ವೈರಲ್ ವಿಡಿಯೋ; ಧೋನಿ ಸಲಹೆಯಂತೆ ಬೌಲ್​ ಮಾಡಿದ್ದ ಸಚಿನ್, ಅಫ್ರಿದಿ ವಿಕೆಟ್ ಪತನ.. ಹೇಗಿತ್ತು ಗೊತ್ತಾ ಆ ಕ್ಷಣ?

ವೈರಲ್ ವಿಡಿಯೋ; ಧೋನಿ ಸಲಹೆಯಂತೆ ಬೌಲ್​ ಮಾಡಿದ್ದ ಸಚಿನ್, ಅಫ್ರಿದಿ ವಿಕೆಟ್ ಪತನ.. ಹೇಗಿತ್ತು ಗೊತ್ತಾ ಆ ಕ್ಷಣ?
ಧೋನಿ ಸಲಹೆಯಂತೆಯೇ ಬೌಲ್​ ಮಾಡಿದ್ದ ಸಚಿನ್

ಸಚಿನ್ ಧೋನಿಯ ಸಲಹೆಯನ್ನು ಅನುಸರಿಸಿ ನಿಖರವಾಗಿ ಅದನ್ನು ಮಾಡಿದರು, ಅದಕ್ಕಾಗಿ ಅವರಿಗೆ ಬಹುಮಾನ ಸಿಕ್ಕಿತು. ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಅಫ್ರಿದಿ ಸ್ಟಂಪ್ ಔಟ್​ಗೆ ಬಲಿಯಾಗಿದ್ದರು.

pruthvi Shankar

|

Jun 03, 2021 | 7:37 PM

ಮಹೇಂದ್ರ ಸಿಂಗ್ ಧೋನಿ ಅನೇಕ ಆಟಗಾರರಿಗೆ ಆಟಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುವುದನ್ನು ನೀವು ನೋಡಿರಬೇಕು. ಬೌಲಿಂಗ್‌ನ ತಂತ್ರಗಳನ್ನು ಹೇಳುವುದು ಅಥವಾ ಬ್ಯಾಟಿಂಗ್ ಕುರಿತು ಸಲಹೆಗಳನ್ನು ನೀಡುವುದು, ಧೋನಿ ತಮ್ಮ ಎಲ್ಲ ಅನುಭವಗಳನ್ನು ಕ್ರಿಕೆಟ್​ಗಾಗಿ ಸುರಿದಿದ್ದಾರೆ. ಅಶ್ವಿನ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ವಿಶೇಷವಾಗಿ ಅವರು ಯಾವ ಚೆಂಡನ್ನು ಯಾವಾಗ ಬೌಲ್ ಮಾಡಬೇಕು ಮತ್ತು ಅದು ಎಲ್ಲಿರಬೇಕು ಎಂದು ಹೇಳುತ್ತಿದ್ದರು. ಆದರೆ ಧೋನಿ ಸಚಿನ್ ತೆಂಡೂಲ್ಕರ್ ಅವರಿಗೆ ಬೌಲಿಂಗ್‌ಗೆ ಸಂಬಂಧಿಸಿದ ಸಲಹೆಯನ್ನೂ ನೀಡಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಪಂದ್ಯದ ವೇಳೆ ಪಾಕಿಸ್ತಾನಿ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿದಿ ವಿಕೆಟ್ ಕಬಳಿಸಲು ಧೋನಿ ಇದನ್ನು ಮಾಡಿದ್ದಾರೆ.

ವರ್ಷ 2007. ಪಾಕಿಸ್ತಾನ ತಂಡವು ಭಾರತ ಪ್ರವಾಸದಲ್ಲಿದ್ದು, ಉಭಯ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗುವಾಹಟಿಯಲ್ಲಿ ಆಡಲಾಗುತ್ತಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವಾಗ ಪಾಕಿಸ್ತಾನ 30 ಓವರ್‌ಗಳಲ್ಲಿ 3 ವಿಕೆಟ್‌ಗೆ 105 ರನ್ ಗಳಿಸಿತು. ದೊಡ್ಡ ಸ್ಕೋರ್‌ಗಾಗಿ ಅವರು ವೇಗವಾಗಿ ರನ್ ಗಳಿಸಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಶಾಹಿದ್ ಅಫ್ರಿದಿ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು. ಬಂದ ಕೂಡಲೇ ಪಾಕಿಸ್ತಾನದ ಸ್ಕೋರ್ ಬೋರ್ಡ್‌ನಲ್ಲಿ ಮುಂದಿನ 6 ಓವರ್‌ಗಳಲ್ಲಿ 42 ರನ್ ಸೇರಿಸಲಾಯಿತು. ಇನ್ನೊಂದು ತುದಿಯಿಂದ, ಮೊಹಮ್ಮದ್ ಯೂಸುಫ್ ಅಫ್ರಿದಿಗೆ ಬೆಂಬಲ ನೀಡುತ್ತಿದ್ದರು.

ಅಫ್ರಿದಿ ಎದುರು ಸಚಿನ್​ಗೆ ಬಾಲ್ ನೀಡಿದ್ದ ಧೋನಿ ಅಫ್ರಿದಿ ಆಟವನ್ನು ನೋಡಿ ಧೋನಿ ಚೆಂಡನ್ನು ಸಚಿನ್ ತೆಂಡೂಲ್ಕರ್ ಅವರಿಗೆ ಹಸ್ತಾಂತರಿಸಿದರು. ಮೊದಲ ಓವರ್‌ನಲ್ಲಿ ಕೇವಲ 2 ರನ್‌ಗಳನ್ನು ನೀಡಿದ ನಂತರ, ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ತಮ್ಮ ಮುಂದಿನ ಓವರ್‌ನಲ್ಲಿ ದಾಳಿ ಮಾಡುವ ಉದ್ದೇಶವನ್ನು ತೋರಿಸಿದರು. ಸಚಿನ್ ತಮ್ಮ ಮುಂದಿನ ಓವರ್ ಮಾಡಿದರು, ಇದು ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್ ಆಗಿದ್ದು, ಮೊದಲ 3 ಎಸೆತಗಳಲ್ಲಿ 7 ರನ್ ಗಳಿಸಿತು. ಅಫ್ರಿದಿ ಸಚಿನ್ ಮೇಲೆ ಅಬ್ಬರಿಸುವ ಕೆಲಸ ಮಾಡುತ್ತಿದ್ದ.

ಧೋನಿಯ ಸಲಹೆಗೆ ಅಫ್ರಿದಿ ಬಲಿ 5 ನೇ ಎಸೆತವನ್ನು ಬೌಲಿಂಗ್ ಮಾಡುವ ಮೊದಲು ಧೋನಿ, ಸಚಿನ್​ಗೆ ಸಲಹೆ ನೀಡಿದರು. ಬಾಲನ್ನು ವೈಡ್​ ಗೆರೆಯ ಹತ್ತಿರ ಬೌಲಿಂಗ್ ಮಾಡಲು ಕೇಳಿಕೊಂಡರು. ಸಚಿನ್ ಧೋನಿಯ ಸಲಹೆಯನ್ನು ಅನುಸರಿಸಿ ನಿಖರವಾಗಿ ಅದನ್ನು ಮಾಡಿದರು, ಅದಕ್ಕಾಗಿ ಅವರಿಗೆ ಬಹುಮಾನ ಸಿಕ್ಕಿತು. ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಅಫ್ರಿದಿ ಸ್ಟಂಪ್ ಔಟ್​ಗೆ ಬಲಿಯಾಗಿದ್ದರು. ತೆಂಡೂಲ್ಕರ್ ವೈಡ್ ಎಸೆತವನ್ನು ಚಿರತೆಯಂತೆ ಹಿಡಿದ ಧೋನಿ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದರು.

31 ಎಸೆತಗಳಲ್ಲಿ 32 ರನ್ ಗಳಿಸಿದ ಅಫ್ರಿದಿ ಔಟಾದರು. ಅದೇ ಸಮಯದಲ್ಲಿ, ಪಾಕಿಸ್ತಾನವು ಆ ಪಂದ್ಯದಲ್ಲಿ 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 239 ರನ್ ಗಳಿಸಿತು. ಈ ಪಂದ್ಯವನ್ನು 3 ಓವರ್‌ಗಳು ಇರುವಾಗಲೆ ಭಾರತ 5 ವಿಕೆಟ್‌ಗಳಿಂದ ಜಯ ಗಳಿಸಿತ್ತು.

Follow us on

Related Stories

Most Read Stories

Click on your DTH Provider to Add TV9 Kannada