ಹದಿಹರೆಯದ ವಯಸ್ಸಿನಲ್ಲಿ ಮದ್ಯಪಾನ‌ ಮಾಡಿ ಹೃದಯ ಆರೋಗ್ಯ ಸಮಸ್ಯೆ ತಂದುಕೊಂಡೀರಿ; ಎಚ್ಚರ!

ಹದಿಹರೆಯದ ವಯಸ್ಸಿನಲ್ಲಿ ಮದ್ಯಪಾನ‌ ಮಾಡಿ ಹೃದಯ ಆರೋಗ್ಯ ಸಮಸ್ಯೆ ತಂದುಕೊಂಡೀರಿ; ಎಚ್ಚರ!
ಮದ್ಯಪಾನ ಆರೋಗ್ಯಕ್ಕೆ ಹಾನಿಕರ

ಹದಿಹರೆಯದವರಲ್ಲಿ ಆಲ್ಕೋಹಾಲ್ ಸೇವನೆ ರಕ್ತನಾಳದ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಇದರಿಂದ ಹೃದಯ ಸಂಬಂಧಿ ರೋಗ ಹೆಚ್ಚಿಸುತ್ತದೆ.

TV9kannada Web Team

| Edited By: shruti hegde

Aug 24, 2021 | 1:27 PM

ಹದಿಹರೆಯದ ವಯಸ್ಸಿನಲ್ಲಿ ಮದ್ಯಪಾನ ಮಾಡುವುದು ಹೃದಯರಕ್ತನಾಳದ ಒತ್ತಡವನ್ನು ಹೆಚ್ಚಿಸುತ್ತದೆ. ಅಪಧಮನಿಯು ಚಿಕ್ಕ ವಯಸ್ಸಿನಲ್ಲಿಯೇ ಗಟ್ಟಿಯಾಗುತ್ತದೆ ಎಂದು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ನೀವು ಎಷ್ಟು ಹೆಚ್ಚು ಕುಡಿತಕ್ಕೆ ಒಳಗಾಗುತ್ತೀರೋ ಅದರಿಂದ ಅಪಧಮನಿಯು ಹೆಚ್ಚು ಗಟ್ಟಿಯಾಗುತ್ತಾ ಹೋಗುತ್ತದೆ ಎಂದು ಯುರೋಪ್​ನ ಯುನಿವರ್​ಸಿಟಿ ಕಾಲೇಜಿನ ಅಧ್ಯಯನ ಲೇಖಕ ಹ್ಯಾಗೋ ವಾಲ್​ಪೋರ್ಡ್​ ಹೇಳಿದ್ದಾರೆ.

ಹದಿಹರೆಯದವರಲ್ಲಿ ಆಲ್ಕೋಹಾಲ್ ಸೇವನೆ ರಕ್ತನಾಳದ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಇದರಿಂದ ಹೃದಯ ಸಂಬಂಧಿ ರೋಗ ಹೆಚ್ಚಿಸುತ್ತದೆ. ಜನರಿಗೆ ವಯಸ್ಸಾದಂತೆಯೇ ಸಹಜವಾಗಿಯೇ ಅಪಧಮನಿಯು ಗಟ್ಟಿಯಾಗುತ್ತಾ ಹೋಗುತ್ತದೆ ಮತ್ತು ಕಡಿಮೆ ಸ್ಥಿತಿಸ್ಥಾಪಕವಾಗುತ್ತದೆ. ಗಟ್ಟಿಯಾದ ಅಪಧಮನಿಯಿಂದಾಗಿ ಹೃದ್ರೋಗ, ಪಾರ್ಶ್ವವಾಯುವಿನ ಅಪಾಯ ಹೆಚ್ಚುತ್ತದೆ.

ಅಪಧಮನಿಯ ಬಿಗಿತವು 17 ರಿಂದ 24 ವಯಸ್ಸಿನ ವಯಸ್ಕರಲ್ಲಿ ಮದ್ಯ ಸೆವಿಸುವವರಿಗೆ ಸರಾಸರಿ 10.3ರಷ್ಟು ಬಿಗಿತದಲ್ಲಿ ಹೆಚ್ಚಾಗಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಹೆಚ್ಚಳ ಕಂಡು ಬಂದಿದೆ. ಧೂಮಪಾನ ಮತ್ತು ಮದ್ಯ ಸೇವಿಸುವ ಯುವಕ, ಯುವತಿಯರಲ್ಲಿ ಅಪಧಮನಿ ಹಾನಿಯಾಗಿರುವುದು ಕಂಡು ಬಂದಿದೆ. ಇದು ಚಿಕ್ಕ ವಯಸ್ಸಿನಲ್ಲಿಯೇ ರಕ್ತನಾಳಗಳ ಆರೋಗ್ಯವನ್ನು ಕೆಡಿಸುತ್ತದೆ ಎಂದು ವಾಲ್​ಫೋರ್ಡ್​ ಹೇಳಿದ್ದಾರೆ.

ಯುವಕರು ಮದ್ಯಸೇವಿಸುವುದರಿಂದ ಜತೆಗೆ ಧೂಮಪಾನ ಮಾಡುವುದರಿಂದ ದೀರ್ಘಕಾಲಿಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರ ವಿಪರೀತ ಅಳವಡಿಕೆಯಿಂದ ಹೃದ್ರೋಗ ಮತ್ತು ಪಾರ್ಶ್ವವಾಯು ಸಮಸ್ಯೆಗೆ ಕಾರಣವಾಗಬಹುದು.

ಇದನ್ನೂ ಓದಿ:

Health Tips: ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ವಿಧಾನಗಳನ್ನು ಅನುಸರಿಸಿ

Healthy Heart: ಹೃದಯ ಬಡಿತದ ಮೇಲೆ ನಮ್ಮ ಆರೋಗ್ಯ ನಿಂತಿದೆ; ಈ ರೋಗ ಲಕ್ಷಣಗಳ ಬಗ್ಗೆ ಸದಾ ಎಚ್ಚರ ವಹಿಸಿ

(Alcohol consumption during adolescence can damage the heart cardiovascular system)

Follow us on

Related Stories

Most Read Stories

Click on your DTH Provider to Add TV9 Kannada