Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

ಒಂದು ವೇಳೆ ನಾನು ಅತ್ಯಾಚಾರಕ್ಕೊಳಗಾದರೆ ನನ್ನ ಕನಸುಗಳು, ಭರವಸೆಗಳು ಮತ್ತು ಭವಿಷ್ಯದ ಆಕಾಂಕ್ಷೆಗಳ ಬಗ್ಗೆ ನಾನು ಕನಸು ಕಾಣುವಂತಿಲ್ಲ. ಅದೊಂದು ವಿಷಯವೇ ಅಲ್ಲ ಎಂದು ನಾನು ಭಯಭೀತನಾಗಿದ್ದೇನೆ. ಮನಸಿಗೆ ಅದೆಷ್ಟು ನೋವು ತರಬಲ್ಲದು ಎಂಬುದನ್ನು ನೀವು ಅರಿಯಬಹುದು ಎಂದು ನಾನು ಭಾವಿಸುತ್ತೇನೆ.

Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ
ಪ್ಯಾಕ್ಸ್​ಟನ್ ಸ್ಮಿತ್
Follow us
TV9 Web
| Updated By: guruganesh bhat

Updated on:Jun 06, 2021 | 1:59 PM

ಟೆಕ್ಸಾಸ್: 18 ವರ್ಷದ ಅಮೆರಿಕದ ವಿದ್ಯಾರ್ಥಿನಿಯೋರ್ವಳು ತನ್ನ ಶಾಲೆಯ ಬೀಳ್ಕೊಡುಗೆ ಸಮಾರಂಭದಲ್ಲಿ ಗರ್ಭಪಾತ ವಿರೋಧಿ ಕಾನೂನುಗಳ ವಿರುದ್ಧ ಮಾತನಾಡಿರುವ ವಿಡಿಯೋ ಇದೀಗ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಡಲ್ಲಾಸ್ ನಗರದ ಪ್ಯಾಕ್ಸ್​ಟನ್ ಸ್ಮಿತ್ ಎಂಬ 18 ವರ್ಷ ಹರೆಯದ ಯುವತಿಯೇ ಈ ವಿದ್ಯಾರ್ಥಿನಿ. ಬೀಳ್ಕೊಡುಗೆ ಸಮಾರಂಭದಲ್ಲಿ ತನಗೆ ದೊರೆತ ವೇದಿಕೆಯ ಮೇಲೆ ಮಾತನಾಡುವ ಅವಕಾಶವನ್ನು ಈಕೆ ಗರ್ಭಪಾತ ವಿರೋಧಿ ಕಾನೂನುಗಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಲು ಬಳಸಿಕೊಂಡಿದ್ದಾಳೆ.

ನನಗೂ ಕನಸುಗಳಿವೆ. ಆಸೆಗಳಿವೆ. ಜೀವನದ ಮುಂದಿನ ದಿನಗಳಲ್ಲಿ ಹಲವು ಮಹತ್ವದ ವಿಷಯಗಳನ್ನು ಸಾಧಿಸಬೇಕೆಂಬ ಹಲವು ಇಚ್ಛೆಗಳಿವೆ. ಭವಿಷ್ಯವನ್ನು ಜೋಪಾನ ಮಾಡಬೇಕು ಎಂಬ ಕನಸಿನಲ್ಲಿ ನಾವು ಕೆಲಸ ಮಾಡುತ್ತೇವೆ. ಆದರೆ ನಮ್ಮ ಭವಿಷ್ಯದ ಮೇಲಿನ ನಮ್ಮ ನಿಯಂತ್ರವನ್ನು ನಮ್ಮನ್ನು ಕೇಳದೆಯೇ ನಮ್ಮಿಂದ ದೂರ ಮಾಡಲಾಗಿದೆ.  ನನ್ನ ಗರ್ಭನಿರೋಧಕಗಳು ವಿಫಲವಾದರೆ ಎಂಬ ಕುರಿತು ನಾನು ಭಯಭೀತನಾಗಿದ್ದೇನೆ. ಒಂದು ವೇಳೆ ನಾನು ಅತ್ಯಾಚಾರಕ್ಕೊಳಗಾದರೆ ನನ್ನ ಕನಸುಗಳು, ಭರವಸೆಗಳು ಮತ್ತು ಭವಿಷ್ಯದ ಆಕಾಂಕ್ಷೆಗಳ ಬಗ್ಗೆ ನಾನು ಕನಸು ಕಾಣುವಂತಿಲ್ಲ. ಅದೊಂದು ವಿಷಯವೇ ಅಲ್ಲ ಎಂದು ನಾನು ಭಯಭೀತನಾಗಿದ್ದೇನೆ. ಮನಸಿಗೆ ಅದೆಷ್ಟು ನೋವು ತರಬಲ್ಲದು ಎಂಬುದನ್ನು ನೀವು ಅರಿಯಬಹುದು ಎಂದು ನಾನು ಭಾವಿಸುತ್ತೇನೆ. ನಿಮ್ಮ ಸ್ವಂತ ದೇಹದ ಮೇಲೆ ಸ್ವಾಯತ್ತತೆಯನ್ನು ನಿಮ್ಮಿಂದ ಕಿತ್ತುಕೊಳ್ಳುವುದು ಎಷ್ಟು ಅಮಾನವೀಯ ಎಂಬುದು ನಿಮಗೆ ತಿಳಿದಿದೆಯಲ್ಲವೇ? ಎಂದು 18ರ ಹರೆಯದ ಯುವತಿ ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ತನ್ನ ಆಕ್ರೋಶವನ್ನು ಹೊರಹಾಕಿದ್ದಾಳೆ.

ಈ ಬಾಲಕಿಯ ಮಾತುಗಳನ್ನು ನೀವು ಇಲ್ಲಿ ಕೇಳಬಹುದು.

ಅಮೆರಿಕ ಮತ್ತು ಕೆಲವು ಐರೋಪ್ಯ ದೇಶಗಳಲ್ಲಿ ಗರ್ಭಪಾತದ ಕುರಿತು ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಟೆಕ್ಸಾಸ್​ನಲ್ಲಿ ಗರ್ಭಪಾತ ವಿರೋಧಿ ಕಾನೂನು ಜಾರಿಗೊಂಡಿದ್ದು, ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ಗರ್ಭಪಾತ ವಿರೋಧಿ ಕಾನೂನು ಜಾರಿಗೊಳಿಸಿದ್ದಕ್ಕಾಗಿ ಕೆಲವು ದೇಶಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ ಉದಾಹರಣೆಗಳೂ ಸಹ ಇವೆ. ಗರ್ಭಪಾತ ಮಹಿಳೆಯ ಮೂಲಭೂತ ಹಕ್ಕು ಎಂಬ ಚರ್ಚೆಗಳು ಸಹ ಆಗಾಗ ನಡೆಯುತ್ತಿರುತ್ತವೆ.

ಸದ್ಯ ಈ ವಿಡಿಯೋ ಟ್ವಿಟರ್​ನಲ್ಲಿ ಸಂಚಲನ ಸೃಷ್ಟಿಸಿದ್ದು, ಗರ್ಭಪಾತ ವಿರೋಧಿ ನೀತಿಗಳನ್ನು ಟೀಕಿಸಿದ ಈ ಯುವತಿಯ ಕುರಿತು ಶ್ಲಾಘನೆಯನ್ನೂ ಹಲವರು ವ್ಯಕ್ತಪಡಿಸಿದ್ದಾರೆ. ಈ ಯುವತಿ ಸತ್ಯವನ್ನು ಯಾರ ಹಂಗಿಲ್ಲದೇ ಸಾರ್ವನಿಕ ಭಾಷಣದಲ್ಲಿ ತನಗೆ ದೊರೆತ ಅವಕಾಶ ಬಳಸಿಕೊಂಡು ಮಾತನಾಡಿದ್ದಾಳೆ. ಈಕೆಯ ಮಾತುಗಳನ್ನು ಕೇಳಿ ಆನಂದಭಾಷ್ಪ ಮೂಡುತ್ತಿದೆ ಎಂದು ಸಹ ಕೆಲವು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಈ ಭಾಷಣದ ನಂತರ ಪ್ಯಾಕ್ಸ್​ಟನ್ ಸ್ಮಿತ್ರ ವಿದ್ಯಾಭ್ಯಾಸಕ್ಕೂ ತೊಂದರೆ ಉಂಟಾಗಿದೆ.

ಇದನ್ನೂ ಓದಿ: ‘ನನ್ನ ಕೋಳಿಗೆ ಮಲ ಬದ್ಧತೆ ಸಮಸ್ಯೆ’ ಚಿಕಿತ್ಸೆಗೆಂದು ಹೊರಬಂದೆ, ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಕಾರಣ ಹೇಳಿದ ಗದಗ ವ್ಯಕ್ತಿ; ವಿಡಿಯೋ ವೈರಲ್

ವೈರಲ್ ವಿಡಿಯೋ; ಧೋನಿ ಸಲಹೆಯಂತೆ ಬೌಲ್​ ಮಾಡಿದ್ದ ಸಚಿನ್, ಅಫ್ರಿದಿ ವಿಕೆಟ್ ಪತನ.. ಹೇಗಿತ್ತು ಗೊತ್ತಾ ಆ ಕ್ಷಣ?

(Viral Video 18 year student speech on Anti Abortion Law in Texas America)

Published On - 4:43 pm, Fri, 4 June 21

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ