Desi Chutney: ಈ ಆರು ಪದಾರ್ಥಗಳಿಂದ ತಯಾರಿಸಿದ ಚಟ್ನಿ ರುಚಿಗೆ ತಕ್ಕಂತೆ ಆರೋಗ್ಯಕರ ಗುಣಗಳನ್ನು ಹೊಂದಿದೆ

ಬೆಳ್ಳುಳ್ಳಿ, ಪುದೀನಂತಹ ಪದಾರ್ಥಗಳಿಂದ ಮನೆಯಲ್ಲಿ ತ್ವರಿತವಾಗಿ ಮತ್ತು ಸುಲಭವಾಗಿ ಚಟ್ನಿ ಮಾಡಬಹುದು. ಈ ಚಟ್ನಿಗಳು ರುಚಿ ಅಷ್ಟೇ ಅಲ್ಲ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಗುಣಗಳಿಂದ ಕೂಡಿದೆ.

Desi Chutney: ಈ ಆರು ಪದಾರ್ಥಗಳಿಂದ ತಯಾರಿಸಿದ ಚಟ್ನಿ ರುಚಿಗೆ ತಕ್ಕಂತೆ ಆರೋಗ್ಯಕರ ಗುಣಗಳನ್ನು ಹೊಂದಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Aug 25, 2021 | 8:54 AM

 ಆಹಾರದ ಜತೆಗೆ ಉಪ್ಪಿನಕಾಯಿ ಅಥವಾ ಚಟ್ನಿ ಇಲ್ಲದೆ ಯಾವುದೇ ಊಟ ಪೂರ್ಣವಾಗುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಅದರಲ್ಲೂ ಚಟ್ನಿ ಇಲ್ಲದೆ ದೋಸೆ, ಇಡ್ಲಿ ಅಥವಾ ಅನ್ನವನ್ನು ಕೂಡ ಕೆಲವರು ಸೇವಿಸುವುದಿಲ್ಲ. ಚಟ್ನಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮನೆಯಲ್ಲಿ ತಯಾರಿಸಿದ ಚಟ್ನಿ ಹೆಚ್ಚು ರುಚಿಕೊಡುತ್ತದೆ. ಚಟ್ನಿಯಲ್ಲಿ ಅನೇಕ ವಿಧಗಳಿವೆ ಒಬ್ಬೊಬ್ಬರು ಒಂದೊಂದು ರೀತಿಯ ಚಟ್ನಿ ಮಾಡಿ ಸವಿಯುತ್ತಾರೆ. ಬೆಳ್ಳುಳ್ಳಿ, ಪುದೀನಂತಹ ಪದಾರ್ಥಗಳಿಂದ ಮನೆಯಲ್ಲಿ ತ್ವರಿತವಾಗಿ ಮತ್ತು ಸುಲಭವಾಗಿ ಚಟ್ನಿ ಮಾಡಬಹುದು. ಈ ಚಟ್ನಿಗಳು ರುಚಿ ಅಷ್ಟೇ ಅಲ್ಲ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುವ ಗುಣಗಳಿಂದ ಕೂಡಿದೆ.

ಟೊಮೆಟೋ ಚಟ್ನಿ ಟೊಮೆಟೋ ಚಟ್ನಿ ಮನೆಗಳಲ್ಲಿ ಮಾಡುವ ಜನಪ್ರಿಯ ಚಟ್ನಿಯಲ್ಲಿ ಒಂದಾಗಿದೆ. ಟೊಮೆಟೋ ಖನಿಜಗಳು ಮತ್ತು ವಿಟಮಿನ್ ಸಿ, ಬಿ, ಇ ಮತ್ತು ಪೊಟ್ಯಾಸಿಯಂ ನಂತಹ ಗುಣಗಳನ್ನು ಹೊಂದಿರುವುದರಿಂದ ರುಚಿ ಮಾತ್ರವಲ್ಲದೆ ಅತ್ಯಂತ ಪೌಷ್ಟಿಕವೂ ಆಗಿರುತ್ತವೆ. ಇದು ಲೈಕೋಪೀನ್ ಎಂಬ ಜೈವಿಕ ಸಕ್ರಿಯ ಅಂಶವನ್ನು ಹೊಂದಿದೆ. ಇದು ದೇಹದಲ್ಲಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ.

ಬೆಳ್ಳುಳ್ಳಿ ಚಟ್ನಿ ಭಾರತದಲ್ಲಿ ಯಾವುದೇ ರೀತಿಯ ಅಡುಗೆ ತಯಾರಿಸಲು ಬೆಳ್ಳುಳ್ಳಿ ಒಂದು ಮುಖ್ಯ ಪದಾರ್ಥವಾಗಿದೆ. ಅಧ್ಯಯನದ ಪ್ರಕಾರ, ನಿಯಮಿತವಾಗಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಜನರು ಬೆಳ್ಳುಳ್ಳಿ ಚಟ್ನಿ ಮಾಡಲು ತೆಂಗಿನಕಾಯಿ, ಕಡಲೆಕಾಯಿ ಮತ್ತು ಕೆಂಪು ಮೆಣಸಿನಕಾಯಿಗಳನ್ನು ಸೇರಿಸುತ್ತಾರೆ, ಇದು ಉತ್ಕರ್ಷಣ ನಿರೋಧಕಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಹೆಚ್ಚು ಆರೋಗ್ಯಕರವಾಗಿದೆ.

ಪುದೀನ ಮತ್ತು ಕೊತ್ತಂಬರಿ ಚಟ್ನಿ ಪುದೀನ ಮತ್ತು ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಇಡ್ಲಿ, ದೋಸೆ ಅಥವಾ ಬಿಸಿ ಪರಾಠದ ಜತೆಗೆ ಸೇವಿಸಬಹುದು. ಪುದೀನ ಮತ್ತು ಕೊತ್ತಂಬರಿ ಸೊಪ್ಪು ಎರಡರಲ್ಲೂ ವಿಟಮಿನ್, ಖನಿಜಾಂಶ ಮತ್ತು ಉತ್ಕರ್ಷಣ ನಿರೋಧಕಗಳಿವೆ. ತಜ್ಞರ ಪ್ರಕಾರ, ಇವುಗಳು ಸಾಕಷ್ಟು ಪ್ರಮಾಣದ ಫೈಬರ್ ಅಂಶವನ್ನು ಸಹ ಹೊಂದಿರುತ್ತವೆ.

ತೆಂಗಿನಕಾಯಿ ಚಟ್ನಿ ತೆಂಗಿನಕಾಯಿ ಚಟ್ನಿಯನ್ನು ತಾಜಾ ತೆಂಗಿನಕಾಯಿ, ಒಣ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಸಾಸಿವೆ ಬಳಸಿ ತಯಾರಿಸಲಾಗುತ್ತದೆ. ಇದು ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದೆ. ಆದರೆ ಉತ್ತರ ಭಾರತದಲ್ಲೂ ಅಷ್ಟೇ ಜನರು ಇದನ್ನು ಇಷ್ಟಪಡುತ್ತಾರೆ. ತೆಂಗಿನಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ ಇದು ಚಯಾಪಚಯ ಕ್ರಿಯೆಗೆ ಪರಿಣಾಮಕಾರಿ. ತೆಂಗಿನಕಾಯಿ ಚಟ್ನಿಯ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಅಜೀರ್ಣ, ಅತಿಸಾರ, ಮಲಬದ್ಧತೆ ಮುಂತಾದ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ.

ಮಾವಿನ ಚಟ್ನಿ ಮಾವಿನಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿದೆ. ಇವುಗಳು ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ. ಈ ಮಾವಿನ ಹಣ್ಣು ತುಂಬಾ ಪೌಷ್ಟಿಕವಾಗಿದೆ. ನಿಯಾಸಿನ್ ಇರುವಿಕೆಯ ಹಸಿ ಮಾವು ಹೃದಯವನ್ನು ಆರೋಗ್ಯಕರವಾಗಿಸುತ್ತದೆ. ಈ ಚಟ್ನಿಗೆ ಬೆಲ್ಲ ಸೇರಿಸಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.

ಹುಣಸೆಹಣ್ಣಿನ ಚಟ್ನಿ ಹುಣಸೆಹಣ್ಣಿನಲ್ಲಿ ವಿಟಮಿನ್ ಬಿ 1, ಬಿ 2, ಬಿ 3 ಮತ್ತು ಬಿ 5 ಹಾಗೂ ಮೆಗ್ನೀಶಿಯಂ, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ಸಮೃದ್ಧವಾಗಿವೆ. ಹುಣಸೆಹಣ್ಣಿನಲ್ಲಿ ಫ್ಲೇವನಾಯ್ಡ್ ಕೂಡ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ತಯಾರಿಸಿದ ಚಟ್ನಿ ಕೂಡ ಅಷ್ಟೇ ರುಚಿಯಾಗಿರುತ್ತದೆ.

ಇದನ್ನೂ ಓದಿ: Health Tips: ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 6 ಆರೋಗ್ಯಕರ ತರಕಾರಿಗಳು

ಕೊತ್ತಂಬರಿ ಸೊಪ್ಪು ರುಚಿಗಷ್ಟೇ ಎಂಬ ಭ್ರಮೆಯಲ್ಲಿದ್ದರೆ ಇಂದೇ ಹೊರ ಬನ್ನಿ; ಆರೋಗ್ಯಕರ ಅನುಕೂಲದ ಬಗ್ಗೆ ತಿಳಿಯಿರಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ