AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರ್ಮ್​ಹೌಸ್ ಖರಿದಿಸೋಕೆ ಮುಂದಾದ ರಣವೀರ್​ ಸಿಂಗ್; ಕಾರಣ ಏನು ಗೊತ್ತಾ?

ಕಲರ್ಸ್​ನಲ್ಲಿ ಪ್ರಸಾರವಾಗುವ ‘ದಿ ಬಿಗ್​ ಪಿಕ್ಚರ್ಸ್​’ ಕ್ವಿಜ್​ ಶೋಅನ್ನು ರಣವೀರ್​ ಸಿಂಗ್​ ನಡೆಸಿಕೊಡಲಿದ್ದಾರೆ. ರಣವೀರ್​ ಸಿಂಗ್​ ಈ ಶೋನ ನಿರೂಪಣೆ ಮಾಡಲಿದ್ದಾರೆ.

ಫಾರ್ಮ್​ಹೌಸ್ ಖರಿದಿಸೋಕೆ ಮುಂದಾದ ರಣವೀರ್​ ಸಿಂಗ್; ಕಾರಣ ಏನು ಗೊತ್ತಾ?
ರಣವೀರ್​ ಸಿಂಗ್​-ಸಲ್ಮಾನ್​ ಖಾನ್​
TV9 Web
| Edited By: |

Updated on: Oct 07, 2021 | 9:44 PM

Share

ಬೆಳ್ಳಿ ಪರದೆಯಲ್ಲಿ ಉತ್ತುಂಗಕ್ಕೆ ತೆರಳಿದ ನಟ-ನಟಿಯರಿಗೆ ಕಿರುತೆರೆ ಶೋ ನಡೆಸಿಕೊಡೋಕೆ ಬೇಡಿಕೆ ಬರುತ್ತದೆ. ಕಿಚ್ಚ ಸುದೀಪ್​, ಪುನೀತ್ ರಾಜ್​ಕುಮಾರ್​, ಸಲ್ಮಾನ್​ ಖಾನ್, ಅಮಿತಾಭ್​ ಬಚ್ಚನ್​,​ ಕಮಲ್​ ಹಾಸನ್​ ಸೇರಿ ಸಾಕಷ್ಟು ನಟರು ಈಗಾಗಲೇ ಕಿರುತೆರೆಗೆ ಕಾಲಿಟ್ಟಿದ್ದಾರೆ. ಈಗ ನಟ ರಣವೀರ್​ ಸಿಂಗ್​ ಸರದಿ. ​ ಚಿತ್ರರಂಗದಲ್ಲಿ ರಣವೀರ್ ಬಹುಬೇಡಿಕೆಯ ನಟ. ಅವರ ಕೈಯಲ್ಲಿ ಸದ್ಯ ಹಲವು ಸಿನಿಮಾಗಳಿವೆ. ಹೀಗಿರುವಾಗಲೇ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಇದು ಯಶಸ್ಸು ಪಡೆದರೆ ಅವರು ಸಲ್ಮಾನ್​ ಖಾನ್​ ರೀತಿಯಲ್ಲೇ ಫಾರ್ಮ್​ಹೌಸ್​ ಹೊಂದುತ್ತೇನೆ ಎಂದಿದ್ದಾರೆ.

ಕಲರ್ಸ್​ನಲ್ಲಿ ಪ್ರಸಾರವಾಗುವ ‘ದಿ ಬಿಗ್​ ಪಿಕ್ಚರ್ಸ್​’ ಕ್ವಿಜ್​ ಶೋಅನ್ನು ರಣವೀರ್​ ಸಿಂಗ್​ ನಡೆಸಿಕೊಡಲಿದ್ದಾರೆ. ರಣವೀರ್​ ಸಿಂಗ್​ ಈ ಶೋನ ನಿರೂಪಣೆ ಮಾಡಲಿದ್ದಾರೆ. ಈ ಕ್ವಿಜ್​ ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ಬುದ್ಧಿಮಟ್ಟ ಮತ್ತು ವಿಶ್ಯುವಲ್​ ಮೆಮೋರಿಯನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಶೋನ ಬಗ್ಗೆ ಮಾತನಾಡೋಕೆ ಕರೆದ ಪ್ರೆಸ್​ಮೀಟ್​ನಲ್ಲಿ ರಣವೀರ್​ ಮಾತನಾಡಿದ್ದಾರೆ.

ಭವಿಷ್ಯದ ‘ಬಿಗ್​ ಪಿಕ್ಚರ್ಸ್​’ ಏನು ಎಂದು ರಣವೀರ್​ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ. ‘ನನಗೆ ಒಂದು ಸುಂದರ ಮನೆ ಬೇಕು. ಅಲ್ಲಿ ನನ್ನ ಹೆಂಡತಿ ದೀಪಿಕಾ, ನನ್ನ ಮಕ್ಕಳು ಹಾಗೂ ಕುಟುಂಬದವರು ಇರಬೇಕು. ಕೊನೆಯ ದಿನದವರೆಗೂ ನಾನು ಮನರಂಜನೆ ನೀಡಬೇಕು. ಒಂದೊಮ್ಮೆ ಈ ಶೋ ಹಿಟ್​ ಆದರೆ ನಾನು ಪಾನ್​ವೆಲ್​ನಲ್ಲಿ ಫಾರ್ಮ್​​ಹೌಸ್​ ಖರೀದಿಸುತ್ತೇನೆ’ ಎಂದಿದ್ದಾರೆ.

ಸಲ್ಮಾನ್​ ಖಾನ್​ ಈ ಭಾಗದಲ್ಲಿ ಫಾರ್ಮ್​ಹೌಸ್​ ಹೊಂದಿದ್ದಾರೆ. ಈ ಫಾರ್ಮ್​ಹೌಸ್​ಗೆ ಅರ್ಪಿತಾ ಫಾರ್ಮ್ಸ್​​ (ಸಲ್ಮಾನ್​ ಸಹೋದರಿ) ಎಂದು ಹೆಸರು ಇಡಲಾಗಿದೆ. ಲಾಕ್​ಡೌನ್​ ಸಂದರ್ಭದಲ್ಲಿ ಸಲ್ಮಾನ್​ ಖಾನ್​ ಇಲ್ಲಿಯೇ ಸಮಯ ಕಳೆದಿದ್ದರು.

ರಣವೀರ್​ ಸಿಂಗ್​ ನಟನೆಯ ‘83’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಕಬೀರ್​ ಖಾನ್​ ನಿರ್ದೇಶನದ ಈ ಸಿನಿಮಾ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದ ಕಥೆಯನ್ನು ಹೇಳಲಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ದಾರೆ. ಈ ಮೊದಲು ರಿಲೀಸ್​ ಆದ ಪೋಸ್ಟರ್​ಗಳನ್ನು ನೋಡಿ ಅಭಿಮಾನಿಗಳು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಪಿಲ್​ ದೇವ್​ ಪಾತ್ರಕ್ಕೆ ರಣವೀರ್​ ಸಿಂಗ್​ ಲುಕ್​ ಸರಿಯಾಗಿ ಹೊಂದುತ್ತಿದೆ. ಇದಲ್ಲದೆ, ‘ಸೂರ್ಯವಂಶಿ’ ಸಿನಿಮಾದಲ್ಲಿ ರಣವೀರ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಸರ್ಕಸ್’​ ಹಾಗೂ ‘ತಖ್ತ್’​ ಸಿನಿಮಾಗಳಲ್ಲೂ ರಣವೀರ್ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ 15ಕ್ಕೆ ಸಲ್ಮಾನ್​-ರಣವೀರ್​ ಕೊಟ್ರು ಅದ್ದೂರಿ ಚಾಲನೆ; ಇಲ್ಲಿದೆ ಸ್ಪರ್ಧಿಗಳ ಪಟ್ಟಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್