ಬಿಗ್​ ಬಾಸ್​ 15ಕ್ಕೆ ಸಲ್ಮಾನ್​-ರಣವೀರ್​ ಕೊಟ್ರು ಅದ್ದೂರಿ ಚಾಲನೆ; ಇಲ್ಲಿದೆ ಸ್ಪರ್ಧಿಗಳ ಪಟ್ಟಿ

ಈ ಬಾರಿಯ ‘ಬಿಗ್​ ಬಾಸ್​ 15’ ಕಾಡಿನ ಥೀಮ್​ನೊಂದಿಗೆ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಬಿಗ್​ ಬಾಸ್​ ಮನೆಯನ್ನು ಕಾಡಿನ ರೀತಿಯಲ್ಲೇ ಸಿದ್ಧಮಾಡಲಾಗಿದೆ. ಇಡೀ ಮನೆಗೆ ವಿಶೇಷ ಲುಕ್​ ನೀಡಲಾಗಿದೆ.

ಬಿಗ್​ ಬಾಸ್​ 15ಕ್ಕೆ ಸಲ್ಮಾನ್​-ರಣವೀರ್​ ಕೊಟ್ರು ಅದ್ದೂರಿ ಚಾಲನೆ; ಇಲ್ಲಿದೆ ಸ್ಪರ್ಧಿಗಳ ಪಟ್ಟಿ
ರಣವೀರ್​ ಸಿಂಗ್​-ಸಲ್ಮಾನ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 03, 2021 | 9:59 PM

ಹಿಂದಿ ಬಿಗ್​ ಬಾಸ್​ 15ಕ್ಕೆ ಇಂದು (ಅಕ್ಟೋಬರ್​ 3) ಚಾಲನೆ ನೀಡಲಾಗಿದೆ. ಬಿಗ್​ ಬಾಸ್​ ಒಟಿಟಿ ಪೂರ್ಣಗೊಳ್ಳುತ್ತಿದ್ದಂತೆ ಈ ಶೋ ಆರಂಭವಾಗಿದ್ದು ವೀಕ್ಷಕರಿಗೆ ಖುಷಿ ನೀಡಿದೆ. ಬಿಗ್​ ಬಾಸ್​ ಮನೆ ಒಳಗೆ ಪ್ರವೇಶ ಪಡೆಯುವ ಸ್ಪರ್ಧಿಗಳು ಯಾರು ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸಾಕಷ್ಟು ಸೆಲೆಬ್ರಿಟಿಗಳು ಬಿಗ್​ ಬಾಸ್​ ಮನೆ ಒಳಗೆ ಎಂಟ್ರಿ ಪಡೆದಿದ್ದಾರೆ.

ಈ ಬಾರಿಯ ‘ಬಿಗ್​ ಬಾಸ್​ 15’ ಕಾಡಿನ ಥೀಮ್​ನೊಂದಿಗೆ ಮೂಡಿ ಬರುತ್ತಿದೆ. ಈ ಕಾರಣಕ್ಕೆ ಬಿಗ್​ ಬಾಸ್​ ಮನೆಯನ್ನು ಕಾಡಿನ ರೀತಿಯಲ್ಲೇ ಸಿದ್ಧಮಾಡಲಾಗಿದೆ. ಇಡೀ ಮನೆಗೆ ವಿಶೇಷ ಲುಕ್​ ನೀಡಲಾಗಿದೆ. ಇದು ವೀಕ್ಷಕರಿಗೆ ಸಾಕಷ್ಟು ಖುಷಿ ನೀಡಿದೆ. ಬಿಗ್​ ಬಾಸ್​ ಒಟಿಟಿ ಕೇವಲ ವೂಟ್​ನಲ್ಲಿ ಮಾತ್ರ ಪ್ರಸಾರವಾಗುತ್ತಿತ್ತು. ಆದರೆ, ‘ಬಿಗ್​ ಬಾಸ್ 15’ ಟಿವಿಯಲ್ಲಿ ಪ್ರಸಾರವಾಗಲಿದೆ. ಕಲರ್ಸ್​ ಟಿವಿಯಲ್ಲಿ ರಾತ್ರಿ 9:30ಕ್ಕೆ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ. ವೀಕೆಂಡ್​ನಲ್ಲಿ ನಿರೂಪಣೆಗೆ ಸಲ್ಮಾನ್​ ಖಾನ್​ ಆಗಮಿಸಲಿದ್ದಾರೆ.

ಮೊದಲ ದಿನ ಈ ಶೋಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಸಲ್ಮಾನ್​ ಖಾನ್​ ಈ ಶೋ ನಡೆಸಿಕೊಟ್ಟಿದ್ದಾರೆ. ಬಾಲಿವುಡ್​​ನ ಖ್ಯಾತ ನಟ ರಣವೀರ್​ ಸಿಂಗ್, ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ನಟಿ ಮೌನಿ ರಾಯ್​ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 100 ದಿನಕ್ಕೂ ಅಧಿಕ ದಿನಗಳ ಕಾಲ ಈ ಶೋ ವೀಕ್ಷಕರನ್ನು ರಂಜಿಸಲಿದೆ. ಸಾಮಾನ್ಯವಾಗಿ ಹಿಂದಿ ಬಿಗ್​ ಬಾಸ್​ಅನ್ನು​ ಅಕ್ಟೋಬರ್​ ತಿಂಗಳಲ್ಲೇ ಆರಂಭಿಸಲಾಗುತ್ತದೆ. ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿದಿದೆ.

ಈ ಬಾರಿ ವಿಧಿ ಪಾಂಡ್ಯಾ, ವಿಶಾಲ್​ ಕೋಟಿಯಾನ್​, ಕರಣ್​ ಕುಂದ್ರಾ, ತೇಜಸ್ವಿ ಪ್ರಕಾಶ್​, ಸಿಂಬಾ ನಾಗ್​ಪಾಲ್​, ಮೀಶಾ ಅಯ್ಯರ್​, ಐಶಾನ್​ ಸೆಹಗಾಲ್​, ದೋನಲ್​ ಬಿಶ್ಟ್​​, ಸಾಹಿಲ್​ ಶ್ರಾಫ್​, ಆಕಾಶಾ ಸಿಂಗ್​, ಉಮರ್ ರಿಯಾಜ್, ಅಫ್ಸಾನಾ ಖಾನ್​ ಮತ್ತು ಜಯ್​ ಭಾನುಶಾಲಿ ಬಿಗ್​ ಬಾಸ್​ ಮನೆ ಸೇರಿದ್ದಾರೆ.

ಇದನ್ನೂ ಓದಿ:Bigg Boss 15: ಕಾಡಿನಲ್ಲಿ ನಡೆಯಲಿದೆ ಬಿಗ್​ ಬಾಸ್​; ಮನೆ ನೋಡಿ ಹೌಹಾರಿದ ವೀಕ್ಷಕರು 

ಏರ್​ಪೋರ್ಟ್​​ನಲ್ಲಿ ಸಲ್ಮಾನ್​ ಖಾನ್ ಅವರನ್ನು ತಡೆದಿದ್ದ ಸಿಐ​ಎಸ್ಎಫ್​ ಅಧಿಕಾರಿಗೆ ಈಗ ಸಂಕಷ್ಟ; ಕಾರಣ ಏನು?

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ