Beauty Tips: ನಿಮ್ಮ ಬಣ್ಣಕ್ಕೆ ಯಾವ ಕಲರ್​ ಲಿಪ್​ಸ್ಟಿಕ್​ ಬಳಸಿದರೆ ಅಂದವಾಗಿ ಕಾಣಿಸಬಹದು?

ನಿಮ್ಮ ಬಣ್ಣಕ್ಕೆ ಸರಿ ಹೊಂದುವ ಲಿಪ್​ಸ್ಟಿಕ್ ಬಣ್ಣ ಯಾವುದು? ಯಾವ ಬಣ್ಣವನ್ನು ಹೆಚ್ಚು ಬಳಸಬೇಕು ಎಂಬುದರ ಕುರಿತಾಗಿ ನಿಮಗಾಗಿಯೇ ಕೆಲವು ಬ್ಯೂಟಿ ಟಿಪ್ಸ್​ಗಳು ಈ ಕೆಳಗಿನಂತಿವೆ.

Beauty Tips: ನಿಮ್ಮ ಬಣ್ಣಕ್ಕೆ ಯಾವ ಕಲರ್​ ಲಿಪ್​ಸ್ಟಿಕ್​ ಬಳಸಿದರೆ ಅಂದವಾಗಿ ಕಾಣಿಸಬಹದು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 26, 2021 | 9:14 AM

ಈಗೆಲ್ಲಾ ಲಿಪ್​ಸ್ಟಿಕ್ ಹಚ್ಚುವುದು ಟ್ರೆಂಡ್ ಆಗಿಬಿಟ್ಟಿದೆ. ಯುವತಿಯರಿಂದ ಹಿಡಿದು ವಯಸ್ಕರವರೆಗೂ ಎಲ್ಲಾ ಪ್ಯಾಶನ್ ಲೋಕದಲ್ಲಿ ಮುಳುಗಿದ್ದಾರೆ. ದಿನ್ಕೊಂದು ಹೊಸ ಹೊಸ ಮೇಕಪ್ ಕಿಟ್​ಗಳು ಮಾರುಕಟ್ಟೆಗೆ ಬರುತ್ತಿವೆ. ವಿವಿಧ ಶೈಲಿಯ ಉಡುಗೆ ತೊಡುಗೆಗಳು ಮನ ಸೆಳೆಯುತ್ತಿವೆ. ಹೀಗಿರುವಾಗ ಹೊರ ಹೋಗಬೇಕೆಂದರೆ ಲಿಪ್​ಸ್ಟಿಕ್ ಇರಲೇಬೇಕು ಅನ್ನುತ್ತಾರೆ ಮಹಿಳೆಯರು. ಅದರಲ್ಲಿಯೂ ಡಿಫರೆಂಟ್ ವೆರೈಟಿಯ ಲಿಪ್​ಸ್ಟಿಕ್​ಗಳಿವೆ. ಜತೆಗೆ ನಾನಾ ಬಣ್ಣಗಳಿವೆ. ಹಾಗಿರುವಾ ನಿಮ್ಮ ಬಣ್ಣಕ್ಕೆ ಸರಿ ಹೊಂದುವ ಲಿಪ್​ಸ್ಟಿಕ್ ಬಣ್ಣ ಯಾವುದು? ಯಾವ ಬಣ್ಣವನ್ನು ಹೆಚ್ಚು ಬಳಸಬೇಕು ಎಂಬುದರ ಕುರಿತಾಗಿ ನಿಮಗಾಗಿಯೇ ಕೆಲವು ಬ್ಯೂಟಿ ಟಿಪ್ಸ್​ಗಳು ಈ ಕೆಳಗಿನಂತಿವೆ.

ಈ ದಿನಗಳಲ್ಲಿ ಮ್ಯಾಟ್, ಹೊಳಪು, ಮಿನುಗು, ಮತ್ತು ದ್ರವ ಸೇರಿದಂತೆ ವಿವಿಧ ರೀತಿಯ ಲಿಪ್​ಸ್ಟಿಕ್​ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಅನೇಕ ಮಹಿಳೆಯರಿಗೆ ತಮ್ಮ ಚರ್ಮದ ಟೋನ್ ಬಗ್ಗೆ ತಿಳಿದಿರುವುದಿಲ್ಲ. ಯಾವ ಸಂಯೋಜನೆಯ ಲಿಪ್​ಸ್ಟಿಕ್ ಯಾವ ಟೋನ್ ಹೊಂದುತ್ತದೆ ಎಂದ ವಿಷಯದ ಬಗ್ಗೆ ನಿಮಗೂ ಗೊಂದಲಗಳಿದ್ದರೆ ಚಿಂತಿಸಬೇಡಿ. ಚರ್ಮದ ಟೋನ್​ಗೆ ಅನುಗುಣವಾಗಿ ಯಾವ ಲಿಪ್​ಸ್ಟಿಕ್ ನಿಮಗೆ ಸರಿಹೊಂದುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಗೋಧಿ ಬಣ್ಣ ಈ ಬಣ್ಣದ ಮಹಿಳೆಯರು ಹೆಚ್ಚು ಕಪ್ಪು ಬಣ್ಣದವರೂ ಅಲ್ಲ. ತುಂಬಾ ಬೆಳ್ಳಗೂ ಕಾಣಿಸುವವರಲ್ಲ. ಅಂಥವರಿಗೆ ವಿಶೇಷವಾಗಿ ಕಂದು ನೆರಳು ಬಣ್ಣ ಬಹಳಷ್ಟು ಹೊಂದುತ್ತದೆ. ಇದರ ಹೊರತಾಗಿ ನೀವು ಗುಲಾಬಿ, ರಕ್ತ ಕೆಂಪು, ಮಾಗಿದ ಕಿತ್ತಳೆ ಬಣ್ಣವನ್ನು ಬಳಸಬಹುದು. ಈ ಬಣ್ಣದಲ್ಲಿ ಮುಖ ಅಂದವಾಗಿ ಕಾಣುತ್ತದೆ. ಜತೆಗೆ ಮುಖಕ್ಕೆ ಲೈಟ್ಆಗಿ ಸರಿಹೊಂದುವ ಮೇಕಪ್ ಮಾಡಿಕೊಳ್ಳಿ.

ಕಪ್ಪು ಅಥವಾ ತಿಳಿ ಕಪ್ಪು ನಿಮ್ಮ ಮೈ ಬಣ್ಣ ಕಪ್ಪು ಬಣ್ಣವಾಗಿದ್ದರೆ ಇಟ್ಟಿಗೆ ಕೆಂಪು ಮತ್ತು ಕ್ಯಾರಮೆಲ್ ಬಣ್ಣವನ್ನು ಹಚ್ಚಬಹುದು. ಯಾವಾಗಲೂ ಮ್ಯಾಟ್ ಲಿಪ್​ಸ್ಟಿಕ್​ಅನ್ನು ಆಯ್ಕೆ ಮಾಡಿ. ಹೆಚ್ಚು ಹೊಳಪಿರುವ ಲಿಪ್​ಸ್ಟಿಕ್​ಗಳು ಬೇಡ. ಕಂದು, ಕೆಂಪು ಮತ್ತು ನೇರಳೆ ಬಣ್ಣವನ್ನು ಕೂಡಾ ಪ್ರಯತ್ನಿಸಬಹುದು.

ತಿಳಿ ಹಳದಿ ಅಥವಾ ತಿಳಿ ಗೋಧಿ ಬಣ್ಣ ಲಿಪ್​ಸ್ಟಿಕ್ ಆರಿಸುವಾಗ ಅಂಡರ್ಟೋನ್ಅನ್ನು ಸಹ ಕಾಳಜಿವಹಿಸಬೇಕು. ನಿಮ್ಮ ಚರ್ಮ ಹಳದಿ ಅಥವಾ ಗೋಧಿ ಬಣ್ಣದಲ್ಲಿದ್ದರೆ ಅದಕ್ಕೆ ತಕ್ಕಂತೆ ಲಿಪ್​ಸ್ಟಿಕ್ ಆಯ್ಕೆ ಮಾಡಿ. ಆದರೆ ಪ್ರತಿ ಬಾರಿಯೂ ತುಟಿಗೆ ಹಚ್ಚಿ ಲಿಪ್​ಸ್ಟಿಕ್ ನೋಡಬೇಕಂತಿಲ್ಲ. ಮಣಿಕಟ್ಟಿನ ಮೇಲೆ ಲಿಪ್​ಸ್ಟಿಕ್​ನಿಂದ ಒಂದು ಗೆರೆ ಎಳೆಯಿರಿ. ಆ ಬಣ್ಣ ನಿಮಗೆ ಸರಿ ಹೊಂದುತ್ತದೆಯೋ ಇಲ್ಲವೋ ಎಂಬುದು ತಕ್ಷಣ ಗೊತ್ತಾಗುತ್ತದೆ. ನಿಮ್ಮ ಚರ್ಮದ ಟೋನ್​ಗೆ ಹೊಂದಿಕೆಯಾದರೆ ನೀವು ಬಳಸಬಹುದು.

ಇದನ್ನೂ ಓದಿ:

Beauty Tips: ಸುಂದರವಾದ ತುಟಿ ಪಡೆಯಲು ಇಲ್ಲಿದೆ ಉತ್ತಮ ಮಾರ್ಗಗಳು

Beauty Tips: ಹಳದಿ ಹಲ್ಲುಗಳಿಂದಾಗಿ ನಗಲು ಮುಜುಗರ ಪಡುತ್ತಿದ್ದೀರಾ?-ಈ ಸರಳ ವಿಧಾನಗಳ ಮೂಲಕ ಪಡೆಯಿರಿ ಬಿಳಿ ಹಲ್ಲು

(Know with colour lipstick looks best check in kannada)

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ