Women Health: ಗರ್ಭಪಾತಕ್ಕೆ ಕಾರಣಗಳೇನು? ಈ ಅಂಶಗಳನ್ನು ಮಹಿಳೆಯರು ತಿಳಿದಿರುವುದು ಒಳಿತು

ಕೆಲವರಿಗೆ ಆರೋಗ್ಯ ಸಮಸ್ಯೆಯಿಂದ ಗರ್ಭಪಾತ ಉಂಟಾಗುತ್ತದೆ. ಗರ್ಭಪಾತ ಉಂಟಾಗಲು ಕಾರಣವೇನು? ತಿಳಿಯಲೇ ಬೇಕಾದ ಕೆಲವು ಕಾರಣಗಳು ಈ ಕೆಳಗಿನಂತಿದೆ.

Women Health: ಗರ್ಭಪಾತಕ್ಕೆ ಕಾರಣಗಳೇನು? ಈ ಅಂಶಗಳನ್ನು ಮಹಿಳೆಯರು ತಿಳಿದಿರುವುದು ಒಳಿತು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Aug 24, 2021 | 6:44 PM

ಸಾಮಾನ್ಯವಾಗಿ ಮದುವೆಯಾದ ಹೆಣ್ಣುಮಕ್ಕಳು ಮಗುವಿನ ಜನನದ ಕುರಿತಾಗಿ ಅದೆಷ್ಟೋ ಆಸೆಗಳನ್ನು ಹೊಂದಿರುತ್ತಾರೆ. ತನ್ನ ಬದುಕಿನಲ್ಲಿ ಮತ್ತೊಂದು ಜೀವದ ಬರುವಿಕೆಯ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಕೆಲವು ಮಹಿಳೆಯರಲ್ಲಿ ಗರ್ಭ ನಿಲ್ಲುವುದೇ ಇಲ್ಲ. ಇನ್ನು ಕೆಲವರಿಗೆ ಆರೋಗ್ಯ ಸಮಸ್ಯೆಯಿಂದ ಗರ್ಭಪಾತ ಉಂಟಾಗುತ್ತದೆ. ಗರ್ಭಪಾತ ಉಂಟಾಗಲು ಕಾರಣವೇನು? ತಿಳಿಯಲೇ ಬೇಕಾದ ಕೆಲವು ಕಾರಣಗಳು ಈ ಕೆಳಗಿನಂತಿದೆ.

ಕೆಲವು ಸಂದರ್ಭದಲ್ಲಿ ಅಹಿತಕರ ಘಟನೆಯಿಂದಾಗಿ ಮಹಿಳೆಯರಲ್ಲಿ ಗರ್ಭಪಾತ ಉಂಟಾಗುತ್ತದೆ. ಇದು ಆಕೆಯ ಮಾನಸಿಕ ಸ್ಥಿತಿಯನ್ನು ಹದಗೆಡಿಸುತ್ತದೆ. ಅದೆಷ್ಟೋ ಆಸೆಗಳನ್ನು ಹೊತ್ತ ಮಹಿಳೆಯ ಆರೋಗ್ಯವೂ ಸಹ ಹಾನಿಗೊಳಗಾಗುತ್ತದೆ. ಈ ಕುರಿಂತೆ ಕೆಲವು ಕಾರಣಗಳನ್ನು ನೀವು ತಿಳಿಯಲೇಬೇಕು.

ಥೈರೈಡ್ ಈಗಿನ ದಿನಮಾನಗಳಲ್ಲಿ ಥೈರೈಡ್ ಸಮಸ್ಯೆ ಜನರಲ್ಲಿ ಹೆಚ್ಚು ಕಾಡುತ್ತಿದೆ. ಈ ಸಮಸ್ಯೆಯಿಂದ ಮಹಿಳೆಯರು ಹೆಚ್ಚು ಬಾಧಿತರಾಗುತ್ತಿದ್ದಾರೆ. ಮಹಿಳೆಯರು ಥೈರೈಡ್ ಸಮಸ್ಯೆಯನ್ನು ಸಾಮಾನ್ಯ ಎಂದು ಭಾವಿಸುತ್ತಾರೆ. ನೀವು ಗರ್ಭಾವಸ್ಥೆಯಲ್ಲಿ ಥೈರೈಡ್ ಹೊಂದಿದ್ದರೆ ಹೆಚ್ಚು ಜಾಗರೂಕರಾಗಿರುವುದು ಒಳ್ಳೆಯದು. ಏಕೆಂದರೆ ಇದು ಹಾರ್ಮೋನ್ ಸಂಬಂಧಿತ ಸಮಸ್ಯೆಯಾಗಿದೆ. ಇದರಿಂದಾಗಿ ಕೆಲವು ಬಾರಿ ಗರ್ಭಪಾತ ಉಂಟಾಗುವ ಸಂಭವವಿರಬಹುದು.

ಮಧುಮೇಹ ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇಂತಹ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ತೋರದೇ ಕಾಲಕಾಲಕ್ಕೆ ವೈದ್ಯರಲ್ಲಿ ಪರೀಕ್ಷೆಗೆ ಒಳಗಾಗುವುದು ಮುಖ್ಯ. ಮಧುಮೇಹ ಆರಂಭಿಕ ತಿಂಗಳುಗಳಲ್ಲಿ ಗರ್ಭಪಾತಕ್ಕೆ ಕಾರಣವಾಗಬಹುದು. ಜತೆಗೆ ಮಧುಮೇಹದ ಅತೀವ ತೊಂದರೆಗಳಿಂದ ಗರ್ಭಪಾತವೂ ಉಂಟಾಗಬಹುದು.

ಹಾರ್ಮೋನುಗಳ ಅಸಮತೋಲನ ಮಹಿಳೆಯು ಈಗಾಗಲೇ ಹಾರ್ಮೋನುಗಳ ಸಮಸ್ಯೆ ಹೊಂದಿದ್ದರೆ ಅಥವಾ ಆಕೆಯ ದೇಹವು ಸಾಕಷ್ಟು ಪ್ರೊಜೆಸ್ಟರಾನ್​ ಹಾರ್ಮೋನ್ ಉತ್ಪಾದಿಸದಿದ್ದರೆ ಗರ್ಭಾಪಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ ಔಷಧಿಗಳಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ:

Women Health: ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವಿನ ಸಮಸ್ಯೆಯೇ? ಪರಿಹಾರಕ್ಕಾಗಿ ಇಲ್ಲಿದೆ ಸರಳ ವಿಧಾನಗಳು

Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು

(Women Health Why Does Miscarriage happen know about these reasons check in kannada)

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್