Malaria vaccine ಮಕ್ಕಳಿಗಾಗಿ ಪ್ರಪಂಚದ ಮೊದಲ ಮಲೇರಿಯಾ ಲಸಿಕೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು

World Health Organization ಮಲೇರಿಯಾ ಲಸಿಕೆ ಶಿಫಾರಸುಗಳ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಮಲೇರಿಯಾವನ್ನು ತಡೆಗಟ್ಟಲು ಈಗಿರುವ ಉಪಕರಣಗಳ ಜೊತೆಗೆ ಪ್ರತಿವರ್ಷ ಹತ್ತಾರು ಎಳೆ ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.

Malaria vaccine ಮಕ್ಕಳಿಗಾಗಿ ಪ್ರಪಂಚದ ಮೊದಲ ಮಲೇರಿಯಾ ಲಸಿಕೆಯ ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು
ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: Oct 07, 2021 | 12:13 PM

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ವಿಶ್ವದ ಮೊದಲ ಮಲೇರಿಯಾ ಲಸಿಕೆಯನ್ನು ಮಕ್ಕಳಿಗೆ ಬಳಸಲು ಶಿಫಾರಸು ಮಾಡಿದೆ. ಇದು “ವಿಜ್ಞಾನ, ಮಕ್ಕಳ ಆರೋಗ್ಯ ಮತ್ತು ಮಲೇರಿಯಾ ನಿಯಂತ್ರಣಕ್ಕೆದಲ್ಲಿನ ಪ್ರಗತಿಯಾಗಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ. ಆರ್‌ಟಿಎಸ್, ಎಸ್/ಎಎಸ್ 01 ಮಲೇರಿಯಾ ಲಸಿಕೆಯ ಶಿಫಾರಸು 2019 ರಲ್ಲಿ ಆರಂಭವಾದ ಘಾನಾ, ಕೀನ್ಯಾ ಮತ್ತು ಮಲಾವಿಯಲ್ಲಿ ನಡೆಯುತ್ತಿರುವ ಆರಂಭಿಕಕಾರ್ಯಕ್ರಮದ ಫಲಿತಾಂಶಗಳನ್ನು ಆಧರಿಸಿದೆ. ಮಲೇರಿಯಾ ಲಸಿಕೆ ಶಿಫಾರಸುಗಳ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಮಲೇರಿಯಾವನ್ನು ತಡೆಗಟ್ಟಲು ಈಗಿರುವ ಉಪಕರಣಗಳ ಜೊತೆಗೆ ಪ್ರತಿವರ್ಷ ಹತ್ತಾರು ಎಳೆ ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.

“ಇದು ಶಕ್ತಿಯುತವಾದ ಹೊಸ ಸಾಧನವಾಗಿದೆ ಆದರೆ ಕೊವಿಡ್ -19 ಲಸಿಕೆಗಳಂತೆ, ಇದು ಕೇವಲ ಸಾಧನವಲ್ಲ. ಮಲೇರಿಯಾ ವಿರುದ್ಧ ಲಸಿಕೆ ಹಾಕುವುದರಿಂದ ಬೆಡ್‌ನೆಟ್ ಸೇರಿದಂತೆ ಇತರ ಕ್ರಮಗಳ ಅಗತ್ಯವನ್ನು ಕಡಿಮೆ ಮಾಡುವುದಿಲ್ಲ ಅಥವಾ ಜ್ವರದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಹೇಳಿದ್ದಾರೆ. ಮಲೇರಿಯಾ ಸಂಶೋಧಕರಾಗಿ ತಮ್ಮ ಆರಂಭಿಕ ವೃತ್ತಿಜೀವನವನ್ನು ನೆನಪಿಸಿಕೊಂಡ ಟೆಡ್ರೊಸ್, ಈ “ಪುರಾತನ ಮತ್ತು ಭಯಾನಕ ರೋಗ” ದ ವಿರುದ್ಧ ಜಗತ್ತು ಪರಿಣಾಮಕಾರಿ ಲಸಿಕೆಯನ್ನು ಹೊಂದುವ ದಿನಕ್ಕಾಗಿ ತಾನು ಹಾತೊರೆಯುತ್ತಿದ್ದೆ ಎಂದು ಹೇಳಿದ ಅವರು  ಇಂದು ಐತಿಹಾಸಿಕ ದಿನ” ಎಂದಿದ್ದಾರೆ.

ಮಲೇರಿಯಾ ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆಯಿಂದ ಹರಡುವ ರೋಗವು ಜ್ವರ, ಶೀತ ಮತ್ತು ಫ್ಲೂ ತರಹದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಮಯೋಚಿತ ಚಿಕಿತ್ಸೆಯಿಲ್ಲದೇ ಇದ್ದರೆ ರೋಗಿಗಳ ಮೇಲೆ ಇದು ತೀವ್ರ ಪರಿಣಾಮವನ್ನುಂಟು ಮಾಡಬಹುದು ಮತ್ತು ಸಾವಿಗೂ ಕಾರಣವಾಗುತ್ತದೆ. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ಪ್ರಕಾರ, 5 ವರ್ಷದೊಳಗಿನ ಮಕ್ಕಳು ಮಲೇರಿಯಾದಿಂದ ಬಳಲುತ್ತಿರುವ ಅತ್ಯಂತ ದುರ್ಬಲ ಗುಂಪು ಆಗಿದೆ.

ಕಳೆದ ಎರಡು ದಶಕಗಳಲ್ಲಿ ಸೊಳ್ಳೆಯಿಂದ ಹರಡುವ ರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತು “ತೀವ್ರ ಪ್ರಗತಿ” ಸಾಧಿಸಿದೆ ಎಂದು ಟೆಡ್ರೊಸ್ ಗಮನಿಸಿದರು ಆದರೆ ಜಾಗತಿಕವಾಗಿ, ಪ್ರಗತಿಯು “ಸ್ವೀಕಾರಾರ್ಹವಲ್ಲದ ಉನ್ನತ ಮಟ್ಟದಲ್ಲಿ” ಸ್ಥಗಿತಗೊಂಡಿದೆ. ಪ್ರತಿ ವರ್ಷ 20 ಕೋಟಿ ಪ್ರಕರಣಗಳು ಮತ್ತು 400,000 ಸಾವುಗಳು ಮಲೇರಿಯಾದಿಂದ ಸಂಭವಿಸುತ್ತವೆ.  ಹೀಗೆ ಸಾವಿಗೀಡಾದವರಲ್ಲಿ ಮೂರನೇ ಎರಡರಷ್ಟು ಆಫ್ರಿಕಾದಲ್ಲಿ ಐದು ವರ್ಷದೊಳಗಿನ ಮಕ್ಕಳು” ಎಂದು ಅವರು ಹೇಳಿದರು.

ವಿಶ್ವ ಆರೋಗ್ಯಸಂಸ್ಥೆಯ ಅಂದಾಜಿನ ಪ್ರಕಾರ, ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು 2019 ರಲ್ಲಿ ಸೊಳ್ಳೆಯಿಂದ ಹರಡುವ ರೋಗದ ಅಪಾಯದಲ್ಲಿದ್ದರು, ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳು ಉಪ-ಸಹಾರನ್ ಆಫ್ರಿಕಾದಲ್ಲಿ ಸಂಭವಿಸುತ್ತವೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 22,431 ಹೊಸ ಕೊವಿಡ್ ಪ್ರಕರಣ ಪತ್ತೆ, 318 ಮಂದಿ ಸಾವು

ಸರ್ಕಾರ ಕಿತ್ತಾಕೋಕೆ ಏನು ಕಡ್ಲೆಕಾಯಿ ಗಿಡನಾ? ಡಿಕೆ ಶಿವಕುಮಾರ್‌
ಸರ್ಕಾರ ಕಿತ್ತಾಕೋಕೆ ಏನು ಕಡ್ಲೆಕಾಯಿ ಗಿಡನಾ? ಡಿಕೆ ಶಿವಕುಮಾರ್‌
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ