ಬಿಗ್​ ಬಾಸ್​​​ನಲ್ಲಿ ರಾಜ್​ ಕುಂದ್ರಾ ಬಗ್ಗೆ ಜೋಕ್​ ಮಾಡಿದ ಸಲ್ಮಾನ್​; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ

 ವಿಧಿ ಪಾಂಡ್ಯ ಅವರು ಬಾತ್​ರೂಮ್​ನಲ್ಲಿದ್ದಂತೆ ಪ್ರತಿಕ್​ ಸೆಹಜ್​ಪಾಲ್​ ಅವರು ಬಾತ್​​ರೂಮ್​ ಲಾಕ್​ ತೆಗೆದಿದ್ದರು. ಈ ವಿಚಾರದಲ್ಲಿ ಸಲ್ಮಾನ್​ ಖಾನ್​ ಕ್ಲಾಸ್​ ತೆಗೆದುಕೊಳ್ಳುತ್ತಿದ್ದರು.

ಬಿಗ್​ ಬಾಸ್​​​ನಲ್ಲಿ ರಾಜ್​ ಕುಂದ್ರಾ ಬಗ್ಗೆ ಜೋಕ್​ ಮಾಡಿದ ಸಲ್ಮಾನ್​; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ
ಸಲ್ಮಾನ್​ ಖಾನ್​-ಶಮಿತಾ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 10, 2021 | 2:59 PM

‘ಬಿಗ್​ ಬಾಸ್​ ಸೀಸನ್​ 15’ ಆರಂಭಗೊಂಡು ವಾರ ಕಳೆದಿದೆ. ಸಾಕಷ್ಟು ಸ್ಪರ್ಧಿಗಳು ಬಿಗ್​ ಬಾಸ್​ ಮನೆ ಸೇರಿದ್ದಾರೆ. ಸಲ್ಮಾನ್​ ಖಾನ್​ ವೀಕೆಂಡ್​ನಲ್ಲಿ ಬಿಗ್​ ಬಾಸ್​ ವೇದಿಕೆ ಏರಿ ಸ್ಪರ್ಧಿಗಳ ಜತೆ ಸಂವಾದ ನಡೆಸಿದ್ದಾರೆ. ಆಗ ಅವರು ಸಾಕಷ್ಟು ಜೋಕ್​ಗಳನ್ನು ಹೇಳಿದ್ದಾರೆ. ತಪ್ಪು ಮಾಡಿದವರಿಗೆ ಅವರು ಸರಿಯಾಗಿ ಕ್ಲಾಸ್ ತೆಗದುಕೊಂಡಿದ್ದಾರೆ. ಈ ವಾರ ಬಿಗ್​ ಬಾಸ್​ ವೇದಿಕೆ ಮೇಲೆ ಸಲ್ಮಾನ್​ ಖಾನ್​ ಅವರು ರಾಜ್​ ಕುಂದ್ರಾ ಹೆಸರನ್ನು ತೆಗೆದುಕೊಂಡರು. ಈ ವೇಳೆ ರಾಜ್​ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕೊಂಚ ಮುಜುಗರಕ್ಕೆ ಒಳಗಾದರು.  

ವಿಧಿ ಪಾಂಡ್ಯ ಅವರು ಬಾತ್​ರೂಮ್​ನಲ್ಲಿದ್ದಾಗಲೇ ಪ್ರತೀಕ್​ ಸೆಹಜ್​ಪಾಲ್​ ಅವರು ಬಾತ್​​ರೂಮ್​ ಲಾಕ್​ ತೆಗೆದಿದ್ದರು. ಈ ವಿಚಾರದಲ್ಲಿ ಸಲ್ಮಾನ್​ ಖಾನ್​ ಕ್ಲಾಸ್​ ತೆಗೆದುಕೊಳ್ಳುತ್ತಿದ್ದರು. ಈ ವಿಚಾರದಲ್ಲಿ ಪ್ರತಿಕ್​ಗೆ ಎಚ್ಚರಿಕೆ ನೀಡಿದ ಅವರು, ನಿಶಾಂತ್ ಭಟ್​ ಕಡೆ ತಿರುಗಿ ಪ್ರತಿಕ್​ ಅವರನ್ನು ಏಕೆ ಬೆಂಬಲಿಸಿದಿರಿ ಎಂದು ಪ್ರಶ್ನೆ ಮಾಡಿದರು. ಆ ನಂತರ ಕರಣ್​ ಕುಂದ್ರಾ ಜತೆ ಮಾತನಾಡೋಕೆ ಸಲ್ಮಾನ್​ ತಿರುಗಿದರು. ಈ ವೇಳೆ ಕರಣ್​ ಕುಂದ್ರಾ ಅವರನ್ನು ರಾಜ್​ ಕುಂದ್ರಾ ಎಂದು ಸಂಬೋಧಿಸಿ ನಕ್ಕರು ಸಲ್ಮಾನ್​. ಈ ವೇಳೆ ಶಮಿತಾ ಶೆಟ್ಟಿಗೆ ಅಚ್ಚರಿ ಹಾಗೂ ಮುಜುಗರ ಎರಡೂ ಒಟ್ಟಿಗೇ ಆಯಿತು. ಉಳಿದವರೆಲ್ಲರೂ ಕರಣ್​ ಕುಂದ್ರಾಗೆ ರಾಜ್​ ಕುಂದ್ರಾ ಎಂದು ಕರೆದಿದ್ದನ್ನು ಕೇಳಿ ನಕ್ಕರು. ಈ ವೇಳೆ ಶಮಿತಾಗೂ ನಗೋದು ಅನಿವಾರ್ಯವಾಯಿತು.

ಅನೇಕರು ಕರಣ್​ ಕುಂದ್ರಾ ಹೆಸರನ್ನು ರಾಜ್ ಕುಂದ್ರಾ ಎಂದು ಕನ್​ಫ್ಯೂಸ್​ ಮಾಡಿಕೊಂಡ ಉದಾಹರಣೆ ಇದೆಯಂತೆ. ಈ ವಿಚಾರವನ್ನು ಕರಣ್​ ಅವರೇ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈ ಕಾರಣಕ್ಕೆ ಸಲ್ಮಾನ್​ ಖಾನ್​ ಅವರು ಕರಣ್​ಗೆ ರಾಜ್​ ಕುಂದ್ರಾ ಎಂದು ಕರೆದಿದ್ದಾರೆ.

ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ ನಂತರ ಅವರ ಕುಟುಂಬ ಮುಜುಗರಕ್ಕೆ ಒಳಗಾಯಿತು. ಶಿಲ್ಪಾ ಅಭಿಮಾನಿಗಳೇ ರಾಜ್​ ಕುಂದ್ರಾ ವಿರುದ್ಧ ಸಾಕಷ್ಟು ಟ್ರೋಲ್​ಗಳನ್ನು ಮಾಡಿದ್ದರು.

ಇದನ್ನೂ ಓದಿ: ‘ಕುಟುಂಬಕ್ಕೆ ಸಮಸ್ಯೆ ಆದಾಗ ಮೊದಲು ಬರೋದು ಸಲ್ಮಾನ್’​​; ಶಾರುಖ್​ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್​

Published On - 2:55 pm, Sun, 10 October 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ