Updated on:Oct 02, 2021 | 3:04 PM
ಯಶಸ್ವಿಯಾಗಿ 14 ಸೀಸನ್ಗಳನ್ನು ಪೂರ್ಣಗೊಳಿಸಿರುವ ಹಿಂದಿ ಬಿಗ್ ಬಾಸ್ ಈಗ 15ನೇ ಸೀಸನ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಿಗ್ ಬಾಸ್ ಒಟಿಟಿ ಶೋ ಪೂರ್ಣಗೊಂಡಿದ್ದು, ಬಿಗ್ ಬಾಸ್ 15ಕ್ಕೆ ಕ್ಷಣಗಣನೆ ಆರಂಭವಾಗಿದೆ.
ಅಚ್ಚರಿ ವಿಚಾರ ಎಂದರೆ, ಈ ಬಾರಿ ಬಿಗ್ ಬಾಸ್ ಕಾಡಿನ ಥೀಮ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಅದೇ ರೀತಿಯಲ್ಲಿ ಮನೆಯನ್ನು ಸಿದ್ಧಪಡಿಸಲಾಗಿದೆ. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇಡೀ ಬಿಗ್ ಬಾಸ್ ಮನೆಯಲ್ಲಿ ಮರ, ಗಿಡ, ಬಳ್ಳಿಗಳು ಬೆಳೆದುಕೊಂಡಿವೆ. ಈ ಲುಕ್ ನೋಡಿದರೆ ಇದು ನಿಜಕ್ಕೂ ಕಾಡೇನೋ ಎನ್ನುವಂತೆ ಭಾಸವಾಗುವ ರೀತಿಯಲ್ಲಿದೆ.
ಇದು ವೀಕ್ಷಕರನ್ನು ಸೆಳೆಯೋಕೆ ಯಶಸ್ವಿಯಾಗುವ ಸಾಧ್ಯತೆ ಇದೆ. ಮನೆ ಈ ರೀತಿ ಇರುವುದರಿಂದ ಟಾಸ್ಕ್ಗಳು ಕೂಡ ಅದೇ ರೀತಿಯಲ್ಲಿರಬಹುದು ಎಂಬುದು ವೀಕ್ಷಕರ ಲೆಕ್ಕಾಚಾರ.
ಸುಶಾಂತ್ ಸಿಂಗ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.
ಬಿಗ್ ಬಾಸ್ ಆರಂಭವಾದ ನಂತರವೇ ಇದಕ್ಕೆ ಸ್ಪಷ್ಟನೆ ಸಿಗಬೇಕಿದೆ.
ಹಿಂದಿ ಬಿಗ್ ಬಾಸ್ ಮನೆ
Published On - 2:59 pm, Sat, 2 October 21