AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ

Cardamom Benefits: ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗಿದ್ದರೆ ಯಾವ್ಯಾವುದೋ ಔಷಧಿಗಳನ್ನು ಬಳಸುವ ಬದಲು ದಿನವೂ ರಾತ್ರಿ ಏಲಕ್ಕಿ ಸೇವಿಸಿದರೆ ಸಾಕು. ಹಾಗಾದರೆ, ಏಲಕ್ಕಿಯನ್ನು ಹೇಗೆ ಸೇವಿಸಬೇಕು? ಇಲ್ಲಿದೆ ಮಾಹಿತಿ

Health Tips: ಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ
ಏಲಕ್ಕಿ
TV9 Web
| Edited By: |

Updated on: Aug 25, 2021 | 8:37 PM

Share

ನಮ್ಮ ಅಡುಗೆಮನೆಯಲ್ಲೇ ಇರುವ ಅದೆಷ್ಟೋ ವಸ್ತುಗಳ ಮಹತ್ವ ಮಗೆ ತಿಳಿದಿರುವುದೇ ಇಲ್ಲ. ನಾವು ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಇರುವ ಏಲಕ್ಕಿ (Elaichi) ಆರೋಗ್ಯದ ದೃಷ್ಟಿಯಿಂದಲೂ ಬಹಳ ಉಪಯುಕ್ತವಾದುದು. ಅದರಲ್ಲೂ ಪುರುಷರಿಗಂತೂ ಏಲಕ್ಕಿಯಿಂದ (Cardamom) ಸಾಕಷ್ಟು ಉಪಯೋಗಗಳಿವೆ. ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗಿದ್ದರೆ ಯಾವ್ಯಾವುದೋ ಔಷಧಿಗಳನ್ನು ಬಳಸುವ ಬದಲು ದಿನವೂ ರಾತ್ರಿ ಏಲಕ್ಕಿ ಸೇವಿಸಿದರೆ ಅದರ ಪರಿಣಾಮ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಬೊಜ್ಜು ಕರಗಿಸುವಲ್ಲಿಯೂ ಏಲಕ್ಕಿ ಪಾತ್ರ ಬಹಳ ಮುಖ್ಯವಾದುದು.

ಪುರುಷರು ದಿನವೂ ರಾತ್ರಿ ಒಂದು ಏಲಕ್ಕಿ ತಿನ್ನುವುದರಿಂದ ಲೈಂಗಿಕ ದೌರ್ಬಲ್ಯದಿಂದ ಪಾರಾಗಿ, ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬಹುದು ಎಂದು ಸಂಶೋಧನೆಯೊಂದು ಹೇಳಿದೆ. ಹಾಲು ಅಥವಾ ನೀರಿನೊಂದಿಗೆ ರಾತ್ರಿ ಏಲಕ್ಕಿ ಸೇವಿಸುವುದರಿಂದ ಲೈಂಗಿಕತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಆಯುರ್ವೇದ ತಜ್ಞರ ಪ್ರಕಾರ, ರಾತ್ರಿ ಮಲಗುವಾಗ ಪುರುಷರು ಏಲಕ್ಕಿ ತಿಂದರೆ ಲೈಂಗಿಕ ಸಾಮರ್ಥ್ಯ ಮತ್ತು ಆಸಕ್ತಿಗಳೆರಡೂ ಹೆಚ್ಚಾಗಲಿದೆ. ಲೈಂಗಿಕತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಏಲಕ್ಕಿ ಇರುವ ಔಷಧಗಳನ್ನು ನೀಡಲಾಗುತ್ತದೆ.

ಬಾಯಿ ವಾಸನೆ ನಿವಾರಿಸುವುದರಿಂದ ಹಿಡಿದು ತೂಕ ಇಳಿಕೆ ಮಾಡುವವರೆಗೆ ಏಲಕ್ಕಿಯಿಂದ ಹಲವು ಪ್ರಯೋಜನಗಳಿವೆ. ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಏಲಕ್ಕಿಯನ್ನು ಕಚ್ಚಿ ಬಾಯಲ್ಲಿ ಇಟ್ಟುಕೊಂಡರೆ ಅದರಿಂದ ಸಾಕಷ್ಟು ಉಪಯೋಗವಾಗುತ್ತದೆ. ನೀವೇನಾದರೂ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಒಂದು ಏಲಕ್ಕಿಯನ್ನು ತಿನ್ನಬೇಕು. ಏಲಕ್ಕಿಯ ಒಳಗೆ ಒಂದು ವಿಧವಾದ ಎಣ್ಣೆ ಇರುತ್ತದೆ. ಮಲಗುವಾಗ ಅದನ್ನು ಬಾಯಿಯಲ್ಲಿ ಇಟ್ಟಾಗ, ಎಣ್ಣೆಯು ದೇಹದ ಒಳಗೆ ಹೋಗುತ್ತದೆ. ಇದು ಹೊಟ್ಟೆಯ ಒಳಭಾಗವನ್ನು ಬಲಪಡಿಸುತ್ತದೆ. ಕಿಬ್ಬೊಟ್ಟೆಯಲ್ಲಿ ಸೇರಿರುವ ಆಮ್ಲವನ್ನು ಕ್ರಮೇಣ ತೆಗೆದುಹಾಕಲಾಗುತ್ತದೆ.

ಗೊರಕೆ ಸಮಸ್ಯೆಗೆ ಪರಿಹಾರವೇನೆಂದು ಬಹಳಷ್ಟು ಜನರು ನಾನಾ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ರಾತ್ರಿ ಏಲಕ್ಕಿ ತಿಂದರೆ ಗೊರಕೆ ಸಮಸ್ಯೆಯೂ ಕಡಿಮೆಯಾಗುತ್ತದೆ. ಮಲಬದ್ಧತೆ ನಿವಾರಿಸಲು ಕೂಡ ಏಲಕ್ಕಿ ಸಹಕಾರಿಯಾಗಿದೆ. ಏಲಕ್ಕಿಯನ್ನು ಮೌತ್​ ಫ್ರೆಷನರ್​ ರೀತಿಯಲ್ಲೂ ಬಳಸಬಹುದು. ಏಲಕ್ಕಿ ಸೇವನೆಯಿಂದ ಜೀರ್ಣಶಕ್ತಿಯೂ ವೃದ್ಧಿಯಾಗುತ್ತದೆ.

ಇಷ್ಟೇ ಅಲ್ಲದೆ, ಅಸ್ತಮಾ, ಮಧುಮೇಹ (ಡಯಾಬಿಟಿಸ್), ಹೃದಯ ಸಂಬಂಧಿ ಸಮಸ್ಯೆಗಳಿಗೂ ಏಲಕ್ಕಿಯಿಂದ ಪರಿಹಾರ ಸಿಗುತ್ತದೆ. ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ನಿಯಮಿತವಾಗಿ ಏಲಕ್ಕಿ ಬಳಸಿದರೆ ಪರಿಣಾಮ ಖಂಡಿತ ಗೊತ್ತಾಗಲಿದೆ.

ಇದನ್ನೂ ಓದಿ: Health Tips: ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕಾದ 6 ಆರೋಗ್ಯಕರ ತರಕಾರಿಗಳು

Alcohol Benefits: ಮದ್ಯಪ್ರಿಯರೇ ಶಾಕ್ ಆಗಬೇಡಿ; ಆಲ್ಕೋಹಾಲ್ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?

(Health Tips: Cardamom Health Benefits Elaichi Improves Men Sexual Life and Sex Power)

Follow Us
TV9 Web
TV9 Web

TV9 Kannada

Read More
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ