ಖ್ಯಾತ ನಟಿ ತಾಯಿ ಶ್ರೀದೇವಿಯ ಹಾದಿಯನ್ನೇ ತುಳಿದಿರುವ ಜಾಹ್ನವಿ ಕಪೂರ್ ಬಾಲಿವುಡ್ನಲ್ಲಿ ನಿಧಾನವಾಗಿ ನೆಲೆಯೂರುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಅವರು, ತಮ್ಮ ತಾಯಿಯೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಅವರು ವಿಶೇಷ ಚಿತ್ರವನ್ನು ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದರು. ಇದು ಸದ್ಯ ಅವರ ಅಭಿಮಾನಿ ವಲಯದಲ್ಲಿ ಬಹಳಷ್ಟು ಮೆಚ್ಚುಗೆ ಗಳಿಸಿದೆ. ಅಷ್ಟಕ್ಕೂ ಜಾಹ್ನವಿ ಹಂಚಿಕೊಂಡಿದ್ದೇನು ಅಂತೀರಾ? ಇಲ್ಲಿದೆ ಮಾಹಿತಿ.
ಜಾಹ್ನವಿ ಕಪೂರ್ ತಮ್ಮ ತಾಯಿಯ ಹಸ್ತಾಕ್ಷರವನ್ನೇ ತಮ್ಮ ಕೈ ಮೇಲೂ ಹಚ್ಚೆ ಹಾಕಿಸಿಕೊಂಡಿದ್ದಾರೆ. ‘ಲಬ್ಬೂ’ ಎನ್ನುವುದು ಶ್ರೀದೇವಿ, ಜಾಹ್ನವಿಯನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು. ಒಮ್ಮೆ ಅವರು ಕಾಗದದಲ್ಲಿ ‘ಐ ಲವ ಯೂ ಲಬ್ಬೂ’ ಎಂದು ಬರೆದಿದ್ದರು. ಅದನ್ನೇ ಈಗ ಜಾಹ್ನವಿ ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಈ ವರ್ಷ ಶ್ರೀದೇವಿಯವರು ನಿಧನರಾಗಿ ಮೂರು ವರ್ಷ ಸಂದ ಸಂದರ್ಭದಲ್ಲಿ ತಾಯಿಯ ಕೈ ಬರಹದ ಚಿತ್ರವನ್ನು ಜಾಹ್ನವಿ ಹಂಚಿಕೊಂಡಿದ್ದರು. ಅದರಲ್ಲಿ ‘ಐ ಲವ್ ಯೂ ಲಬ್ಬೂ, ಯು ಆರ್ ಬೆಸ್ಟ್ ಬೇಬಿ ಇನ್ ದಿ ವರ್ಲ್ಡ್ (ಜಗತ್ತಿನಲ್ಲಿಯೇ ಉತ್ತಮ ಮಗು ನೀನು)’ ಎಂದು ಬರೆದಿದ್ದರು. ಇದೀಗ ಆ ಬರಹದಲ್ಲಿದ್ದ, ಮೊದಲ ಸಾಲನ್ನು ಜಾಹ್ನವಿ ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಹಚ್ಚೆ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.
ಜಾಹ್ನವಿ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
View this post on Instagram
ಶ್ರೀದೇವಿ ಕೈಬರಹದಲ್ಲಿದ್ದ ಬರಹ:
View this post on Instagram
ಚಿತ್ರಗಳ ವಿಷಯಕ್ಕೆ ಬಂದರೆ ಜಾಹ್ನವಿ ‘ಗುಡ್ ಲಕ್ ಜೆರ್ರಿ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇದಲ್ಲದೇ ಅವರ ಬತ್ತಳಿಕೆಯಲ್ಲಿ ‘ದೋಸ್ತಾನಾ 2’ ಹಾಗೂ ‘ಮಿಲಿ’ ಚಿತ್ರಗಳಿವೆ.
ಇದನ್ನೂ ಓದಿ:
‘ಇದು ಆಕಾಶವಾಣಿ ಬೆಂಗಳೂರು ನಿಲಯ’; ಡಿಫರೆಂಟ್ ಶೀರ್ಷಿಕೆಯಲ್ಲಿ ಹೀಗೊಂದು ಕನ್ನಡ ಸಿನಿಮಾ
ಪ್ರಿಯತಮೆಗೆ ಲಾಂಗ್ ಡ್ರೈವ್ ಕರೆದುಕೊಂಡು ಹೋಗಿ ಗಿಫ್ಟ್ ಕೊಡಿಸಲು ಕಳ್ಳತನ, ಕಿಲಾಡಿ ಜೋಡಿ ಅರೆಸ್ಟ್