AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್​ ಖಾನ್​ಗೆ ಮಕ್ಕಳ ಶಾಲೆ ಫೀಸ್​ ಕಟ್ಟಲು ದುಡ್ಡಿಲ್ಲ; ಯಾರಿದು?

ಶಾರುಖ್​ ಇಮೇಜ್​ ಹದಗೆಟ್ಟಿರುವ ಕಾರಣದಿಂದಲೇ ರಾಜುಗೆ ಈ ಕಷ್ಟದ ಪರಿಸ್ಥಿತಿ ಉಂಟಾಗಿದೆ. ಮಕ್ಕಳ ಶಾಲೆ ಫೀಸ್​ ಕಟ್ಟಲು ಡಿಸೆಂಬರ್​ವರೆಗೆ ಸಮಯಾವಕಾಶ ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇಲ್ಲೊಬ್ಬ ಬಡಪಾಯಿ, ನಕಲಿ ಶಾರುಖ್​ ಖಾನ್​ಗೆ ಮಕ್ಕಳ ಶಾಲೆ ಫೀಸ್​ ಕಟ್ಟಲು ದುಡ್ಡಿಲ್ಲ; ಯಾರಿದು?
ರಾಜು ರಾಹಿಕ್ವಾರ್​
TV9 Web
| Updated By: ಮದನ್​ ಕುಮಾರ್​|

Updated on: Oct 12, 2021 | 9:16 AM

Share

ನಟ ಶಾರುಖ್​ ಖಾನ್​ ಈಗ ಸಂಕಷ್ಟದಲ್ಲಿದ್ದಾರೆ. ಅವರ ಪುತ್ರ ಆರ್ಯನ್​ ಖಾನ್​ ಎನ್​ಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಪಟ್ಟು, ನ್ಯಾಯಾಂಗ ಬಂಧನ ಅನುಭವಿಸುತ್ತಿದ್ದಾರೆ. ಇದರಿಂದ ಬರೀ ಶಾರುಖ್​ ಮಾತ್ರವಲ್ಲದೇ, ಅವರನ್ನು ನಂಬಿಕೊಂಡಿದ್ದ ಅನೇಕರು ಕೂಡ ನೋವು ಅನುಭವಿಸುವಂತಾಗಿದೆ. ಶಾರುಖ್​ ರೀತಿಯೇ ಕಾಣುತ್ತಾರೆ ಎಂಬ ಕಾರಣಕ್ಕೆ ಫೇಮಸ್​ ಆಗಿದ್ದ ರಾಜು ರಾಹಿಕ್ವಾರ್​ ಕೂಡ ಈಗ ಕಷ್ಟದಲ್ಲಿದ್ದಾರೆ. ಮಕ್ಕಳ ಶಾಲೆ ಫೀಸ್​ ಕಟ್ಟಲೂ ಕೂಡ ತಮ್ಮ ಬಳಿ ಹಣ ಇಲ್ಲ ಎಂದು ಅವರು ಗೋಳು ತೋಡಿಕೊಂಡಿದ್ದಾರೆ.

ಸಿನಿಮಾ ಸ್ಟಾರ್​ಗಳ ರೀತಿ ಕಾಣುವ ವ್ಯಕ್ತಿಗಳು ಆರ್ಕೆಸ್ಟ್ರಾ, ಸರ್ಕಸ್​, ರಿಯಾಲಿಟಿ ಶೋ ಮುಂತಾದ ಕಡೆಗಳಲ್ಲಿ ಕೆಲಸ ಮಾಡುತ್ತಾರೆ. ಅದೇ ರೀತಿ ಶಾರುಖ್​ ಖಾನ್​ ರೀತಿ ಕಾಣುವ ರಾಜು ರಾಹಿಕ್ವಾರ್​ ಕೂಡ ಜೀವನ ಸಾಗಿಸುತ್ತಿದ್ದರು. ಅನೇಕ ಇವೆಂಟ್​ಗಳಲ್ಲಿ ಶಾರುಖ್​ ರೀತಿ ವೇಷ ಧರಿಸಿಕೊಂಡು ಕಾಣಿಸಿಕೊಳ್ಳುತ್ತಿದ್ದ ರಾಜು ಅವರು ಜನರಿಗೆ ಮನರಂಜನೆ ನೀಡುತ್ತಿದ್ದರು. ಅದಕ್ಕೆ ಅವರಿಗೆ ಸಂಬಳ ಸಿಗುತ್ತಿತ್ತು. ಅದರಿಂದಲೇ ಅವರ ಜೀವನ ಸಾಗುತ್ತಿತ್ತು. ಆದರೆ ಈಗ ರಾಜು ಸಂಪಾದನೆಗೆ ಅಡ್ಡಿ ಉಂಟಾಗಿದೆ.

‘ಲಾಕ್​ಡೌನ್​ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಯಾವುದೇ ಕಾರ್ಯಕ್ರಮ ಇರಲಿಲ್ಲ. ಈಗತಾನೇ ಕೆಲವು ಇವೆಂಟ್​ಗಳು ಆರಂಭ ಆಗುತ್ತಿದ್ದವು. ಅ.10ರಂದು ನಾನೊಂದು ಬರ್ತ್​ಡೇ ಪಾರ್ಟಿಯಲ್ಲಿ ಕಾರ್ಯಕ್ರಮ ನೀಡಬೇಕಿತ್ತು. ಜೈಪುರದಲ್ಲಿ ಮತ್ತೊಂದು ಸಮಾವೇಷಕ್ಕೂ ತೆರಳಬೇಕಿತ್ತು. ಆದರೆ ಆ ಎರಡೂ ಕಾರ್ಯಕ್ರಮಗಳಿಗೆ ನಾನು ಹೋಗುವಂತಿಲ್ಲ. ಜನರಿಗೆ ಶಾರುಖ್​ ಖಾನ್​ ಅವರ ಸದ್ಯದ ಇಮೇಜ್​ ಕಿರಿಕಿರಿ ಉಂಟು ಮಾಡುತ್ತಿದೆ ಅಂತ ಆಯೋಜಕರು ನನಗೆ ಹೇಳಿದ್ದಾರೆ’ ಎಂದು ರಾಜು ರಾಹಿಕ್ವಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಶಾರುಖ್​ ಇಮೇಜ್​ ಹದಗೆಟ್ಟಿರುವ ಕಾರಣದಿಂದಲೇ ರಾಜುಗೆ ಈ ಕಷ್ಟದ ಪರಿಸ್ಥಿತಿ ಉಂಟಾಗಿದೆ. ಹಾಗಂತ ಅವರು ಶಾರುಖ್​ರನ್ನು ನಿಂದಿಸುತ್ತಿಲ್ಲ. ‘ಇಂದು ನಾನು ಏನೇ ಗಳಿಸಿದ್ದರೂ ಅದಕ್ಕೆ ಶಾರುಖ್ ಕಾರಣ. ನನಗೆ ಒಂದು ಐಡೆಂಟಿಟಿ​ ಸಿಕ್ಕಿದ್ದೇ ಅವರಿಂದಾಗಿ. ಅವರೇ ನನ್ನ ಗಾಡ್​ ಫಾದರ್​. ಆರ್ಯನ್​ ಆದಷ್ಟು ಬೇಗ ಈ ಸಂಕಟದಿಂದ ಹೊರಬರಲಿ ಅಂತ ಪ್ರಾರ್ಥಿಸುತ್ತೇನೆ’ ಎಂದು ರಾಜು ಹೇಳಿದ್ದಾರೆ. ಮಕ್ಕಳ ಶಾಲೆ ಫೀಸ್​ ಕಟ್ಟಲು ಡಿಸೆಂಬರ್​ವರೆಗೆ ಸಮಯಾವಕಾಶ ನೀಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

‘ಖಾನ್​ ಎಂಬ ಹೆಸರಿನ ಕಾರಣಕ್ಕೆ ಶಾರುಖ್​ ಮಗನನ್ನು ಅರೆಸ್ಟ್​ ಮಾಡಲಾಗಿದೆ’: ಮೆಹಬೂಬಾ ಮುಫ್ತಿ ಆರೋಪ

‘ಅದಾನಿ ಬಂದರು ಡ್ರಗ್ಸ್​ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್​ ಮಗ ಟಾರ್ಗೆಟ್​’: ವಿಶಾಲ್​ ದದ್ಲಾನಿ

ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ