ್ರಕ್ಕೆ ರಣವೀರ್ ಸಿಂಗ್ ಲುಕ್ ಸರಿಯಾಗಿ ಹೊಂದುತ್ತಿದೆ. ಇದಲ್ಲದೆ, ‘ಸೂರ್ಯವಂಶಿ’ ಸಿನಿಮಾದಲ್ಲಿ ರಣವೀರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸರ್ಕಸ್’ ಹಾಗೂ ‘ತಖ್ತ್’ ಸಿನಿಮಾಗಳಲ್ಲೂ ರಣವೀರ್ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ಫಾರ್ಮ್ಹೌಸ್ ಖರಿದಿಸೋಕೆ ಮುಂದಾದ ರಣವೀರ್ ಸಿಂಗ್; ಕಾರಣ ಏನು ಗೊತ್ತಾ?