Bad Breath Problem: ನಿಮ್ಮ ಮಾಸ್ಕ್ ಒಳಗೆ ದುರ್ವಾಸನೆಯೇ? ಕೆಟ್ಟ ಉಸಿರಾಟ ಸಮಸ್ಯೆಗೆ ಪರಿಹಾರ ಕ್ರಮಗಳೇನು ಯೋಚಿಸಿದ್ದೀರಾ?
Health Care: ಬಾಯಿಯಿಂದ ಹೊರಬರುವ ದುರ್ವಾಸನೆ ನಿಮ್ಮ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತದೆ. ನಾಲ್ಕು ಜನರೆದುರು ಮಾತನಾಡಲೂ ಸಹ ಹಿಂಜರಿಕೆಯನ್ನುಂಟು ಮಾಡುತ್ತದೆ. ಹೀಗಿರುವಾಗ ಈ ಸಮಸ್ಯೆಗೆ ಪರಿಹಾರ ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳಿ.
ಇತ್ತೀಚೆಗೆ ಜನರು ಎದುರಿಸುತ್ತಿರುವ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲಿ ಬಾಯಿಯ ದುರ್ವಾಸನೆಯೂ ಒಂದು. ಕೆಲವೊಮ್ಮೆ ಬಾಯಿಯ ದುರ್ವಾಸನೆಯನ್ನು ಉಂಟು ಮಾಡುವ ಸಮಸ್ಯೆಯ ಕಾರಣವನ್ನು ಕಂಡು ಹಿಡಿಯುವುದು ಬಹಳ ಕಷ್ಟಕರ. ಸಮಸ್ಯೆಗೆ ಹಿಂದಿನ ಕಾರಣಗಳೇನು ಎಂಬುದು ಕಂಡು ಬಂದರೆ ಬಹುಬೇಗ ಪರಿಹಾರ ಕಂಡುಕೊಳ್ಳಬಹುದು. ಬಾಯಿಯಿಂದ ಹೊರಬರುವ ದುರ್ವಾಸನೆ ನಿಮ್ಮ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತದೆ. ನಾಲ್ಕು ಜನರೆದುರು ಮಾತನಾಡಲೂ ಸಹ ಹಿಂಜರಿಕೆಯನ್ನುಂಟು ಮಾಡುತ್ತದೆ. ಹೀಗಿರುವಾಗ ಈ ಸಮಸ್ಯೆಗೆ ಪರಿಹಾರ ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳಿ.
ಆಹಾರ ತಜ್ಞೆ ಮತ್ತು ಪೌಷ್ಟಿಕ ತಜ್ಞೆ ಸಕಿನಾ ಮುಸ್ತಾನ್ಸಿರ್ ವಿವರಿಸಿರುವ ಮಾಹಿತಿಯನ್ನು ಇಂಡಿಯಾ ಡಾಟ್ ಕಾಮ್ ನ್ಯೂಸ್ನಲ್ಲಿ ಉಲ್ಲೇಖಿಸಲಾಗಿದೆ. ಬಾಯಿಯ ದುರ್ವಾಸನೆಯನ್ನು ವೈದ್ಯಕೀಯವಾಗಿ ಹ್ಯಾಲಿಟೋಸಿಸ್ ಎಂದು ಕರೆಯುತ್ತಾರೆ. ಇದು ಬಾಯಿಯಿಂದ ಹೊರಬರುವ ಅಹಿತಕರ ಉಸಿರು ಅಥವಾ ವಾಸನೆ. ಸಾಮಾನ್ಯವಾಗಿ ಬಾಯಿ, ಹಲ್ಲು, ಒಸಡು, ಗಂಟಲು ಅಥವಾ ಜೀರ್ಣಾಂಗ ವ್ಯವಸ್ಥೆಯಲ್ಲಿನ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಾಯಿಯ ವಾಸನೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೆಟ್ಟ ಉಸಿರಾಟದ ಕಾರಣಗಳು ಮತ್ತು ಪರಿಹಾರಗಳು
ಸೇವಿಸುವ ಆಹಾರ ನೀವು ಆಹಾರ ಸೇವಿಸುವಾಗ ಚೆನ್ಗಿನಾ ಅಗಿಯುತ್ತೀರಿ. ಆಗ ನಿಮ್ಮ ಹಲ್ಲುಗಳ ಮಧ್ಯದಲ್ಲಿ ಆಹಾರ ಸಿಲುಕಿಕೊಂಡಿರುತ್ತದೆ. ಸಾಕಷ್ಟು ಸಮಯದವರೆಗೆ ಹಲ್ಲಿನ ಮಧ್ಯ ಸಿಲುಕಿಕೊಂಡ ಆಹಾರವು ಬ್ಯಾಕ್ಟೀರಿಯಾವನ್ನು ಉತ್ಪತ್ತಿ ಮಾಡುತ್ತವೆ. ಬಳಿಕ ಇದು ದುರ್ವಾಸನೆಗೆ ಕಾರಣವಾಗುತ್ತದೆ. ಬೆಳ್ಳುಳ್ಳಿ, ಈರುಳ್ಳಿ ಜತೆಗೆ ಮಸಾಲೆಗಳು ಕೆಟ್ಟ ಉಸಿರಾಟವನ್ನು ಉಂಟು ಮಾಡುತ್ತವೆ. ಹಾಗಾಗಿ ನೀವು ಆಹಾರ ಸೇವಿಸಿದ ನಂತರ ಬಾಯಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಹಲ್ಲಿನಲ್ಲಿ ಸಿಲುಕಿರುವ ಆಹಾರ ಹೊರಬರುವಂತೆ ಸ್ವಚ್ಛವಾಗಿ ಬಾಯಿ ತೊಳೆಯಿರಿ.
ಒಣ ಬಾಯಿ ಒಣ ಬಾಯಿ ನಿಮ್ಮ ಬಾಯಿಯ ದುರ್ವಾಸನೆಗೆ ಕಾರಣವಾಗುತ್ತದೆ. ಇದು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿಗೆ ಸಹಾಯ ಮಾಡುತ್ತದೆ. ಲಾಲಾ ರಸವು ಕೆಟ್ಟರಸವನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಯಾವಾಗಲೂ ಒಣ ಬಾಯಿಯ ಬದಲಿಗೆ ಆಗಾಗ ನೀರು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.
ತಂಬಾಕು ಉತ್ಪನ್ನಗಳು ಧೂಮಪಾನ, ಮದ್ಯಪಾನದಲ್ಲಿ ತೊಡಗಿರುವವರು ಮತ್ತು ತಂಬಾಕು ಸೇವಿಸುವವರ ಒಸಡು ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ಬಾಯಿಯ ವಾಸನೆಗೆ ಕಾರಣವಾಗುತ್ತದೆ. ಹಾಗಾಗಿ ಅನಾರೋಗ್ಯವನ್ನುಂಟು ಮಾಡುವ ಈ ಚಟಗಳನ್ನು ಬಿಟ್ಟುಬಿಡಿ. ಇಲ್ಲವೇ ಬಾಯಿಯನ್ನು ಚೆನ್ನಾಗಿ ತೊಳೆದು ಜೀರಿಗೆಯನ್ನು ಅಗಿಯುವ ಅಭ್ಯಾಸ ಮಾಡಿಕೊಳ್ಳಿ.
ಇದನ್ನೂ ಓದಿ:
Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ
Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ
Published On - 9:27 am, Fri, 8 October 21