ಆಭರಣಗಳನ್ನು ಧರಿಸೋದು ಬರಿ ಅಂದಕ್ಕೆ ಮಾತ್ರವಲ್ಲ, ವೈಜ್ಞಾನಿಕ ಕಾರಣಗಳೂ ಇವೆ; ಏನು ಅಂತ ನೀವೂ ತಿಳಿದುಕೊಳ್ಳಿ

ಸೌಂದರ್ಯವನ್ನು ಹೆಚ್ಚಿಸುವ ಆಭರಣ ಕಷ್ಟದ ಕಾಲದಲ್ಲೂ ಕೈಹಿಡಿಯುತ್ತದೆ. ಹೀಗಾಗಿ ಆಭರಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಾರೆ. ಪ್ರತಿ ಧರ್ಮದಲ್ಲೂ ಆಭರಣಕ್ಕೆ ಹೆಚ್ಚು ಬೇಡಿಕೆ ಇದೆ. ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ.

ಆಭರಣಗಳನ್ನು ಧರಿಸೋದು ಬರಿ ಅಂದಕ್ಕೆ ಮಾತ್ರವಲ್ಲ, ವೈಜ್ಞಾನಿಕ ಕಾರಣಗಳೂ ಇವೆ; ಏನು ಅಂತ ನೀವೂ ತಿಳಿದುಕೊಳ್ಳಿ
ಆಭರಣ
Follow us
TV9 Web
| Updated By: sandhya thejappa

Updated on:Aug 26, 2021 | 5:02 PM

ಆಭರಣ (Jewelry) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಮಹಿಳೆಯರಿಗಂತೂ ಆಭರಣದ ವ್ಯಾಮೋಹ ಹೆಚ್ಚಿದೆ. ಕೈಗೆ, ಕಾಲಿಗೆ, ಕೊರಳಿಗೆ ಅಂತೆಲ್ಲಾ ಹೊಸ ಹೊಸ ಡಿಸೈನ್ ಮಾಡಿಸಿಕೊಂಡು ಧರಿಸುತ್ತಾರೆ. ಹೊಸ ಪ್ಯಾಟರ್ನ್ ಕಣ್ಣಿಗೆ ಬಿದ್ದರೆ ಸಾಕು ನನಗೂ ಆ ರೀತಿಯ ಜುವೆಲ್ಲರಿ ಬೇಕು ಅಂತಾರೆ. ದಿನಕ್ಕೊಂದು ಬದಲಾಗುವ ಆಭರಣದ ವಿನ್ಯಾಸದ ಮೇಲೆ ಆಭರಣ ಪ್ರಿಯರ ಕಣ್ಣು ಸದಾ ಇರುತ್ತದೆ. ಚಿನ್ನ, ಬೆಳ್ಳಿ ಹೆಚ್ಚೆಚ್ಚು ಧರಿಸಿದ್ದಾರೆಂದರೆ ಅವರು ಆರ್ಥಿಕವಾಗಿ ಪ್ರಬಲರಾಗಿದ್ದಾರೆ ಅಂತ ನಿರ್ಧರಿಸುತ್ತಾರೆ. ಇನ್ನು ಕೆಲವರು ತಮ್ಮ ಬಳಿ ಆಭರಣವಿದ್ದರೂ ಅದನ್ನು ಪ್ರದರ್ಶನ ಮಾಡಲು ಬಯಸಲ್ಲ.

ಸೌಂದರ್ಯವನ್ನು ಹೆಚ್ಚಿಸುವ ಆಭರಣ ಕಷ್ಟದ ಕಾಲದಲ್ಲೂ ಕೈಹಿಡಿಯುತ್ತದೆ. ಹೀಗಾಗಿ ಆಭರಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಾರೆ. ಪ್ರತಿ ಧರ್ಮದಲ್ಲೂ ಆಭರಣಕ್ಕೆ ಹೆಚ್ಚು ಬೇಡಿಕೆ ಇದೆ. ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ. ಈ ಎಲ್ಲದರ ನಡುವೆ ಆಭರಣವನ್ನು ಧರಿಸಲು ವೈಜ್ಞಾನಿಕ ಕಾರಣ (Scientific Reason) ಕೂಡಾ ಇದೆ. ಆಭರಣ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ಅದನ್ನು ಧರಿಸಲು ವೈಜ್ಞಾನಿಕ ಕಾರಣವಿದೆ. ದೇಹದ ಮೇಲ್ಭಾಗದಲ್ಲಿ ಬಂಗಾರ ಧರಿಸಿದರೆ, ದೇಹದ ಕೆಳಭಾಗದಲ್ಲಿ ಬೆಳ್ಳಿ ಆಭರಣವನ್ನು ಧರಿಸುತ್ತಾರೆ. ಇದರ ಬಗ್ಗೆ ನಂಬಿಕೆ ಏನೇ ಇದ್ದರೂ ವೈಜ್ಞಾನಿಕ ಕಾರಣವಂತೂ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಎಲ್ಲರ ಬಳಿ ಆಭರಣದ ಚಿಕ್ಕ ತುಂಡಾದರು ಇರುತ್ತದೆ. ಹೀಗಾಗಿ ಆಭರಣ ಧರಿಸಲು ಹಿಂದೆ ಇರುವ ವೈಜ್ಞಾನಿಕ ಕಾರಣವನ್ನು ನೀವೂ ತಿಳಿದುಕೊಳ್ಳಿ.

* ಮಂಗಳಸೂತ್ರ (Mangalsutra) ತಾಳಿ ಅಥವಾ ಮಂಗಳಸೂತ್ರ ಎನ್ನುವುದು ಪವಿತ್ರತೆಯ ಸಂಕೇತ. ತಾಳಿಯನ್ನು ಧರಿಸಿ ಗಂಡನೊಂದಿಗೆ ಹೆಣ್ಣು ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಾಳೆ. ಗಂಡ ಜೀವಂತ ಇರುವವರೆಗೂ ತಾಳಿ ಧರಿಸುತ್ತಾಳೆ. ತಾಳಿ ತೆಗೆದರೆ ಅದು ಅಪಶಕುನ ಅಂತ ಹೇಳಲಾಗುತ್ತದೆ. ಎಲ್ಲಾ ಧರ್ಮದವರು ತಾಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ತಾಳಿ ಜೊತೆಯಲ್ಲಿದ್ದರೆ ಗಂಡ ಜೊತೆಗೆ ಇದ್ದಾರೆ ಎನ್ನುವ ಭಾವನೆ ಕೂಡ ಇದೆ. ತಾಳಿಗೆ ಅರಿಶಿಣ, ಕುಂಕುಮ ಹಚ್ಚಿ ಕಣ್ಣಿಗೆ ಮುಟ್ಟಿಸಿಕೊಂಡಾಗ ಗಂಡನ ಆಯಸ್ಸು ಜಾಸ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇದರ ನಡುವೆ ತಾಳಿಯನ್ನು ಧರಿಸಲು ವೈಜ್ಞಾನಿಕ ಕಾರಣವಿದೆ. ಮಂಗಳಸೂತ್ರ ಬಳಸುವುದರಿಂದ ದೇಹದ ರಕ್ತ ಸಂಚಾರ ಸರಿಯಾಗುತ್ತದೆ.

ತಾಳಿ ಸರ

* ಓಲೆಗಳು (Earring) ಆಭರಣ ಅಂದಾಗ ಮೊದಲು ನೆನಪಾಗುವುದು ಕಿವಿ ಓಲೆಗಳು. ಇದನ್ನು ಮಹಿಳೆಯರು ಹೆಚ್ಚಾಗಿ ಧರಿಸುತ್ತಾರೆ. ಕೆಲ ಪುರುಷರು ಒಂದು ಹರಳಿರುವ ಟಿಕ್ಕಿ ರೀತಿ ಬಳಸುತ್ತಾರೆ. ಕಿವಿ ಓಲೆಗಳು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ನಾನಾ ವಿನ್ಯಾಸದ ಓಲೆಗಳನ್ನು ಖರೀದಿಸಿ, ಬಳಸುತ್ತಾರೆ. ಆದರೆ ಕಿವಿ ಓಲೆಗಳನ್ನು ಹಾಕಿಕೊಳ್ಳುವವರಿಗೆ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣಗಳು ಗೊತ್ತಿಲ್ಲ. ಕಿವಿಯಲ್ಲಿರುವ ನರ ಗರ್ಭಕೋಶಕ್ಕೆ ಸಂಪರ್ಕವಿದೆ. ಕಿವಿ ಓಲೆಗಳನ್ನು ಧರಿಸಿದಾಗ ಸಂತಾನ ಭಾಗ್ಯ ಹೆಣ್ಣಿಗೆ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಕಿವಿ ಓಲೆ

* ಕೈ ಬೆರಳಿಗೆ ಉಂಗುರ (Ring) ಹೆಣ್ಣು ಮತ್ತು ಗಂಡು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡಾಗ ಇಬ್ಬರ ನಡುವಿನ ಸಂಬಂಧ ಬಲವಾಗುತ್ತ ಹೋಗುತ್ತದೆ ಎಂಬ ನಂಬಿಕೆ ಎಲ್ಲಾ ಧರ್ಮದಲ್ಲೂ ಇದೆ. ಕೆಲವರು ಮುದುವೆ ದಿನ ಉಂಗುರಗಳನ್ನು ಬದಲಾಯಿಸಿಕೊಂಡರೆ, ಇನ್ನು ಕೆಲವರು ನಿಶ್ಚಿತಾರ್ಥದ ದಿನದಂದು ವಿನಿಮಯ ಮಾಡಿಕೊಳ್ಳುತ್ತಾರೆ. ಮದುವೆ ವೇಳೆ ಮಾತ್ರ ಉಂಗುರ ಧರಿಸಬೇಕು ಅಂತ ಏನಿಲ್ಲ. ಉಂಗುರದ ಬಗ್ಗೆ ಕ್ರೇಜ್ ಇರುವವರು ಐದು ಬೆರಳಿಗೂ ಹಾಕುತ್ತಾರೆ. ಇನ್ನು ಕೆಲವರು ಸಿಂಪಲ್ ಆಗಿ ಒಂದು ಬೆರಳಿಗೆ ಧರಿಸುತ್ತಾರೆ. ಇದೇನೇ ಇರಲಿ. ಬಂಗಾರದ ಉಂಗುರ ಧರಿಸುವುದರ ಹಿಂದೆ ವೈಜ್ಞಾನಿಕ ಕಾರಣವಿದೆ.

Jewellery

ಉಂಗುರ

ನಾಲ್ಕನೆ ಬೆರಳಿನ ನರವೊಂದು ಹೃದಯಕ್ಕೆ ಸಂಪರ್ಕವಿರುವ ಕಾರಣ ಆ ಬೆರಳಿಗೆ ಉಂಗುರ ಧರಿಸಲಾಗುತ್ತದೆ. ಇದೇ ಕಾರಣಕ್ಕೆ ನಾಲ್ಕನೆ ಬೆರಳನ್ನು ಉಂಗುರದ ಬೆರಳು ಅಂತ ಕರೆಯಲಾಗುತ್ತದೆ. ಮಧ್ಯದ ಬೆರಳಿನ ನರ ಮೆದುಳಿನ ನಡುವೆ ಹಾದುಹೋಗಿದೆ. ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಿದಾಗ ತೀರ್ಮಾನಗಳನ್ನು ತಕ್ಷಣದ ತೆಗೆದುಕೊಳ್ಳಲು ಮೆದುಳಿಗೆ ಕಷ್ಟವಾಗುತ್ತದೆ. ಹೀಗಾಗಿ ವೈಜ್ಞಾನಿಕ ಕಾರಣ ತಿಳಿದವರು ಮಧ್ಯದ ಬೆರಳಿಗೆ ಉಂಗುರವನ್ನು ಹಾಕಲ್ಲ.

* ಮೂಗುತಿ (Nose Studs) ಹೆಣ್ಣು ಮಕ್ಕಳು 10 ವರ್ಷಕ್ಕೆ ಕಾಲಿಡುತ್ತಿದ್ದಂತೆ ಮೂಗುತಿ ಹಾಕಿಸುತ್ತಾರೆ. ಆದರೆ ಇವಾಗ ಮೂಗುತಿ ಧರಿಸುವವರ ಸಂಖ್ಯೆ ಕಡಿಮೆ. ಕೆಲವರಿಗೆ ಇಷ್ಟವಿದ್ದು ಮೂಗುತಿ ಹಾಕಿಕೊಂಡರೆ, ಇನ್ನು ಕೆಲವರು ಮನೆಯವರ ಒತ್ತಾಯಕ್ಕೆ ಹಾಕಿಕೊಳ್ಳುತ್ತಾರೆ. ಮೂಗಿನ ತುದಿಗೆ ಕೋಪ ಇದೆ, ಮೂಗುತಿ ಹಾಕಿಸಬೇಕು ಅಂತ ಹಿರಿಯರು ಹೇಳುತ್ತಾರೆ. ಮೂಗುತಿ ಚುಚ್ಚಿಸಿದರೆ ಕೋಪ ಕಡಿಮೆಯಾಗುತ್ತದೆ ಎಂಬ ನಂಬಿಕೆ ಹಿರಿಯರಿಗಿದೆ. ಮೂಗಿಗೆ ಒಂದು ಚಿಕ್ಕ ತೂತು ಮಾಡಿದರೆ ಋತುಚಕ್ರದ ಸಮಯದಲ್ಲಿ ಹೆಣ್ಣಿಗೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮೂಗಿನ ನರ ನೇರವಾಗಿ ಗರ್ಭಕೋಶಕ್ಕೆ ಸಂಪರ್ಕವಿದೆ. ಇದರಿಂದ ಸಂತಾನ ಭಾಗ್ಯ ಸಿಗುತ್ತದೆ ಎಂದು ನಂಬಲಾಗಿದೆ.

Jewellery

ಮೂಗುತಿ

* ಬಳೆಗಳು (Bangles) ಬಳೆಗಳು ಕೈಗಳ ಶೃಂಗಾರವನ್ನು ಹೆಚ್ಚಿಸುತ್ತದೆ. ಬಳೆ ಎನ್ನುವುದು ಮುತ್ತೈದೆಯ ಸಂಕೇತ. ಇದು ಕೂಡಾ ಕೇವಲ ಸೌಂದರ್ಯವನ್ನು ಹೆಚ್ಚಿಸಲ್ಲ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಕೆಲ ಪ್ರಯೋಜನಗಳಿವೆ. ಬಳೆಗಳನ್ನು ಕೈಗಳಿಗೆ ಹಾಕಿಕೊಂಡರೆ ಕೈಗಳು ಬಲವಾಗುತ್ತದೆ. ರಕ್ತ ಸಂಚಾರ ಸರಿಯಾಗಿ ಆಗುತ್ತದೆ. ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ. ಕೆಲವರು ಬಳೆಗಳನ್ನು ತುಂಬಾ ಬಿಗಿಯಾಗಿ, ಇನ್ನು ಕೆಲವರು ಸಡಿಲವಾಗಿ ಹಾಕಿಕೊಳ್ಳುತ್ತಾರೆ. ಆದರೆ ಹೀಗೆ ಧರಿಸುವುದು ಒಳ್ಳೆಯದಲ್ಲ. ರಕ್ತನಾಳ ಮತ್ತು ನರಗಳಿಗೆ ಮೃದು ಸ್ಪರ್ಶ ನೀಡುವಂತೆ ಬಳೆಗಳನ್ನ ಹಾಕಿಕೊಳ್ಳಬೇಕು.

Jewellery

ಬಳೆಗಳು

* ಕಾಲುಂಗುರ ಮದುವೆಯಾದ ಸ್ತ್ರೀಯರು ಕಾಲಿಗೆ ಉಂಗುರವನ್ನು ತೊಡಿಸುತ್ತಾರೆ. ಕಾಲಿನ ಉಂಗುರ ಬೆಳ್ಳಿ ಆಭರಣವಾಗಿರುತ್ತದೆ. ರಾಜ ಮನೆತನದ ಸ್ತ್ರೀಯರು ಮಾತ್ರ ಬಂಗಾರದ ಉಂಗುರವನ್ನು ಧರಿಸುತ್ತಿದ್ದರು. ಇನ್ನು ಆಸಕ್ತಿ ಇರುವವರು ಬಂಗಾರದ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಕಾಲಿನ ಬೆರಳಿನ ನರ ಹೃದಯದ ಮೂಲಕ ಗರ್ಭಕೋಶವನ್ನು ತಲುಪುತ್ತದೆ. ಇದು ಸಂತಾನ ಭಾಗ್ಯ ಪಡೆಯಲು ಸಹಕರಿಸುತ್ತದೆ ಎಂದು ಹೇಳಲಾಗುತ್ತದೆ.

Jewellery

ಕಾಲುಂಗುರ

* ಬೈತಲೆ ಬೊಟ್ಟು ಬೈತಲೆ ಬೊಟ್ಟನ್ನು ಪ್ರತಿದಿನ ಬಳಸುವುದಿಲ್ಲ. ಮದುವೆಯಂತಹ ಸಮಾರಂಭಗಳಲ್ಲಿ ಹಾಕಿಕೊಳ್ಳುತ್ತಾರೆ. ಬಿಟ್ಟರೆ ನೃತ್ಯ ಮಾಡುವಾಗ ಇದನ್ನು ಧರಿಸುತ್ತಾರೆ. ರಾಜರ ಆಳ್ವಿಕೆಯ ಕಾಲದಲ್ಲಿ ರಾಜ ಮನೆತನದ ಮಹಿಳೆಯರು ಬೈತಲೆ ಬೊಟ್ಟನ್ನು ಪ್ರತಿದಿನ ಬಳಸುತ್ತಿದ್ದರು. ಬೈತಲೆ ಬೊಟ್ಟು ಧರಿಸಲು ವೈಜ್ಞಾನಿಕ ಕಾರಣವೆಂದರೆ ಶರೀರದ ಬಿಸಿಯನ್ನು ನಿಯಂತ್ರಿಸುತ್ತದೆ.

Jewellery

ಬೈತಲೆ ಬೊಟ್ಟು

* ಕಾಲ್ಗೆಜ್ಜೆ (Anklet) ಕಾಲಿಗೆ ಹಾಕುವ ಗೆಜ್ಜೆ ಅಲಂಕಾರದ ಸಾಧನಗಳಲ್ಲಿ ಒಂದು. ಚಿಕ್ಕ ಮಗವಿನಿಂದ ಹಿಡಿದು ದೊಡ್ಡವಳಾಗುವ ತನಕ ಇಷ್ಟಪಡುವ ಅಲಂಕಾರದ ಸಾಧನವೆಂದರೆ ಅದು ಕಾಲ್ಗೆಜ್ಜೆ. ಕಾಲಿನ ಅಂದ ಹೆಚ್ಚಿಸುವ ಕಾಲ್ಗೆಜ್ಜೆ ಧರಿಸುವ ಹಿಂದೆ ವೈಜ್ಞಾನಿಕ ಕಾರಣವಿದೆ. ಕಾಲಿನ ಗಂಟು ಬಲವಾಗಿಸುವ ಜೊತೆಗೆ ನೋವುಗಳಿಂದ ಪಾರಾಗಿಸುತ್ತದೆ.

Jewellery

ಇದನ್ನೂ ಓದಿ

Health Tips: ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 6 ಆರೋಗ್ಯಕರ ತರಕಾರಿಗಳು

Beauty Tips: ಸುಂದರವಾದ ತುಟಿ ಪಡೆಯಲು ಇಲ್ಲಿದೆ ಉತ್ತಮ ಮಾರ್ಗಗಳು

Published On - 8:43 am, Thu, 26 August 21