AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Egg shells benefits: ಮೊಟ್ಟೆಯ ಸಿಪ್ಪೆಗಳನ್ನು ಎಸೆಯುತ್ತಿದ್ದೀರಾ? ಹಾಗಿದ್ದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಮೊಟ್ಟೆ ಸಿಪ್ಪೆಗಳಲ್ಲಿ ಹಲವು ಪ್ರಯೋಜನಗಳಿವೆ. ಇವು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಬೋರಾನ್, ಮೆಗ್ನೀಸಿಯಮ್, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಮಾಲಿಬ್ಡಿನಮ್, ಸಲ್ಫರ್, ಸತು ಇತ್ಯಾದಿ ಅಂಶಗಳನ್ನು ಸಹ ಇದು ಒಳಗೊಂಡಿದೆ.

Egg shells benefits: ಮೊಟ್ಟೆಯ ಸಿಪ್ಪೆಗಳನ್ನು ಎಸೆಯುತ್ತಿದ್ದೀರಾ? ಹಾಗಿದ್ದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 26, 2021 | 7:35 AM

Share

ಮೊಟ್ಟೆಯಲ್ಲಿನ ಪೌಷ್ಟಿಕಾಂಶವು ಬಹಳಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದಲ್ಲದೆ ಅನೇಕ ಪೋಷಕಾಂಶಗಳು ಸಿಗುತ್ತದೆ. ಅದಾಗ್ಯೂ ಮೊಟ್ಟೆ ಮಾತ್ರ ಅಲ್ಲ ಮೊಟ್ಟೆಯ ಸಿಪ್ಪೆ ಅಥವಾ ಒಡಿನಲ್ಲಿ ಅನೇಕ ಆರೋಗ್ಯಕರ ಗುಣಗಳು ಅಡಗಿದೆ. ಆದರೆ ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ಮೊಟ್ಟೆ ಸಿಪ್ಪೆಗಳನ್ನು ಎಸೆಯುತ್ತಾರೆ. ಮೊಟ್ಟೆ ಸಿಪ್ಪೆಗಳಲ್ಲಿ ಹಲವು ಪ್ರಯೋಜನಗಳಿವೆ. ಇವು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಬೋರಾನ್, ಮೆಗ್ನೀಸಿಯಮ್, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಮಾಲಿಬ್ಡಿನಮ್, ಸಲ್ಫರ್, ಸತು ಇತ್ಯಾದಿ ಅಂಶಗಳನ್ನು ಸಹ ಇದು ಒಳಗೊಂಡಿದೆ. ಆದ್ದರಿಂದ ಮೊಟ್ಟೆಯ ಸಿಪ್ಪೆಗಳನ್ನು ಹೇಗೆ ಬಳಸುವುದು ಎಂದು ತಿಳಿಯುವುದು ಸೂಕ್ತ.

1. ಫೇಸ್ ಪ್ಯಾಕ್ ಒಂದು ಬಟ್ಟಲಿನಲ್ಲಿ ಒಂದು ಟೀ ಚಮಚ ಮೊಟ್ಟೆಯ ಸಿಪ್ಪೆಯನ್ನು ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ ಜೇನುತುಪ್ಪ ಸೇರಿಸಿ ಮತ್ತು ನಯವಾದ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಸಂಪೂರ್ಣವಾಗಿ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

2. ಹೇರ್ ಪ್ಯಾಕ್ ಕೂದಲಿನ ಉದ್ದವನ್ನು ಅವಲಂಬಿಸಿ ಬಟ್ಟಲಿನಲ್ಲಿ ಸಾಕಷ್ಟು ಮೊಟ್ಟೆಯ ಸಿಪ್ಪೆಯ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ ಮೊಸರು ಸೇರಿಸಿ ಪೇಸ್ಟ್ ಮಾಡಿ. ನಂತರ ಇದನ್ನು ಕೂದಲಿನ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ಹೀಗೆ ಮಾಡುವುದರಿಂದ ಕೂದಲಿನ ಹೊಳಪು ಹೆಚ್ಚಾಗುತ್ತದೆ.

3. ಕ್ಯಾಲ್ಸಿಯಂ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಕ್ಯಾಲ್ಸಿಯಂ ಪೂರಕ ಮಾತ್ರೆಗಳ ಬದಲಿಗೆ ಮೊಟ್ಟೆಯ ಸಿಪ್ಪೆಯ ಪುಡಿಯನ್ನು ಬಳಸಲಾಗುತ್ತದೆ. ಅರ್ಧ ಟೀ ಚಮಚ ಮೊಟ್ಟೆಯ ಸಿಪ್ಪೆಯ ಪುಡಿಯಲ್ಲಿ 400 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ದೇಹದ ಅಗತ್ಯಕ್ಕೆ ಅನುಗುಣವಾಗಿ ಮೊಟ್ಟೆಯ ಸಿಪ್ಪೆಯ ಪುಡಿಯನ್ನು ತೆಗೆದುಕೊಳ್ಳಬಹುದು. ಆಸ್ಟಿಯೊಪೊರೋಸಿಸ್ ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

4. ಹಲ್ಲುಗಳ ಆರೋಗ್ಯಕ್ಕೆ ಉತ್ತಮ ಮೊಟ್ಟೆಯ ಸಿಪ್ಪೆಯ ಪುಡಿಯನ್ನು ಟೂತ್ ಪೇಸ್ಟ್ ಆಗಿ ಬಳಸುವುದು ಉತ್ತಮ. ಒಂದು ಚಮಚ ಮೊಟ್ಟೆಯ ಸಿಪ್ಪೆಯ ಪುಡಿ ಮತ್ತು ಒಂದು ಚಿಟಿಕೆ ಅಡಿಗೆ ಸೋಡಾ ಸೇರಿಸಿ. ಬಳಿಕ ಅದರಲ್ಲಿ ತೆಂಗಿನ ಎಣ್ಣೆಯನ್ನು ಕೂಡ ಮಿಶ್ರಣ ಮಾಡಿ. ವಾರಕ್ಕೊಮ್ಮೆ ನಿಮ್ಮ ಹಲ್ಲುಗಳನ್ನು ಈ ಮಿಶ್ರಣದಿಂದ ಉಜ್ಜುವುದರಿಂದ ಹಲ್ಲುಗಳನ್ನು ಬಲವಾಗಿರಿಸುತ್ತದೆ ಮತ್ತು ಅವುಗಳನ್ನು ಬಿಳಿಯಾಗಿ ಹೊಳೆಯುವಂತೆ ಮಾಡುತ್ತದೆ.

5. ಗೊಬ್ಬರ ತಯಾರಿಕೆ ಸಾರಜನಕ ಮತ್ತು ರಂಜಕದಂತೆಯೇ, ಸಸ್ಯಗಳು ಬೆಳೆಯಲು ಕ್ಯಾಲ್ಸಿಯಂ ಅಗತ್ಯವಿದೆ. ಇದರ ಕೊರತೆಯು ಕಡಿಮೆ ಬೆಳವಣಿಗೆ, ಬಾಡಿದ ಎಲೆಗಳು ಮತ್ತು ಕಪ್ಪು ಕಲೆಗಳಿಗೆ ಕಾರಣವಾಗುತ್ತದೆ. ಮೊಟ್ಟೆಯ ಸಿಪ್ಪೆಯ ಪುಡಿಯನ್ನು ಸಸ್ಯಗಳಿಗೆ ಕ್ಯಾಲ್ಸಿಯಂ ನೀಡಲು ಬಳಸಬಹುದು. ನಾಟಿ ಮಾಡುವಾಗ ಮೊಟ್ಟೆಯ ಸಿಪ್ಪೆಯ ಪುಡಿಯನ್ನು ಗೊಬ್ಬರವಾಗಿ ಬಳಸಬೇಕು.

ಇದನ್ನೂ ಓದಿ: Coconut Benefits: ತೆಂಗಿನಕಾಯಿ ಪೂಜೆ ಮತ್ತು ಅಡುಗೆಗೆ ಮಾತ್ರ ಎಂದು ತಿಳಿದರೆ ಅದು ತಪ್ಪು; ಆರೋಗ್ಯಕರ ಗುಣದ ಬಗ್ಗೆಯೂ ಗಮನಹರಿಸಿ

Health Tips: ಪ್ರತಿದಿನ ಒಂದು ಮೊಟ್ಟೆ ತಿಂದ್ರೆ ಸಿಗುವ ಪ್ರಯೋಜನಗಳೇನು ಗೊತ್ತಾ?

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ