‘ಟೆಕ್ಸಾಸ್ ಮಹಿಳೆಯರಿಗೆ ಸಿಕ್ಕ ಜಯ’; ಅಮೆರಿಕದಲ್ಲಿ ಗರ್ಭಪಾತ ನಿಷೇಧ ಕಾಯ್ದೆಗೆ ತಾತ್ಕಾಲಿಕ ತಡೆ

TV9 Digital Desk

| Edited By: Sushma Chakre

Updated on: Oct 07, 2021 | 12:13 PM

ಗರ್ಭಪಾತದ ಹಕ್ಕನ್ನು ನಿರ್ಬಂಧಿಸುವ ಟೆಕ್ಸಾಸ್‌ನ ಕಠಿಣ ಕಾನೂನಿಗೆ ತಡೆ ನೀಡಬೇಕು ಎಂದು ಜೋ ಬೈಡನ್‌ ನೇತೃತ್ವದ ಸರ್ಕಾರ ಶುಕ್ರವಾರ ಫೆಡರಲ್‌ ಕೋರ್ಟ್‌ನ ನ್ಯಾಯಾಧೀಶರನ್ನು ಒತ್ತಾಯಿಸಿತ್ತು. ಇದೀಗ 6 ವಾರಗಳ ಗರ್ಭಪಾತ ನಿಷೇಧ ಕಾನೂನಿಗೆ ತಡೆ ನೀಡಲಾಗಿದೆ.

'ಟೆಕ್ಸಾಸ್ ಮಹಿಳೆಯರಿಗೆ ಸಿಕ್ಕ ಜಯ'; ಅಮೆರಿಕದಲ್ಲಿ ಗರ್ಭಪಾತ ನಿಷೇಧ ಕಾಯ್ದೆಗೆ ತಾತ್ಕಾಲಿಕ ತಡೆ
ಸಾಂದರ್ಭಿಕ ಚಿತ್ರ

Follow us on

ವಾಷಿಂಗ್ಟನ್: ಟೆಕ್ಸಾಸ್​ನಲ್ಲಿ ಜಾರಿಯಲ್ಲಿರುವ ವಿವಾದಾತ್ಮಕ ಗರ್ಭಪಾತ ನಿಷೇಧ ಕಾನೂನಿಗೆ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದಾರೆ. ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಈ ಗರ್ಭಪಾತ ವಿರೋಧಿ ಕಾಯ್ದೆ ಅಮೆರಿಕದ ಕಠಿಣ ಕಾನೂನಾಗಿದೆ. ಯುಎಸ್ ಸುಪ್ರೀಂ ಕೋರ್ಟ್ ಆ ಕಾನೂನನ್ನು ಮುಂದುವರಿಸಲು ಅನುಮತಿಸಿದ ನಂತರ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸರ್ಕಾರಕ್ಕೆ ಇದು ಬಹಳ ದೊಡ್ಡ ಸವಾಲಾಗಿತ್ತು. ಇದೀಗ 6 ವಾರಗಳ ಗರ್ಭಪಾತ ನಿಷೇಧ ಕಾನೂನಿಗೆ ತಡೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಗರ್ಭಪಾತದ ಹಕ್ಕನ್ನು ನಿರ್ಬಂಧಿಸುವ ಟೆಕ್ಸಾಸ್‌ನ ಕಠಿಣ ಕಾನೂನಿಗೆ ತಡೆ ನೀಡಬೇಕು ಎಂದು ಜೋ ಬೈಡನ್‌ ನೇತೃತ್ವದ ಸರ್ಕಾರ ಶುಕ್ರವಾರ ಫೆಡರಲ್‌ ಕೋರ್ಟ್‌ನ ನ್ಯಾಯಾಧೀಶರನ್ನು ಒತ್ತಾಯಿಸಿತ್ತು. ಭ್ರೂಣದಲ್ಲಿ ಹೃದಯಚಟುವಟಿಕೆ ಪತ್ತೆಯಾದ ಬಳಿಕ ಗರ್ಭಪಾತ ನಡೆಸುವುದನ್ನು ನಿಷೇಧಿಸಲಿದೆ. ಆರೋಪ ಸಾಬೀತಾದರೆ 10 ಸಾವಿರ ಅಮೆರಿಕ ಡಾಲರ್‌ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿತ್ತು.

ಗರ್ಭಪಾತ ಕುರಿತಂತೆ ಮಹಿಳೆಯರ ಸಾಂವಿಧಾನಿಕ ಹಕ್ಕಿನ ಮೇಲೆ ಈ ಕಾಯ್ದೆಯ ಮೂಲಕ ಟೆಕ್ಸಾಸ್‌ ದಾಳಿ ನಡೆಸಿದೆ ಎಂದು ಜೋ ಬೈಡನ್‌ ನೇತೃತ್ವದ ಸರ್ಕಾರವು ಆಕ್ರೋಶ ವ್ಯಕ್ತಪಡಿಸಿತ್ತು. ನಿನ್ನೆ ಸಂಜೆ ನೀಡಲಾದ ಫೆಡರಲ್ ಕೋರ್ಟ್​ನ ತೀರ್ಪು ಟೆಕ್ಸಾಸ್ ರಾಜ್ಯದಾದ್ಯಂತ ಮಹಿಳೆಯರ ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಬುಧವಾರ ತಡರಾತ್ರಿ ಹೇಳಿಕೆ ನೀಡಿದ್ದಾರೆ.

ಜೋ ಬೈಡನ್ ಸರ್ಕಾರದ ನ್ಯಾಯಾಂಗ ಇಲಾಖೆ ಸೆಪ್ಟೆಂಬರ್ 9ರಂದು ಟೆಕ್ಸಾಸ್ ಮೇಲೆ ಮೊಕದ್ದಮೆ ಹೂಡಿತ್ತು. ಹಾಗೇ, ಕಾನೂನಿನ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆಯನ್ನು ಕೋರಿತ್ತು. ಅಕ್ಟೋಬರ್ 1 ವಿಚಾರಣೆಯ ಸಮಯದಲ್ಲಿ ಈ ಕ್ರಮವು ಯುಎಸ್ ಸಂವಿಧಾನವನ್ನು ಉಲ್ಲಂಘಿಸುತ್ತದೆ ಎಂದು ವಾದಿಸಲಾಗಿತ್ತು. ಸೆಪ್ಟೆಂಬರ್ 1 ರಂದು ಯುಎಸ್ ಸುಪ್ರೀಂ ಕೋರ್ಟ್ ಸಂಪ್ರದಾಯವಾದಿ ನ್ಯಾಯಮೂರ್ತಿಗಳು ಈ ಕಾಯ್ದೆ ಜಾರಿಯಲ್ಲಿದ್ದರೆ ತಪ್ಪೇನೂ ಇಲ್ಲ ಎಂದಿದ್ದರು.

ಗರ್ಭ ಧರಿಸಿ 6 ವಾರಗಳಲ್ಲಿ ಅನೇಕ ಮಹಿಳೆಯರಿಗೆ ತಾವು ಗರ್ಭಿಣಿಯಾಗಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. ಅತ್ಯಾಚಾರ ಅಥವಾ ಸಂಭೋಗದಿಂದ ಉಂಟಾಗುವ ಗರ್ಭಧಾರಣೆಗೆ ಕಾನೂನು ಯಾವುದೇ ವಿನಾಯಿತಿ ನೀಡುವುದಿಲ್ಲ. ಭ್ರೂಣದ ಹೃದಯ ಚಟುವಟಿಕೆಯನ್ನು ಪತ್ತೆಹಚ್ಚಿದ ನಂತರ ಗರ್ಭಪಾತಕ್ಕೆ ಸಹಾಯ ಮಾಡಿದ ಬಗ್ಗೆ ಯಾರಾದರೂ ಮೊಕದ್ದಮೆ ಹೂಡಿದರೆ ಅವರಿಗೆ ಕನಿಷ್ಠ 10,000 ರೂ. ಬಹುಮಾನವನ್ನು ನೀಡುವ ಮೂಲಕ ಸಾಮಾನ್ಯ ನಾಗರಿಕರು ನಿಷೇಧವನ್ನು ಜಾರಿಗೊಳಿಸಲು ಬೆಂಬಲ ನೀಡುವಂತೆ ಮಾಡಲು ಸರ್ಕಾರ ಮುಂದಾಗಿತ್ತು. ಆದರೆ, ಕಾನೂನಿನ ಟೀಕಾಕಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಯುಎಸ್ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ನಿನ್ನೆ ಫೆಡರಲ್ ಕೋರ್ಟ್ ನೀಡಿರುವ ತೀರ್ಪನ್ನು “ಟೆಕ್ಸಾಸ್​ನ ಮಹಿಳೆಯರಿಗೆ ಸಿಕ್ಕ ಗೆಲುವು” ಎಂದು ಶ್ಲಾಘಿಸಿದ್ದಾರೆ. ಫೆಡರಲ್ ನ್ಯಾಯಾಧೀಶರು ಬುಧವಾರ ಟೆಕ್ಸಾಸ್‌ನಲ್ಲಿ ಗರ್ಭಪಾತದ ಮೇಲಿನ ಸಂಪೂರ್ಣ ನಿಷೇಧವನ್ನು ತಾತ್ಕಾಲಿಕವಾಗಿ ತಡೆದಿದ್ದಾರೆ.

ಇದನ್ನೂ ಓದಿ: Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

Women Health: ಗರ್ಭಪಾತಕ್ಕೆ ಕಾರಣಗಳೇನು? ಈ ಅಂಶಗಳನ್ನು ಮಹಿಳೆಯರು ತಿಳಿದಿರುವುದು ಒಳಿತು

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada