ಜಾನ್​ ಅಬ್ರಾಹಂ ಎದುರು ತೊಡೆತಟ್ಟಿದ ಸಲ್ಮಾನ್​ ಖಾನ್​; ಗೆಲ್ಲೋರು ಯಾರು?

ಸಲ್ಲು ಸದ್ಯ ಕೆಲ ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ವೀಕೆಂಡ್​ನಲ್ಲಿ ಅವರು ಬಿಗ್​ ಬಾಸ್​ ನಡೆಸಿಕೊಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ಸಿನಿಮಾ ಪ್ರಮೋಷನ್​ ಕಾರ್ಯದಲ್ಲೂ ಅವರು ತೊಡಗಿಕೊಂಡಿದ್ದಾರೆ.

ಜಾನ್​ ಅಬ್ರಾಹಂ ಎದುರು ತೊಡೆತಟ್ಟಿದ ಸಲ್ಮಾನ್​ ಖಾನ್​; ಗೆಲ್ಲೋರು ಯಾರು?
ಜಾನ್​ ಮತ್ತು ಸಲ್ಲು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 11, 2021 | 2:20 PM

ಸಲ್ಮಾನ್​ ಖಾನ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತದೆ. ಸಲ್ಲು ಸಿನಿಮಾ ವಿಮರ್ಶೆಯಲ್ಲಿ ಸೋತ ಹೊರತಾಗಿಯೂ ನೂರು ಕೋಟಿ ರೂಪಾಯಿ ಗಳಿಕೆ ಮಾಡಿದ ಉದಾಹರಣೆ ಸಾಕಷ್ಟಿದೆ. ಈ ಕಾರಣಕ್ಕೆ ಸಲ್ಮಾನ್​ ಖಾನ್​​ ಚಿತ್ರದ ಎದುರು ಮತ್ತೊಂದು ಸಿನಿಮಾ ರಿಲೀಸ್ ​ಮಾಡೋಕೆ ಎಲ್ಲರೂ ಹಿಂದೇಟು ಹಾಕುತ್ತಾರೆ. ಆದರೆ ಈಗ ಸಲ್ಮಾನ್​ ಖಾನ್​ ಅವರೇ ಜಾನ್​ ಅಬ್ರಾಹಂ ಎದುರು ತೊಡೆ ತಟ್ಟಿದ್ದಾರೆ. ಇದರಲ್ಲಿ ಗೆಲ್ಲೋರು ಯಾರು ಎನ್ನುವ ಕುತೂಹಲ ಮೂಡಿದೆ.

‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾದಲ್ಲಿ ಸಲ್ಲು ನಟಿಸಿದ್ದಾರೆ. ಆಯುಶ್​ ಶರ್ಮಾ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡರೆ, ಸಲ್ಲು ಸಿಖ್​ ಪೊಲೀಸ್​ ಆಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ನವೆಂಬರ್ 26ರಂದು ತೆರೆಗೆ ಬರುತ್ತಿದೆ. ಅದೇ ದಿನ ಜಾನ್​ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ.

ಜಾನ್​ ಅಬ್ರಾಹಂ ನಟನೆಯ ‘ಸತ್ಯಮೇವ ಜಯತೆ’ ಸಿನಿಮಾ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ‘ಸತ್ಯಮೇವ ಜಯತೆ 2’ ತೆರೆಗೆ ಬರುತ್ತಿದೆ. ಈ ಚಿತ್ರ ನವೆಂಬರ್​ 26ರಂದು ರಿಲೀಸ್​ ಆಗುತ್ತಿದೆ. ಈಗ ಅದೇ ದಿನ ಸಲ್ಲು ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ.

‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾ ದೀಪಾವಳಿಗೆ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾದ ಕೆಲ ದೃಶ್ಯಗಳನ್ನು ರೀಶೂಟ್​ ಮಾಡಲಾಗಿದೆ. ಇದರ ಎಡಿಟಿಂಗ್​ಗೆ ಹೆಚ್ಚು ಸಮಯ ಹಿಡಿದಿದೆ. ಹೀಗಾಗಿ, ನವೆಂಬರ್ 26ಕ್ಕೆ ಸಿನಿಮಾ ರಿಲೀಸ್​ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ. ಈ ಕಾರಣಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ಮುಖಾಮುಖಿ ಆಗುತ್ತಿವೆ.

ಸಲ್ಲು ಸದ್ಯ ಕೆಲ ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ವೀಕೆಂಡ್​ನಲ್ಲಿ ಅವರು ಬಿಗ್​ ಬಾಸ್​ ನಡೆಸಿಕೊಡುತ್ತಿದ್ದಾರೆ. ಇವೆಲ್ಲವುಗಳ ನಡುವೆ ಸಿನಿಮಾ ಪ್ರಮೋಷನ್​ ಕಾರ್ಯದಲ್ಲೂ ಅವರು ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಆರ್ಯನ್​ ಖಾನ್​ ಬಂಧನಕ್ಕೆ ಒಳಗಾದಾಗ ಅವರು ಶಾರುಖ್​ ಖಾನ್​ ಮನೆಗೆ ಭೇಟಿ ಕೊಟ್ಟಿದ್ದರು. ಇದು ಸಾಕಷ್ಟು ಸುದ್ದಿಯಾಗಿತ್ತು.

ಇದನ್ನೂ ಓದಿ: ಬಿಗ್​ ಬಾಸ್​​​ನಲ್ಲಿ ರಾಜ್​ ಕುಂದ್ರಾ ಬಗ್ಗೆ ಜೋಕ್​ ಮಾಡಿದ ಸಲ್ಮಾನ್​; ಮುಜುಗರಕ್ಕೊಳಗಾದ ಶಮಿತಾ ಶೆಟ್ಟಿ

ಶಾರುಖ್​ ಪುತ್ರನ ಅರೆಸ್ಟ್​ ಬೆನ್ನಲ್ಲೇ ಓಡೋಡಿ ಬಂದ ಸಲ್ಮಾನ್​ ಖಾನ್​; ‘ಮನ್ನತ್​’ನಲ್ಲಿ ನಡೆದಿದ್ದು ಏನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ