- Kannada News Photo gallery Bollywood actor Amitabh Bachchan have plenty of cars see the photos and worth of those cars here
Amitabh Bachchan: ದುಬಾರಿ ಮೊತ್ತದ ಕಾರುಗಳ ಸಂಗ್ರಹವನ್ನೇ ಇಟ್ಟಿರುವ ಅಮಿತಾಭ್!; ಇಲ್ಲಿವೆ ಚಿತ್ರಗಳು
Amitabh Bachchan Life Style: ಖ್ಯಾತ ತಾರೆಯರಿಗೆ ದುಬಾರಿ ಹವ್ಯಾಸಗಳಿರುತ್ತವೆ. ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರಿಗೆ ದುಬಾರಿ ಕಾರುಗಳ ಕುರಿತು ತುಸು ಹೆಚ್ಚೇ ಆಸಕ್ತಿ ಇದೆ. ಅವರ ಬಳಿ ಎಂತಹ ಕಾರುಗಳಿವೆ? ಅವುಗಳ ಮೌಲ್ಯವೆಷ್ಟು? ಇಲ್ಲಿದೆ ಮಾಹಿತಿ.
Updated on: Oct 09, 2021 | 1:01 PM

ಅಮಿತಾಭ್ ಬಚ್ಚನ್ ಅವರಲ್ಲಿ ದುಬಾರಿ ಬೆಲೆಯ ಕಾರುಗಳ ಸಂಗ್ರವೇ ಇದೆ. ಅದರಲ್ಲಿ ಒಂದು ಇದು- ‘ಬೆಂಟ್ಲಿ ಕಾಂಟಿನೆಂಟಲ್ ಜಿಟಿ’. ಇದರ ಬೆಲೆ ಸುಮಾರು ₹ 3.30 ಕೋಟಿಯಿಂದ ₹ 4 ಕೋಟಿ.

ಅಮಿತಾಭ್ 2016ರಲ್ಲಿ ಖರೀದಿಸಿದ ಈ ಬಿಳಿಯ ಬಣ್ಣದ ‘ರೇಂಜ್ ರೋವರ್’ ಅವರ ಮೆಚ್ಚಿನ ಕಾರುಗಳಲ್ಲೊಂದು.

ಅಮಿತಾಭ್ ಬಳಿ ಇರುವ ಮತ್ತೊಂದು ದುಬಾರಿ ಕಾರು ‘ಮರ್ಸಿಡಿಸ್ ಬೆಂಜ್ ಎಸ್450’. ಇದರ ಬೆಲೆ ಸುಮಾರು ₹ 1.5 ಕೋಟಿ.

ಸುಮಾರು ₹ 95 ಲಕ್ಷ ಮೌಲ್ಯದ ‘ಪಾರ್ಷ್ ಸೀಯಾನ್ ಎಸ್’ (Porsche Cayman S) ಕಾರೂ ಕೂಡ ಅಮಿತಾಭ್ ಬಳಿಯಿದೆ.

ಕೆಂಪು ಬಣ್ಣದ ‘ಮಿನಿ ಕೂಪರ್ ಎಸ್’ ಕಾರಿನಲ್ಲಿ ಅಮಿತಾಭ್ ಸ್ವತಃ ಡ್ರೈವ್ ಮಾಡಿಕೊಂಡು ಹೋಗುವಾಗ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದರು.

ಮೆರೂನ್ ಬಣ್ಣದ ‘ಟೊಯೊಟಾ ಲ್ಯಾಂಡ್ ಕ್ರೂಸರ್’ ಕೂಡ ಅಮಿತಾಭ್ ಬಳಿಯಿದ್ದು, ಪುತ್ರ ಅಭಿಷೇಕ್ ಜೊತೆಗೆ ಡ್ರೈವ್ ಹೋಗುತ್ತಿರುವ ಚಿತ್ರ ವೈರಲ್ ಆಗಿತ್ತು.

ಅಮಿತಾಭ್ ಬಚ್ಚನ್ ಬಳಿ ‘ಮರ್ಸಿಡಿಸ್ ಜಿಎಲ್6’ ಕಾರಿದೆ. ಇದರ ಬೆಲೆ ಸುಮಾರು ₹ 1.60 ಕೋಟಿ.

ಅಮಿತಾಭ್ ಬಳಿಯಿರುವ ಅತ್ಯಂತ ದುಬಾರಿ ಕಾರುಗಳಲ್ಲಿ ‘ಲೆಕ್ಸಸ್ ಎಲ್ಎಕ್ಸ್570’ ಕೂಡ ಒಂದು. ಇದರ ಬೆಲೆ ಸುಮಾರು ₹ 2.30 ಕೋಟಿ.

‘ರೋಲ್ಸ್ ರಾಯ್ಸ್ ಫ್ಯಾಂಟಮ್’ ಕಾರು ಹೊಂದಿರುವ ಕೆಲವೇ ಭಾರತೀಯರಲ್ಲಿ ಅಮಿತಾಭ್ ಕೂಡ ಓರ್ವರಾಗಿದ್ದಾರೆ.

ಅಮಿತಾಭ್ ಬಳಿ ಸುಮಾರು ₹ 1.8 ಕೋಟಿ ಮೊತ್ತದ ‘ಆಡಿ ಎ8’ ಕಾರು ಕೂಡ ಇದೆ.




