Alcohol Benefits: ಮದ್ಯಪ್ರಿಯರೇ ಶಾಕ್ ಆಗಬೇಡಿ; ಆಲ್ಕೋಹಾಲ್ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?

Alcohol Benefits: ಮದ್ಯಪ್ರಿಯರೇ ಶಾಕ್ ಆಗಬೇಡಿ; ಆಲ್ಕೋಹಾಲ್ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗವಿದೆ ಗೊತ್ತಾ?
ಸಾಂದರ್ಭಿಕ ಚಿತ್ರ

Alcohol Health Benefits: ಆಲ್ಕೋಹಾಲ್​ ಅನ್ನು ನಿಯಮಿತವಾಗಿ ಸ್ವಲ್ಪ ಕುಡಿಯೋದ್ರಿಂದ ಆರೋಗ್ಯಕ್ಕೇನೂ ಅಪಾಯವಾಗಲಾರದು ಎನ್ನುತ್ತದೆ ಒಂದು ಅಧ್ಯಯನ. ಅಚ್ಚರಿಯಾದರೂ ಇದು ಸತ್ಯ.

TV9kannada Web Team

| Edited By: Sushma Chakre

Aug 02, 2021 | 8:40 PM

‘ಅಯ್ಯೋ ಅವನು ಬಿಡ್ರಿ ಮೂರು ಹೊತ್ತೂ ಕುಡ್ಕೊಂಡು ಬಿದ್ದಿರ್ತಾನೆ’, ‘ಅವನಿಗೆ ಹೆಂಡ ಇದ್ರೆ ಬೇರೇನೂ ಬೇಡ’, ‘ಕುಡ್ಯೋಕೆ ಕೂತ್ರೆ ಒಂದು ಹಂಡೆ ಸಾಕಾಗಲ್ಲ’ ಈ ರೀತಿಯ ಡೈಲಾಗ್​ಗಳು ಬಹುತೇಕರ ಮನೆಯಲ್ಲಿ ಸಾಮಾನ್ಯ. ಆಲ್ಕೋಹಾಲ್ ಸೇವನೆ ಒಮ್ಮೆ ಅಭ್ಯಾಸವಾದರೆ ಅದನ್ನು ಬಿಡಿಸೋದು ತುಂಬಾನೇ ಕಷ್ಟ. ಹಾಗಾಗಿಯೇ ಮದ್ಯಪಾನ ಬಿಡಿಸೋ ಶಿಬಿರಗಳು ಕೂಡ ಇವೆ. ಅತಿಯಾದ ಕುಡಿತದಿಂದ ಪ್ರಾಣವನ್ನೇ ಕಳೆದುಕೊಂಡ ಅದೆಷ್ಟೋ ಜನರ ಉದಾಹರಣೆಗಳಿವೆ. ಕುಡುಕನನ್ನು ನಂಬಿಕೊಂಡ ಹೆಂಡತಿ, ಮಕ್ಕಳು ಬೀದಿಗೆ ಬಂದ ಉದಾಹರಣೆಗಳೂ ಇವೆ. ಆದರೆ, ಆಲ್ಕೋಹಾಲ್ ಕುಡಿಯೋದ್ರಿಂದ ಆರೋಗ್ಯಕ್ಕೆ ಒಂದಷ್ಟು ಉಪಯೋಗಗಳೂ ಇವೆ ಎಂಬ ವಿಷಯ ನಿಮಗೆ ಗೊತ್ತಾ? ಹಾಗಂತ ನಾಳೆಯಿಂದ ಇನ್ನೊಂದೆರಡು ಬಾಟಲಿ ಹೆಚ್ಚೇ ಕುಡುಯೋಕೆ ಶುರು ಮಾಡಬೇಡಿ. ನಾವು ಹೇಳುತ್ತಿರೋದು ಆಗಾಗ ಮದ್ಯಪಾನ ಮಾಡುವವರ ಬಗ್ಗೆಯೇ ಹೊರತು ದಿನನಿತ್ಯ ಕುಡಿಯುವವರಿಗಲ್ಲ ಎಂಬುದು ನೆನಪಿರಲಿ…

‘ಅತಿಯಾದರೆ ಅಮೃತವೂ ವಿಷ’ ಎಂಬ ಮಾತಿನಂತೆ ‘ನಿಯಮಿತವಾಗಿದ್ದರೆ ಯಾವುದೂ ಅಪಾಯಕಾರಿಯಲ್ಲ’ ಎಂಬ ಮಾತು ಕೂಡ ಇದೆ. ಆಲ್ಕೋಹಾಲ್​ ಅನ್ನು ನಿಯಮಿತವಾಗಿ ಸ್ವಲ್ಪ ಕುಡಿಯೋದ್ರಿಂದ ಆರೋಗ್ಯಕ್ಕೇನೂ ಅಪಾಯವಾಗಲಾರದು ಎನ್ನುತ್ತದೆ ಒಂದು ಅಧ್ಯಯನ. ಅಚ್ಚರಿಯಾದರೂ ಇದು ಸತ್ಯ. ಆಲ್ಕೋಹಾಲ್​ನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಅನೇಕ ಉಪಯುಕ್ತ ಅಂಶಗಳಿವೆ. ಅವು ಅಷ್ಟೇ ಪ್ರಮಾಣದಲ್ಲಿ ನಮ್ಮ ದೇಹವನ್ನು ಸೇರಿದರೆ ಅನೇಕ ತೊಂದರೆಗಳಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಬಹುದು. ಆದರೆ, ಆ ಮಿತಿ ಮೀರಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.

ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕಾರಕ ಎಂಬುದಷ್ಟೇ ನಮಗೆಲ್ಲ ಗೊತ್ತಿರುವ ವಿಷಯ. ಆದರೆ, ಅದರಿಂದ ಕೆಲವು ಉಪಯೋಗಗಳು ಕೂಡ ಇವೆ. ಮಾಯೋಕ್ಲಿನಿಕ್ ನಡೆಸಿರುವ ಅಧ್ಯಯನದ ಪ್ರಕಾರ, ನಿಯಮಿತವಾಗಿ ಆಲ್ಕೋಹಾಲ್ ಸೇವನೆ ಮಾಡಿದರೆ ಮಹಿಳೆಯರ ಆರೋಗ್ಯಕ್ಕೂ ಉಪಯೋಗವಾಗುತ್ತದೆ. ಮಹಿಳೆಯರು ದಿನಕ್ಕೆ ಒಂದೆರಡು ಗುಟುಕು ಆಲ್ಕೋಹಾಲ್ ಸೇವನೆ ಮಾಡಿದರೆ ಹಾಗೇ ಪುರುಷರು ದಿನಕ್ಕೆ 355 ಮಿ.ಲೀವರೆಗೆ ಆಲ್ಕೋಹಾಲ್ ಸೇವನೆ ಮಾಡಿದರೆ ಯಾವುದೇ ಅಪಾಯವಿಲ್ಲ. ಹಾಗಿದ್ದರೆ ಆಲ್ಕೋಹಾಲ್ ಸೇವನೆಯಿಂದ ಏನೆಲ್ಲ ಉಪಯೋಗಗಳಿವೆ ಎಂಬುದನ್ನು ತಿಳಿಯೋಣ.

1. ಆಲ್ಕೋಹಾಲ್ ನಿಯಮಿತ ಸೇವನೆಯಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ. ಶೇ. 25ರಿಂದ ಶೇ. 40ರಷ್ಟು ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಅನ್ನು ನಿಯಂತ್ರಿಸುವ ಶಕ್ತಿ ಆಲ್ಕೋಹಾಲ್​ನಲ್ಲಿದೆ.

2. ಆಗಾಗ ಆಲ್ಕೋಹಾಲ್​ ಕುಡಿಯುವುದರಿಂದ ದೀರ್ಘಾವಧಿ ಬದುಕುವ ಸಾಧ್ಯತೆಗಳಿವೆ. ಹಾಗೇ, ಹೆಚ್ಚು ಆಲ್ಕೋಹಾಲ್ ಕುಡಿದರೆ ಬಹಳ ಬೇಗ ಸಾವನ್ನಪ್ಪುತ್ತೀರಿ ಎಂಬುದನ್ನು ಕೂಡ ಮರೆಯಬೇಡಿ.

3. ಆಲ್ಕೋಹಾಲ್ ಸೇವನೆಯಿಂದ ಮಾನಸಿಕ ಆರೋಗ್ಯ ಕೂಡ ಸುಧಾರಿಸುತ್ತದೆ ಎಂದು ಅಧ್ಯಯನ ತಿಳಿಸಿದೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾದ್ದರಿಂದ ನಿಯಮಿತವಾಗಿ ಆಲ್ಕೋಹಾಲ್ ಕುಡಿಯುವವರು ಬೇರೆಯವರಿಗಿಂತ ಹೆಚ್ಚು ಸಂತೋಷವಾಗಿರುತ್ತಾರೆ ಮತ್ತು ಡೋಂಟ್ ಕೇರ್ ಮನೋಭಾವದವರಾಗಿರುತ್ತಾರೆ.

4. ಕೊಂಚ ಪ್ರಮಾಣದ ಆಲ್ಕೋಹಾಲ್ ಸೇವನೆಯಿಂದ ಕಿಡ್ನಿ ಸ್ಟೋನ್ ಆಗುವುದನ್ನು ಕೂಡ ತಡೆಗಟ್ಟಬಹುದಂತೆ. ಲಿಕ್ಕರ್ ಸೇವನೆ ಮಾಡಿದ ನಂತರ ಹೆಚ್ಚೆಚ್ಚು ಮೂತ್ರ ವಿಸರ್ಜನೆ ಮಾಡುವುದರಿಂದ ಅಂಥವರಲ್ಲಿ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆಗಳು ತೀರಾ ಕಡಿಮೆ.

(ಇದು ಅಧ್ಯಯನದ ವರದಿಯಷ್ಟೇ. ಟಿವಿ9 ಕನ್ನಡ ಎಂದಿಗೂ ಮದ್ಯಪಾನಕ್ಕೆ ಉತ್ತೇಜನ ನೀಡುವುದಿಲ್ಲ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಮರೆಯಬೇಡಿ)

ಇದನ್ನೂ ಓದಿ: Health Tips: ಬೆಂಡೆಕಾಯಿ ನೋಡಿ ಮೂಗು ಮುರಿಯಬೇಡಿ; ಬಿಪಿ, ಡಯಾಬಿಟಿಸ್​ಗೆ ಇದೇ ರಾಮಬಾಣ

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(Alcohol benefits: Unbelievable Alcohol Can Actually be Good For Your Health Surprising Health Tips)

Follow us on

Related Stories

Most Read Stories

Click on your DTH Provider to Add TV9 Kannada