Shah Rukh Khan ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಶಾರುಖ್ ಖಾನ್ ನಟಿಸಿದ ಜಾಹೀರಾತು ನಿಲ್ಲಿಸಿದ ಬೈಜೂಸ್
Byju’s: ಟ್ವಿಟರ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಂಪನಿಯು ಟೀಕೆಗೆ ಒಳಗಾದ ನಂತರ ಕಳೆದ ಕೆಲವು ದಿನಗಳಲ್ಲಿಯೇ ಬೈಜೂಸ್ ಎಲ್ಲಾ ಜಾಹೀರಾತುಗಳನ್ನು ನಿಲ್ಲಿಸಿತು. ಆದಾಗ್ಯೂ, ಕಂಪನಿಯು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ಅವರನ್ನು ಕೈಬಿಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಆರ್ಯನ್ ಖಾನ್ (Aryan Khan) ಬಗ್ಗೆ ತನಿಖೆ ನಡೆಯುತ್ತಿದ್ದಂತೆ ಆನ್‌ಲೈನ್ ಟ್ಯುಟೋರಿಂಗ್ ಕಂಪನಿ ಬೈಜೂಸ್ (Byju’s) ತನ್ನ ಬ್ರಾಂಡ್ ಅಂಬಾಸಿಡರ್ ಮತ್ತು ಬಾಲಿವುಡ್ ನಟ ಶಾರುಖ್ ಖಾನ್ ( Shah Rukh Khan) ಅವರ ಎಲ್ಲಾ ಜಾಹೀರಾತುಗಳನ್ನು ನಿಲ್ಲಿಸಿದೆ. ಒಂದು ವರದಿಯ ಪ್ರಕಾರ, ಟ್ವಿಟರ್ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಂಪನಿಯು ಟೀಕೆಗೆ ಒಳಗಾದ ನಂತರ ಕಳೆದ ಕೆಲವು ದಿನಗಳಲ್ಲಿಯೇ ಬೈಜೂಸ್ ಎಲ್ಲಾ ಜಾಹೀರಾತುಗಳನ್ನು ನಿಲ್ಲಿಸಿತು. ಆದಾಗ್ಯೂ, ಕಂಪನಿಯು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಅವರನ್ನು ಕೈಬಿಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಕಳೆದ ವಾರ ಗೋವಾಕ್ಕೆ ಹೋಗುವ ಐಷಾರಾಮಿ ಹಡಗಿನ ಮೇಲೆ ದಾಳಿ ಮಾಡಿದ ನಂತರ ಆರ್ಯನ್ ಖಾನ್ ಮತ್ತು ಇತರ ಏಳು ಜನರನ್ನು ಬಂಧಿಸಲಾಯಿತು. ರಹಸ್ಯ ಎನ್ ಸಿಬಿ ಅಧಿಕಾರಿಗಳು ನಡೆಸಿದ ದಾಳಿ ನಂತರ, ತಂಡವು 13 ಗ್ರಾಂ ಕೊಕೇನ್, 21 ಗ್ರಾಂ ಹಶಿಶ್, 22 ಮಾತ್ರೆಗಳ ಎಂಡಿಎಂಎ ಮತ್ತು 5 ಗ್ರಾಂ ಎಂಡಿ ವಶಪಡಿಸಿಕೊಂಡಿದೆ. ಮುಂಬೈನ ಸ್ಥಳೀಯ ನ್ಯಾಯಾಲಯವು ಗುರುವಾರ ಆರ್ಯನ್ ಖಾನ್ ಮತ್ತು ಇತರ 7 ಮಂದಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಅಕ್ಟೋಬರ್ 3 ರಂದು ಬಂಧನಕ್ಕೊಳಗಾಗಿದ್ದ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಎನ್‌ಸಿಬಿ ಶಾರುಖ್ ಖಾನ್ ಅವರ ಓರ್ವ ಚಾಲಕರನ್ ವಿಚಾರಣೆ ನಡೆಸಿದ್ದು ಚಲನಚಿತ್ರ ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ ಮೇಲೆ ದಾಳಿ ನಡೆಸಿತು. ಮುಂಬೈನ ಬಾಂದ್ರಾ ಪ್ರದೇಶದಲ್ಲಿರುವ ಖತ್ರಿಯ ನಿವಾಸ ಮತ್ತು ಕಚೇರಿಯಲ್ಲಿ ದಾಳಿಗಳನ್ನು ನಡೆಸಲಾಯಿತು. ನಂತರ ಖತ್ರಿಯವರಿಗೆ ಬೆಳಗ್ಗೆ 11 ಗಂಟೆಗೆ ಏಜೆನ್ಸಿಯ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಲಾಯಿತು. ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಸೋಮವಾರ ತನ್ನ ಮುಂದೆ ಹಾಜರಾಗುವಂತೆ ಎನ್‌ಸಿಬಿ ಮತ್ತೊಮ್ಮೆ ಖತ್ರಿಯವರಿಗೆ ಸಮನ್ಸ್ ನೀಡಿತು. ವಿಚಾರಣೆ ನಂತರ ಡ್ರಗ್ಸ್ ಮಾರಾಟಗಾರರನ್ನು ತನಿಖಾ ತಂಡ ಬಂಧಿಸಿದ್ದು ಈ ಪ್ರಕರಣದಲ್ಲಿ ಈವರೆಗೆ19 ಮಂದಿಯನ್ನು ಬಂಧಿಸಲಾಗಿದೆ.
#Boycott_SRK_Related_Brands ಟ್ರೆಂಡಿಂಗ್
I Demand #Boycott_SRK_Related_Brands pic.twitter.com/Ys8liOHznE
— Akhand Pratap Singh (@itsakhand3030) October 10, 2021
ಭಾನುವಾರ ಟ್ವಿಟರ್ನಲ್ಲಿ ಶಾರುಖ್ ಖಾನ್ ಹೆಸರು ಟಾಪ್ ಟ್ರೆಂಡ್ ಆದ ಬೆನ್ನಲ್ಲೇ #Boycott_SRK_Related_Brands ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಶಾರುಖ್ ಖಾನ್ ನಟಿಸಿರುವ ಜಾಹೀರಾತುಗಳನ್ನು ನಿಲ್ಲಿಸಿ ಎಂದು ಟ್ವೀಟಿಗರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Aryan Khan: ಆರ್ಯನ್ ಜಾಮೀನು ಅರ್ಜಿ ವಜಾ ಮಾಡಿದ ಮುಂಬೈ ಕೋರ್ಟ್
Published On - 1:36 pm, Sun, 10 October 21