Pakistan Earthquake: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ; 20 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ

Earthquake in Pakistan : ಪಾಕಿಸ್ತಾನದ ಕ್ವೆಟ್ಟಾ ಜಿಲ್ಲೆಯ ಹರ್ನಾಯ್ ಪ್ರದೇಶದಲ್ಲಿ ಇಂದು ಮುಂಜಾನೆ ಭೂಕಂಪ ಉಂಟಾಗಿದೆ. ಮನೆಯ ಚಾವಣಿ, ಗೋಡೆ ಕುಸಿದು ಬಿದ್ದ ಕಾರಣದಿಂದ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

Pakistan Earthquake: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ; 20 ಜನ ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ
ಪಾಕಿಸ್ತಾನದಲ್ಲಿ ಭೂಕಂಪ

ಇಸ್ಲಾಮಾಬಾದ್: ದಕ್ಷಿಣ ಪಾಕಿಸ್ತಾನದಲ್ಲಿ ಭಾರೀ ಭೂಕಂಪ (Pakistan Earthquake) ಸಂಭವಿಸಿದ್ದು, ಈ ದುರಂತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಮುಂಜಾನೆ 3.30ಕ್ಕೆ ಈ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.7 ಮ್ಯಾಗ್ನಿಟ್ಯೂಡ್ ತೀವ್ರತೆ ದಾಖಲಾಗಿದೆ.

ಪಾಕಿಸ್ತಾನದ ಕ್ವೆಟ್ಟಾ ಜಿಲ್ಲೆಯ ಹರ್ನಾಯ್ ಪ್ರದೇಶದಲ್ಲಿ ಇಂದು ಮುಂಜಾನೆ ಭೂಕಂಪ ಉಂಟಾಗಿದೆ. ಮನೆಯ ಚಾವಣಿ, ಗೋಡೆ ಕುಸಿದು ಬಿದ್ದ ಕಾರಣದಿಂದ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 5.7 ತೀವ್ರತೆಯ ಪ್ರಬಲ ಭೂಕಂಪದಿಂದ 200ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲೂ ಭೂಕಂಪದಿಂದ ಹಾನಿಯಾಗಿದ್ದು, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಸಿಕ್ಕಿಲ್ಲ.

ಬೆಳಗಿನ ಜಾವ ಎಲ್ಲರೂ ನಿದ್ರೆ ಮಾಡುತ್ತಿರುವಾಗ ಭೂಕಂಪ ಉಂಟಾಗಿರುವುದರಿಂದ ಬಹುತೇಕರಿಗೆ ತಕ್ಷಣ ಮನೆಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಭೂಕಂಪದ ತೀವ್ರತೆಯನ್ನು ಗಮನಿಸಿದರೆ ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಗಾಯಗೊಂಡವರನ್ನು ಬಲೂಚಿಸ್ತಾನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರದಿಂದ ಭೂಕಂಪ ನಡೆದ ಸ್ಥಳಕ್ಕೆ ಹೆಲಿಕಾಪ್ಟರ್​ಗಳನ್ನು ಕಳುಹಿಸಲಾಗಿದ್ದು, ಅದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ವಿಜಯಪುರ ಸಿಂದಗಿಯಲ್ಲಿ ಮತ್ತೆ ಭೂಕಂಪದ ಅನುಭವ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕ

RSS ಬಗ್ಗೆ ಹೆಚ್‌ಡಿಕೆ, ಸಿದ್ದರಾಮಯ್ಯ ಹೇಳಿಕೆ ವಿಚಾರ; RSS ಇಲ್ಲವೆಂದಿದ್ದರೆ ಭಾರತ ಪಾಕಿಸ್ತಾನ ಆಗುತ್ತಿತ್ತು – ಬಿ.ವೈ.ವಿಜಯೇಂದ್ರ, ಪ್ರಭು ಚೌಹಾಣ್ ತಿರುಗೇಟು

Read Full Article

Click on your DTH Provider to Add TV9 Kannada