ಮುಂದಿನ ದಿನಗಳಲ್ಲಿ ಮನುಷ್ಯರ ಆಯಸ್ಸು ಎಷ್ಟಾಗಬಹುದು? 150 ವರ್ಷ ನಿರಾಯಾಸ ಎನ್ನುತ್ತವೆ ಈ ವರದಿಗಳು

2050ರ ವೇಳೆಗೆ ವಿಶ್ವದ ವಿವಿಧ ದೇಶಗಳಲ್ಲಿ 100 ವರ್ಷ ದಾಟಿದ 37 ಲಕ್ಷ ಮಂದಿ ಇರುತ್ತಾರೆ ಎಂದು ಅಂದಾಜಿಸಲಾಗಿದೆ. 1990ರಲ್ಲಿ ಕೇವಲ 95,000 ಮಂದಿ ಮಾತ್ರ ಶತಮಾನ ಕಂಡಿದ್ದರು.

ಮುಂದಿನ ದಿನಗಳಲ್ಲಿ ಮನುಷ್ಯರ ಆಯಸ್ಸು ಎಷ್ಟಾಗಬಹುದು? 150 ವರ್ಷ ನಿರಾಯಾಸ ಎನ್ನುತ್ತವೆ ಈ ವರದಿಗಳು
ವಯಸ್ಸು ಎನ್ನುವುದು ಇನ್ನು ಮುಂದೆ ಕೇವಲ ಅಂಕಿಗಳಷ್ಟೇ ಆಗಲಿದೆ.
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Aug 02, 2021 | 6:13 PM

ಬೆಂಜಮಿನ್ ಫ್ರಾಂಕ್ಲಿನ್ ಅವರ ಹೆಸರು ನಿಮಗೆ ಗೊತ್ತಿರಬಹುದು. ಅಮೆರಿಕದ ಸ್ವಾತಂತ್ರ್ಯ ಘೋಷಣೆಗೆ 1776ರಲ್ಲಿ ಸಹಿಹಾಕಿದಾಗ ಅವರ ವಯಸ್ಸು 70 ವರ್ಷ. ಆಗ ಮನುಷ್ಯರ ಸರಾಸರಿ ಆಯಸ್ಸು ಕೇವಲ 34 ವರ್ಷವಿತ್ತು. ಈ ಲೆಕ್ಕದಲ್ಲಿ ನೋಡಿದರೆ ಅಮೆರಿಕ ಸ್ವಾತಂತ್ರ್ಯ ಘೋಷಣೆ ಮೊಳಗುವ ಹೊತ್ತಿಗೆ ಬೆಂಜಮಿನ್ ಅಂದಿನ ಸರಾಸರಿ ಆಯಸ್ಸಿನ ದುಪ್ಪಟ್ಟು ಆಯಸ್ಸು ತಮ್ಮದಾಗಿಸಿಕೊಂಡಿದ್ದಾರೆ. 84ನೇ ವಯಸ್ಸಿನಲ್ಲಿ ನಿಧನರಾದ ಬೆಂಜಮಿನ್, ಕುಡಿತದಿಂದ ದೂರ ಇದ್ದುದು ಮತ್ತು ನಿಯಮಿತ ಈಜು ಕಾರಣ ಎಂದು ತಮ್ಮ ದೀರ್ಘಾಯಸ್ಸಿನ ಗುಟ್ಟು ಬಿಟ್ಟುಕೊಟ್ಟಿದ್ದರು.

ಬೆಂಜಮಿನ್ ಫ್ರಾಂಕ್ಲಿನ್ ಮತ್ತು ಅವರ ಆಯಸ್ಸಿನ ಕಥೆ ಈಗ ನೆನಪಾಗಲು ಕಾರಣವಿದೆ. ಇಂದು ಜಗತ್ತಿನಲ್ಲಿ ಮನುಷ್ಯರ ಸರಾಸರಿ ಆಯಸ್ಸು ಪುರುಷರಿಗೆ 70 ವರ್ಷ ಮತ್ತು ಮಹಿಳೆಯರಿಗೆ 75 ವರ್ಷಕ್ಕೆ ಏರಿಕೆಯಾಗಿದೆ. 100 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯೋಮಾನದವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 2050ರ ವೇಳೆಗೆ ವಿಶ್ವದ ವಿವಿಧ ದೇಶಗಳಲ್ಲಿ 100 ವರ್ಷ ದಾಟಿದ 37 ಲಕ್ಷ ಮಂದಿ ಇರುತ್ತಾರೆ ಎಂದು ಅಂದಾಜಿಸಲಾಗಿದೆ. 1990ರಲ್ಲಿ ಕೇವಲ 95,000 ಮಂದಿ ಮಾತ್ರ ಶತಮಾನ ಕಂಡಿದ್ದರು.

ಮನುಷ್ಯರ ಆಯಸ್ಸಿನ ಪ್ರಮಾಣ ಹೆಚ್ಚಾಗಲು ಲಸಿಕೆಗಳು ಮತ್ತು ಇತರ ವೈದ್ಯಕೀಯ ಸಂಶೋಧನೆಗಳು ಮುಖ್ಯ ಕಾರಣ. ಆದರೆ ಕೆಲ ದೇಶಗಳಲ್ಲಿ ಹೆಚ್ಚುತ್ತಿರುವ ವೃದ್ಧರ ಸಂಖ್ಯೆ ಹೊಸ ಸಮಸ್ಯೆಗಳನ್ನೂ ತಂದೊಡ್ಡಿದೆ. ಕೆಲವೆಡೆ ಮಾತ್ರ ಕಾಲಕ್ಕೊಂದು ಉದ್ಯೋಗ ಆಶ್ರಯಿಸಲು, ಹಲವು ಉದ್ಯೋಗಗಳನ್ನು ನಿರ್ವಹಿಸಲು ಮತ್ತು ಹಲವು ಜೀವನಗಳನ್ನು ಒಂದೇ ಜೀವಮಾನದಲ್ಲಿ ಕಳೆಯಲು ಅವಕಾಶ ಮಾಡಿಕೊಟ್ಟಿದೆ.

ದೀರ್ಘಾಯುಸ್ಸು ಗಳಿಸುವ ಕುರಿತು ನಮಗಿರುವ ಸಾಧ್ಯತೆಗಳನ್ನು ನಾವಿನ್ನೂ ಪೂರ್ಣ ಪ್ರಮಾಣದಲ್ಲಿ ಗಮನಿಸಿಕೊಂಡಿಲ್ಲ. ಮಾನವನ ಸರಾಸರಿ ಆಯಸ್ಸು ಮುಂದಿನ ದಿನಗಳಲ್ಲಿ ಇದೇ ಪ್ರಮಾಣಕ್ಕೆ ಏರಿಕೆಯಾಗುತ್ತದೆ ಎಂದು ಹೇಳಲೂ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಅಮೆರಿಕದ ಸರಾಸರಿ ಆಯಸ್ಸಿನ ಪ್ರಮಾಣ ವ್ಯಾಪಕವಾಗಿ ಕುಸಿಯಿತು. 2ನೇ ಮಹಾಯುದ್ಧದ ನಂತರ ಈ ಪ್ರಮಾಣದ ಸಾವು ಎಂದಿಗೂ ವರದಿಯಾಗಿರಲಿಲ್ಲ. ಕೊವಿಡ್​ ಚಿಕಿತ್ಸೆ ಪಡೆದ ಹಲವರಿಗೆ ಚಿಕಿತ್ಸೆಯ ಅಡ್ಡಪರಿಣಾಮಗಳಿಂದ ಆಯಸ್ಸಿನ ಅವಧಿ ಕಡಿಮೆಯಾಗುತ್ತಿದೆ.

ಆದರೆ ನಾವೆಲ್ಲರೂ ಜೀನ್ ಕಾಲ್​ಮೆಂಟ್ ಆಗುವುದಕ್ಕೆ ಸನಿಹದಲ್ಲಿದ್ದೇವೆ. 1997ರಲ್ಲಿ ನಿಧನರಾಗುವ ಮೊದಲು ಜೀನ್ ಕಾಲ್​ಮೆಂಟ್ 122 ವರ್ಷ ಜೀವಿಸಿದ್ದರು. ಸಾಯುವಾಗ ಅವರಿಗೆ ನಿಜವಾಗಿ ಎಷ್ಟು ವರ್ಷ ವಯಸ್ಸಾಗಿತ್ತು ಎನ್ನುವ ಬಗ್ಗೆ ಇನ್ನೂ ಪ್ರಶ್ನೆಗಳಿವೆ. ಆದರೆ ಫ್ರಾನ್ಸ್​ ಮತ್ತು ಸ್ವಿಜರ್​ಲೆಂಡ್​ನ ತಜ್ಞರು ಮಾತ್ರ ನಮ್ಮ ತಲೆಮಾರು ಕಂಡ ಅತ್ಯಂತ ಹಿರಿಯ ವ್ಯಕ್ತಿ ಆಕೆ ಎಂದು ಘೋಷಿಸಿದ್ದಾರೆ. ಪೋರ್ಟ್​ ವೈನ್ ಸೇವನೆ, ಪ್ರತಿ ವಾರದಲ್ಲಿ ಎರಡು ಪೌಂಡ್​ಗಿಂತಲೂ ಹೆಚ್ಚಿನ ಪ್ರಮಾಣ ಚಾಕೊಲೇಟ್ ಸೇವನೆ ನನ್ನ ದೀರ್ಘಾಯುಷ್ಯದ ಗುಟ್ಟು ಎಂದು ಅವರು ಹೇಳಿದ್ದರು.

ದೀರ್ಘಾಯುಷ್ಯ ಎನ್ನುವುದು ಬದುಕಿನ ಗುಣಮಟ್ಟದ ಮೇಲೆ ಅವಂಬಿತವಾಗಿದೆ. ದೇಹಕ್ಕೆ ವಯಸ್ಸಾದಂತೆ ಜೀವಕೋಶಗಳಿಗೆ ಹಾನಿಯಾಗುತ್ತದೆ. ಈ ಸಮಸ್ಯೆಯನ್ನು ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳು ನೀಗಿಸಿವೆ. 2036ರ ನಂತರ ಮನುಷ್ಯರು ತಮಗೆ ಇಷ್ಟ ಬಂದಷ್ಟು ವರ್ಷ ಬದುಕಿರುವಂಥ ಅವಕಾಶ ಸಿಗಲಿದೆ ಎಂದು ಸಂಶೋಧಕ ಔಬ್ರೆ ಡಿ ಗ್ರೆ ಹೇಳುತ್ತಾರೆ.

ರೇ ಕುರ್ಝ್​ವಿಲ್ ಎಂಬ ಸಂಶೋಧಕರ ವಿಶ್ಲೇಷಣೆ ಮತ್ತೊಂದು ಬಗೆಯದು. ವಯಸ್ಸಾದ ಮನುಷ್ಯರ ಜೀವತಂತುಗಳನ್ನು ಅವರು ಔಟ್​ಡೇಟ್ ಆಗಿರುವ ಸಾಫ್ಟ್​ವೇರ್​ಗೆ ಹೋಲಿಸುತ್ತಾರೆ. ವಯಸ್ಸಾಗುವ ಪ್ರಕ್ರಿಯೆಯನ್ನು ಪರಿಹರಿಸಬಲ್ಲ ಎಂಜಿನಿಯರಿಂಗ್ ಸಮಸ್ಯೆ ಎಂದು ಪರಿಗಣಿಸಿ ತರ್ಕವನ್ನು ಮುಂದಿಡುತ್ತಾರೆ. ನೀವು ಬದುಕಿರುವ ಪ್ರತಿ ಒಂದು ವರ್ಷಕ್ಕೂ ನಿಮ್ಮ ಸಾವಿನ ಒಂದು ವರ್ಷ ಮುಂದೂಡುವ ಸಾಧ್ಯತೆ ಶೀಘ್ರ ತೆರೆದುಕೊಳ್ಳಲಿದೆ ಎಂದು ಹಲವು ಆಧಾರಗಳನ್ನು ಮುಂದಿಡುತ್ತಾರೆ.

(Lifespan will improve over a period of time Studies say you could live up to the age of 150)

ಇದನ್ನೂ ಓದಿ: ಬಾಳೆಕಾಯಿ ಹಿಟ್ಟು ತಯಾರಿಸಿದ್ದೀರಾ? ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನಗಳಿವೆ

ಇದನ್ನೂ ಓದಿ: ಮನೆಯೊಳಗೆ ಗಿಡ ನೆಡುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಹರಿಸಿ

Published On - 6:00 pm, Mon, 2 August 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ