ವೃದ್ಧ ತಾಯಿಯ ಅಸ್ಥಿ ತೆಗೆದುಕೊಂಡು ಹೋಗುತ್ತಿದ್ದ ಕಾರಿಗೂ ತಡೆ; ಕಾರು ಬಿಡಲು ಸಾಧ್ಯವಿಲ್ಲ ಅಂತಾ ವಾಪಸ್ ಕೈ ಮುಗಿದ ಪೊಲೀಸರು
ಪೊಲೀಸರು ಅಸ್ಥಿ ತೆಗೆದುಕೊಂಡು ಹೋಗಲು ಸಹ ಬಿಡುತ್ತಿಲ್ಲ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕಾರಿಗೆ ತಡೆಯೊಡ್ಡಿರುವ ಪ್ರಸಂಗ ನಡೆದಿದೆ. ವೃದ್ದ ತಾಯಿಯ ಮಕ್ಕಳು ಅವರ ಅಸ್ಥಿಯನ್ನು ಕೈಯ್ಯಲ್ಲೇ ಹಿಡಿದುಕೊಂಡು ಪೊಲೀಸರಿಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ.
ಬೆಂಗಳೂರು: ಕೊವಿಡ್ ರಾಕ್ಷಸನನ್ನು ಹೆಡೆಮುರಿಗೆ ಕಟ್ಟಲು ರಾಜ್ಯ ಸರ್ಕಾರ ಪೊಲೀಸರಿಗೆ ಖಡಕ್ ಆದೇಶ ನೀಡಿದೆ. 10 ಗಂಟೆ ನಂತರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಆಗಿದೆ. ಅದಕ್ಕೂ ಮುನ್ನ ಹತ್ತು ಗಂಟೆಗೆ ಹತ್ತು ನಿಮಿಷ ಬಾಕಿ ಇದ್ದರೂ ವಾಹನಗಳ ಓಡಾಟ ನಿಂತಿಲ್ಲ. ಜನರಿನ್ನೂ ಪರಿಸ್ಥಿತಿಯ ಗಂಭೀರತೆ ಅರಿತುಕೊಳ್ಳದೆ ಕೊನೆಯ ಕ್ಷಣದಲ್ಲಿ ತಮ್ಮ ಅವಸರಕ್ಕೆ ಬೇಕಾದಂತೆ ಸಂಚಾರ ಮಾಡುತ್ತಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಕೃಪಾ ನಿಧಿ ಸರ್ಕಲ್ ನಲ್ಲಿ ಲಾಕ್ ಡೌನ್ ಉಲ್ಲಂಘನೆ ಮಾಡಿದವರಿಗೆ ಡಿಸಿಪಿ ಶ್ರೀನಾಥ್ ಜೋಶಿ ಅವರು ಪ್ರಮಾಣವಚನೆ ಭೋಧಿಸುತ್ತಿದ್ದಾರೆ. ಕೊವಿಡ್ ನಿಯಮ ಉಲ್ಲಂಘನೆ ಇನ್ನು ಮುಂದೆ ಮಾಡುವುದಿಲ್ಲ ಎಂಬುದು ಪ್ರಮಾಣ ವಚನದ ಸಾರಾಂಶವಾಗಿದೆ. ಈ ಮಧ್ಯೆ ಖೇದಕರ ಸಂಗತಿಯೊದು ನಡೆದಿದೆ.
ಕೊರೊನಾದಿಂದ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಸ್ಥಿ ತೆಗೆದುಕೊಂಡು ಹೋಗುತ್ತಿದ್ದ ಕುಟುಂಬವೊಂದರ ಕಾರಿಗೂ ತಡೆಯೊಡ್ಡಲಾಗಿದೆ. ಕಾರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಮೈಸೂರಿನ ಮಹಿಳೆಯೊಬ್ಬರು (ವೃದ್ಧ ತಾಯಿ) ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಹಾಗಾಗಿ ಮೃತರ ಅಸ್ಥಿಯನ್ನು ಮೈಸೂರಿಗೆ ತೆಗೆದುಕೊಂಡು ಹೋಗುವಾಗ ಈ ಖೇದಕರ ಪ್ರಸಂಗ ನಡೆದಿದೆ.
ಮೃತ ಮಹಿಳೆಯ ಕುಟುಂಬಸ್ಥರು ತಮ್ಮ ಮನೆ ಮೈಸೂರಿನಲ್ಲಿ ಇದೆ. ಹಾಗಾಗಿ ಅಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರೂ ಪೊಲೀಸರು ಕೇಳುತ್ತಿಲ್ಲ. ಪೊಲೀಸರು ಅಸ್ಥಿ ತೆಗೆದುಕೊಂಡು ಹೋಗಲು ಸಹ ಬಿಡುತ್ತಿಲ್ಲ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಕಾರಿಗೆ ತಡೆಯೊಡ್ಡಿರುವ ಪ್ರಸಂಗ ನಡೆದಿದೆ. ವೃದ್ದ ತಾಯಿಯ ಮಕ್ಕಳು ಅವರ ಅಸ್ಥಿಯನ್ನು ಕೈಯ್ಯಲ್ಲೇ ಹಿಡಿದುಕೊಂಡು ಪೊಲೀಸರಿಗೆ ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ. ಕಾರನ್ನು ಬಿಡಲು ಸಾಧ್ಯವಿಲ್ಲ ಅಂತಾ ಪೊಲೀಸರು ವಾಪಸ್ ಕೈ ಮುಗಿದು ಬೇಡಿಕೊಳ್ತಿರೋ ದೃಶ್ಯ ಕಂಡುಬಂದಿದೆ.
(Covid Curfew bengaluru police not allow ashes of a covid patient to be transported to mysore)