AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ನಿಂದ ಮೃತಪಟ್ಟ ಸಿಂಹ; ಪ್ರಾಣಿಗಳನ್ನೂ ಬಾಧಿಸುತ್ತಿದೆ ಅಪಾಯ

ಸದ್ಯ ತಮಿಳುನಾಡಿನಲ್ಲಿ ಕೊವಿಡ್ ನಿಯಂತ್ರಿಸಲೋಸುಗ ಲಾಕ್​ಡೌನ್ ಜಾರಿಯಲ್ಲಿದೆ. ಹೀಗಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಇದೇ ಮೃಗಾಲಯದ 8 ಸಿಂಹಗಳಿಗೆ ಕಳೆದ ತಿಂಗಳು ಕೊವಿಡ್ ಸೋಂಕು ದೃಢಪಟ್ಟಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.  

ಕೊವಿಡ್​ನಿಂದ ಮೃತಪಟ್ಟ ಸಿಂಹ; ಪ್ರಾಣಿಗಳನ್ನೂ ಬಾಧಿಸುತ್ತಿದೆ ಅಪಾಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: guruganesh bhat

Updated on: Jun 04, 2021 | 5:57 PM

ಚೆನ್ನೈ: ತಮಿಳುನಾಡಿನ ಅರಿಗ್ನಾರ್ ಅಣ್ಣಾ ಪ್ರಾಣಿ ಸಂಗ್ರಹಾಲಯದಲ್ಲಿ ಗಂಡು ಸಿಂಹವೊಂದು ಮೃತಪಟ್ಟಿದ್ದು, ಕೊವಿಡ್ ಸೋಂಕಿನಿಂದ ಸಾವನ್ನಪ್ಪಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಖಚಿತತೆಗಾಗಿ ಭೂಪಾಲ್​ನ ಪ್ರಾಣಿಗಳ ಖಾಯಿಲೆಗಳ ಕುರಿತು ಸಂಶೋಧನೆ ನಡೆಸುವ ರಾಷ್ಟ್ರೀಯ ಸಂಸ್ಥೆಗೆ ಮೃತಪಟ್ಟ ಸಿಂಹದ ಮಾದರಿ ರವಾನಿಸಲಾಗಿದ್ದು, ಪರೀಕ್ಷೆಯಲ್ಲಿ ಸಿಂಹಕ್ಕೆ ಕೊವಿಡ್ ಸೋಂಕು ದೃಢಪಟ್ಟಿರುವುದಾಗಿ ತಿಳಿಸಲಾಗಿದೆ.

ಮೃತಪಟ್ಟ ಗಂಡು ಸಿಂಹದ ಜತೆಗೆ ಇನ್ನೂ ಕೆಲವು ಸಿಂಹಗಳಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಕೊವಿಡ್ ಪರೀಕ್ಷೆಗಾಗಿ ಈ ಎಲ್ಲ ಸಿಂಹಗಳ ಅಗತ್ಯ ಮಾದರಿಗಳನ್ನು ಭೂಪಾಲ್​ಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಸಿಂಹಗಳಿಕೆ ಕೊವಿಡ್ ಸೋಂಕು ಇರುವುದು ಖಚಿತವಾಗಿದೆ. ಮೃತಪಟ್ಟ ಸಿಂಹ ಕಳೆದ ವಾರ ಅನಾರೋಗ್ಯಕ್ಕೆ ಈಡಾಗಿದ್ದು, ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಕೊವಿಡ್ ಇರುವ ಬಗ್ಗೆ ಅನುಮಾನಗೊಂಡು ಪರೀಕ್ಷೆಗೆ ಮಾದರಿ ಕಳುಹಿಸಿದ್ದರು.

ಸದ್ಯ ತಮಿಳುನಾಡಿನಲ್ಲಿ ಕೊವಿಡ್ ನಿಯಂತ್ರಿಸಲೋಸುಗ ಲಾಕ್​ಡೌನ್ ಜಾರಿಯಲ್ಲಿದೆ. ಹೀಗಾಗಿ ಪ್ರಾಣಿ ಸಂಗ್ರಹಾಲಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಇದೇ ಮೃಗಾಲಯದ 8 ಸಿಂಹಗಳಿಗೆ ಕಳೆದ ತಿಂಗಳು ಕೊವಿಡ್ ಸೋಂಕು ದೃಢಪಟ್ಟಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

ಹೈದರಾಬಾದ್​ನಲ್ಲೂ ದೃಢಪಟ್ಟಿತ್ತು ಸಿಂಹಗಳಿಗೆ ಸೋಂಕು

ಹೈದರಾಬಾದ್​ ನಗರದ ಜೂಲಾಜಿಕಲ್ ಪಾರ್ಕ್​ನಲ್ಲಿರುವ ಎಂಟು ಸಿಂಹಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಇದೇ ಮೊದಲಬಾರಿಗೆ ಹೈದರಾಬಾದ್​ನಲ್ಲಿ ಎಂಟು ಸಿಂಹಗಳಲ್ಲಿ ಕೊವಿಡ್ 19 ಸೋಂಕು ಕಾಣಿಸಿಕೊಂಡಿತ್ತು

ಎಂಟು ಸಿಂಹಗಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಏಪ್ರಿಲ್​ 29ರಂದು ಅವುಗಳ ಗಂಟಲುದ್ರವದ ಮಾದರಿ ಸಂಗ್ರಹಿಸಿ, ಆರ್​ಟಿ-ಪಿಸಿಆರ್​​ ಟೆಸ್ಟ್​ ಮಾಡಿಸಲಾಗಿತ್ತು. ಅದರ ವರದಿ ಈಗ ಬಂದಿದ್ದು ಎಲ್ಲ ಪ್ರಾಣಿಗಳಲ್ಲೂ ಸೋಂಕು ದೃಢಪಟ್ಟಿತ್ತು

ಸದ್ಯ ಎಲ್ಲ ಸಿಂಹಗಳನ್ನೂ ಸಂಪೂರ್ಣವಾಗಿ ಐಸೋಲೇಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸಿಂಹಗಳೂ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಈ ನೆಹರೂ ಜೂಲಾಜಿಕಲ್​ ಪಾರ್ಕ್​ನಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಸಾರ್ವಜನಿಕರ ವೀಕ್ಷಣೆಗೂ ನಿರ್ಬಂಧ ಹೇರಲಾಗಿತ್ತು.. ಮೃಗಾಲಯದ ಸಿಬ್ಬಂದಿ ಸಿಂಹಗಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದಾರೆ. ಆಹಾರವನ್ನೂ ಸಹ ಸೋಂಕು ರಹಿತಗೊಳಿಸಿ, ಪರೀಕ್ಷಿಸಿ ನೀಡಲಾಗಿತ್ತು.

ಬೇರೆ ಕೆಲವು ದೇಶಗಳಲ್ಲಿ ಕಳೆದ ವರ್ಷವೇ ಇಂಥ ಕೇಸ್​ಗಳು ವರದಿಯಾಗಿವೆ. ಕಳೆದ ಏಪ್ರಿಲ್​ನಲ್ಲಿ ನ್ಯೂಯಾರ್ಕ್​ ಸಿಟಿಯಲ್ಲಿ ಹುಲಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಮನುಷ್ಯನ ಮೂಲಕ ಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಕೊರೊನಾ ಸೋಂಕು ಇದ್ದರೂ ಕೆಲವರಲ್ಲಿ ಅದರ ಲಕ್ಷಣಗಳು ಗೋಚರಿಸುವುದಿಲ್ಲ. ಅಂಥವರಿಂದಲೇ ಪ್ರಾಣಿಗಳಿಗೆ ಕೊವಿಡ್ ತಗುಲುತ್ತದೆ ಎಂಬುದು ದೃಢಪಟ್ಟಿದೆ.

ಇದನ್ನೂ ಓದಿ:  ಮೈಸೂರು ಮೃಗಾಲಯಕ್ಕೂ ಎದುರಾಯ್ತು ಲಾಕ್​ಡೌನ್ ಸಂಕಷ್ಟ; ಪ್ರಾಣಿಗಳ ನೆರವಿಗೆ ಬರುವಂತೆ ಪ್ರಾಧಿಕಾರದಿಂದ ಮನವಿ

ಲಾಕ್​ಡೌನ್ ಯಶಸ್ವಿಗೊಳಿಸಲು, ಕೊರೊನಾ ಸೋಂಕಿತರಿಗೆ ಸಹಾಯ ಮಾಡಲು ನಾವು ಸಿದ್ಧ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಳಿಕೆ (1 lion died from Covid 19 in Tamil Nadu)

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ