ಮೈಸೂರು ಮೃಗಾಲಯಕ್ಕೂ ಎದುರಾಯ್ತು ಲಾಕ್​ಡೌನ್ ಸಂಕಷ್ಟ; ಪ್ರಾಣಿಗಳ ನೆರವಿಗೆ ಬರುವಂತೆ ಪ್ರಾಧಿಕಾರದಿಂದ ಮನವಿ

ಕಳೆದ ವರ್ಷ ಜಿಲ್ಲಾ‌ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ 3.5 ಕೋಟಿ ಯಷ್ಟು ಹಣ ಸಂಗ್ರಹಿಸಿ‌ ಮೃಗಾಲಯಕ್ಕೆ ನೆರವಾಗಿದ್ದರು.‌ ಇದೀಗ ಅದಕ್ಕಿಂತ ಕೆಟ್ಟ ಪರಿಸ್ಥಿತಿ ಮೃಗಾಲಯಕ್ಕೆ ಬಂದಿದೆ. ಹೀಗಾಗಿ ನೆರವಿಗೆ ದಾವಿಸಿ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ಮೃಗಾಲಯಕ್ಕೂ ಎದುರಾಯ್ತು ಲಾಕ್​ಡೌನ್ ಸಂಕಷ್ಟ; ಪ್ರಾಣಿಗಳ ನೆರವಿಗೆ ಬರುವಂತೆ ಪ್ರಾಧಿಕಾರದಿಂದ ಮನವಿ
ಚಾಮರಾಜೇಂದ್ರ ಮೃಗಾಲಯ
Follow us
|

Updated on: May 10, 2021 | 12:16 PM

ಮೈಸೂರು: ಕೊರೊನಾದ ಎರಡನೇ ಅಲೆಯಿಂದಾಗಿ ದೇಶವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದೆ. ಈ ನಡುವೆ ಲಾಕ್​ಡೌನ್​ನಿಂದಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಹೀಗಿರುವಾಲೇ ಪ್ರಾಣಿಗಳಿಗೂ ಕೂಡ ಲಾಕ್​ಡೌನ್ ಹೊಡೆತ ಕೊಟ್ಟಿದ್ದು, ಮೈಸೂರು ಜಿಲ್ಲೆಯ ಮೃಗಾಲಯದಲ್ಲಿ ಸಂಕಷ್ಟ ಎದುರಾಗಿದೆ. ಚಾಮರಾಜೇಂದ್ರ ಮೃಗಾಲಯಕ್ಕೆ ತನ್ನದೆಯಾದ ಇತಿಹಾಸ ಇದೆ.‌ ಆದರೆ ಈ‌ ಲಾಕ್​ಡೌನ್​ನಿಂದ ಮೃಗಾಲಯ ತೀರ ಸಂಕಷ್ಟಕ್ಕೆ ಸಿಲುಕಿದೆ.‌ ಕೇವಲ ಮೈಸೂರು ಮಾತ್ರವಲ್ಲದೆ ರಾಜ್ಯದ 9 ಮೃಗಾಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ದಾನಿಗಳು ಮೃಗಾಲಯದ ನೆರವಿಗೆ ಬನ್ನಿ ಎಂದು ಪ್ರಾಧಿಕಾರ ಮನವಿ ಮಾಡುತ್ತಿದೆ.

ಮೈಸೂರು ಮೃಗಾಲಯ‌ ಎಂದರೆ ಕಿರಿಯರಿಂದ ಹಿಡಿದು ಹಿರಿಯರವರೆಗು ಆಕರ್ಷಣೆಯಾಗಿತ್ತು. ಪ್ರತಿದಿನ‌ ದೇಶದ ಮೂಲೆ‌ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದರು. ಆದರೆ ಕೊರೊನಾ ವೈರಸ್​ನಿಂದ ಮೃಗಾಲಯ ಬಂದ್ ಆಗಿದೆ. ಕಳೆದ ವರ್ಷವು ಇದೆ ರೀತಿ ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಕಷ್ಟ ಅನುಭವಿಸಿತ್ತು.‌ ದಾನಿಗಳ ನೆರವಿನಿಂದ ಹೇಗೋ ಮೃಗಾಲಯ ಚೇತರಿಸಿಕೊಂಡಿತ್ತು. ಇದೀಗಾ ಪ್ರವಾಸಿಗರು ಒಬ್ಬೊಬ್ಬರಾಗೆ ಬರುತ್ತಿದ್ದರು ಆದರೆ ಮತ್ತೆ ಕೊರೊನಾ ಎರಡನೇ ಅಲೆಯಿಂದಾಗಿ ಲಾಕ್​ಡೌನ್​ ಆಗಿದ್ದು, ತೀರ ಸಂಕಷ್ಟಕ್ಕೆ ಸಿಲುಕಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ತಿಳಿಸಿದ್ದಾರೆ.

ಮೈಸೂರಿನ ಮೃಗಾಲಯ ನಿರ್ವಹಣೆಗೆ ಒಂದು ತಿಂಗಳಿಗೆ ಎರಡು ಕೋಟಿಯಷ್ಟು ಹಣ ಬೇಕು. ಸದ್ಯ ಮೃಗಾಲಯಕ್ಕೆ ಬರುವ ಪ್ರವಾಸಿಗರಿಂದ ಸಂಗ್ರಹಿಸುವ ಹಣದಿಂದಲೆ ಮೃಗಾಲಯದ ಪ್ರಾಣಿಗಳಿಗೆ ಪ್ರತಿದಿನದ ಆಹಾರ ವಿತರಣೆಯಗಾಗುತ್ತಿತ್ತು. ಆದರೆ ಸದ್ಯ ಕಳೆದೊಂದು ತಿಂಗಳಿಂದ ಮೃಗಾಲಯ ಬಂದ್ ಆಗಿರುವುದಿಂದ ಬರುತ್ತಿದ್ದ ಅಲ್ಪ ಆದಾಯ ಕೂಡ ಸದ್ಯ ಬಂದ್ ಆಗಿದೆ.‌ ಇದರಿಂದ ಪ್ರಾಣಿಗಳ ಆಹಾರಕ್ಕು ಸಮಸ್ಯೆ ತಲೆದೂರಿದೆ. ಕಳೆದ ವರ್ಷ ಜಿಲ್ಲಾ‌ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ 3.5 ಕೋಟಿ ಯಷ್ಟು ಹಣ ಸಂಗ್ರಹಿಸಿ‌ ಮೃಗಾಲಯಕ್ಕೆ ನೆರವಾಗಿದ್ದರು.‌ ಇದೀಗ ಅದಕ್ಕಿಂತ ಕೆಟ್ಟ ಪರಿಸ್ಥಿತಿ ಮೃಗಾಲಯಕ್ಕೆ ಬಂದಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಹೇಳಿದ್ದಾರೆ.

ಮೈಸೂರು ಮತ್ತು ಬನ್ನೆರುಗಟ್ಟ ಮೃಗಾಲಯದಿಂದಲೆ ರಾಜ್ಯದ ಇನ್ನುಳಿದ ಏಳು ಮೃಗಾಲಯಗಳ ನಿರ್ವಹಣೆ‌ ಆಗುತಿತ್ತು. ಪ್ರತಿ ತಿಂಗಳು‌ ಮೃಗಾಲಯ ನಿರ್ವಹಣೆಗೆ 65 ಕೋಟಿ ಹಣ ಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮೃಗಾಲಯ ತೀರ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ದಾನಿಗಳು ನೆರವಿಗೆ ಬನ್ನಿ. ಮೃಗಾಲಯಕ್ಕೆ ಬರುವ ಅವಶ್ಯಕತೆ ಇಲ್ಲ ಮನೆಯಲ್ಲಿ ಕುಳಿತು‌ ಜೂಸ್ ಆ್ಯಫ್ ಮೂಲಕ ನೆರವು ನೀಡಬಹುದಾಗಿದೆ. ಮೃಗಾಲಯಕ್ಕೆ ನೆರವು ನೀಡಿದರೆ ಟ್ಯಾಕ್ಸ್ ಎಕ್ಷಪ್ಷನ್ ಕೂಡ ಇದೆ ಎಂದು ಮೃಗಾಲಯ ಪ್ರಾಧಿಕಾರ ಮನವಿ ಮಾಡಿದೆ.

ಇದನ್ನೂ ಓದಿ:

2 ಸಿಂಹಗಳಿಗೆ ಕೊರೊನಾ ಸೋಂಕು ಧೃಡ; ಉತ್ತರ ಪ್ರದೇಶದ ಇಟಾವಾ ಸಫಾರಿ ಪಾರ್ಕ್‌ನಲ್ಲಿ ಆತಂಕ

ಮೈಸೂರು ಮೃಗಾಲಯದ ಪ್ರಾಣಿಗಳಿಗಾಗಿ ಬಂತು ಶವರ್​: ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ