ಬಾಳೆಕಾಯಿ ಹಿಟ್ಟು ತಯಾರಿಸಿದ್ದೀರಾ? ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನಗಳಿವೆ

ಬಾಳೆಕಾಯಿ ಅಥವಾ ಹಣ್ಣು ವಿವಿಧ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಜೀರ್ಣಕ್ರಿಯೆ, ಹೃದಯ ಆರೋಗ್ಯ, ರಕ್ತದೊತ್ತಡದಂತಹ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ದಿನನಿತ್ಯ ಸೇವಿಸುವ ಬಾಳೆಹಣ್ಣು ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

ಬಾಳೆಕಾಯಿ ಹಿಟ್ಟು ತಯಾರಿಸಿದ್ದೀರಾ? ಆರೋಗ್ಯಕ್ಕೂ ಹೆಚ್ಚಿನ ಪ್ರಯೋಜನಗಳಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on:Jul 30, 2021 | 9:56 AM

ಸಾಮಾನ್ಯವಾಗಿ ತೋಟದಲ್ಲಿ ಬೆಳೆದ ಬಾಳೆಕಾಯಿ ಸಿಪ್ಪೆ ಸುಲಿದು ಅಡುಗೆಯಲ್ಲಿ ಬಳಸುತ್ತೇವೆ. ಇಲ್ಲವೇ ಹಣ್ಣಿನ ವಿವಿಧ ತಿಂಡಿ-ತಿನಿಸುಗಳನ್ನು ಮಾಡಿ ಸೇವಿಸುತ್ತೇವೆ. ಆದರೆ ಎಂದಾದರೂ ಬಾಳೆಕಾಯಿ ಹಿಟ್ಟು(Banana Flour) ತಯಾರಿಸಿದ್ದೀರಾ? ಬಾಳೆಕಾಯಿಯಿಂದ ಹಿಟ್ಟು ಸಹ ತಯಾರಿಸಬಹುದು. ಕೇವಲ ಸಿಹಿ ತಿನಿಸುಗಳನ್ನು ತಯಾರಿಸಿ ಸವಿಯುವುದೊಂದೇ ಅಲ್ಲದೇ ತಲೆಕೂದಲು (Hair Care) ಹಾಗೂ ಚರ್ಮದ ಆರೈಕೆಗೂ(Skin Care) ಬಾಳೆಕಾಯಿಯನ್ನು ಬಳಸಲಾಗುತ್ತದೆ. ಬಾಳೆಕಾಯಿ ಅತ್ಯಂತ ಆರೋಗ್ಯಕರವಾದದ್ದಾಗಿದೆ.

ಬಾಳೆಕಾಯಿ ಅಥವಾ ಹಣ್ಣು ವಿವಿಧ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಜೀರ್ಣಕ್ರಿಯೆ, ಹೃದಯ ಆರೋಗ್ಯ, ರಕ್ತದೊತ್ತಡದಂತಹ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ದಿನನಿತ್ಯ ಸೇವಿಸುವ ಬಾಳೆಹಣ್ಣು ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಬಾಳೆಕಾಯಿ ಹಿಟ್ಟನ್ನು ಹೇಗೆ ತಯಾರಿಸಬಹುದು ಎಂಬುದನ್ನು ಹೇಳಿದ್ದಾರೆ. ತಯಾರಿಸುವ ವಿಧಾನವನ್ನು ತಿಳಿದು ನೀವೂ ಸಹ ಮನೆಯಲ್ಲಿ ಸುಲಭದಲ್ಲಿ ತಯಾರಿಸಬಹುದು.

ತಜ್ಞರು ಬಾಳೆಕಾಯಿಯಿಂದ ಆರೋಗ್ಯ ಪ್ರಯೋಜನಗಳು ಎಷ್ಟಿವೆ ಎಂಬುದನ್ನು ವಿವರಿಸಿದ್ದಾರೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು, ಜೋರ್ಣಾಂಗ ವ್ಯವಸ್ಥೆಗೆ, ಕರುಳಿನ ಆರೋಗ್ಯ, ಹಾರ್ಮೋನ್ ಸಮತೋಲನ ಹೀಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ವಿವರಿಸಿದ್ದಾರೆ.

ಬಾಳೆಹಣ್ಣು ಅನೇಕ ರೋಗಗಳಿಗೆ ರಾಮಬಾಣ ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ, ವಿಟಮಿನ್ ಬಿ6, ಮೆಗ್ನೀಸಿಯಮ್, ಕಬ್ಬಿಣ, ಮ್ಯಾಂಗನೀಸ್ ಮತ್ತು ಪ್ರೋಟೀನ್ ತುಂಬಿದೆ. ಬಾಳೆಹಣ್ಣು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ ಹಾಗೂ ಜೀರ್ಣಾಂಗ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಕವಾಗಿದೆ. ಜತೆಗೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ಬಾಳೆಕಾಯಿ ಹಿಟ್ಟನ್ನು ಭಾರತೀಯರು ಅಡುಗೆ ಮನೆಯಲ್ಲಿ ರಹಸ್ಯದ ವಸ್ತುವಾಗಿ ಬಳಸುತ್ತಾರೆ. ತಿನ್ನಲು ಅತ್ಯಂತ ರುಚಿಕರವಾಗಿಯೂ ಜತೆಗೆ ಒಳ್ಳೆಯ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಬಾಳೆಕಾಯಿಯ ಹಿಟ್ಟಿನ ತಿಂಡಿಗಳನ್ನು ಮಾಡಿ ಸವಿಯುತ್ತಾರೆ. ಬಾಳೆಕಾಯಿ ಸಿಪ್ಪೆ ತೆಗೆದು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಚೆನ್ನಾಗಿ ಒಣಗಿದ ಬಳಿಕ ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಲಾಗುತ್ತದೆ. ಕಬ್ಬಿಣದ ಬಾಣಲೆಯಲ್ಲಿ ಬ್ರೆಡ್​ನಂತೆಯೇ ತಯಾರಿಸಿ ತೆಂಗಿನಕಾಯಿ ಚಟ್ನಿ ಅಥವಾ ಮಸಾಲೆಯುಕ್ತ ಈರುಳ್ಳಿ ಚಟ್ನಿಯೊಂದಿಗೆ ಸೇವಿಸಲಾಗುತ್ತದೆ.

ಇದನ್ನೂ ಓದಿ:

Health Tips: ಬಾಳೆಹಣ್ಣು ಸೇವಿಸುವ ಅಭ್ಯಾಸ ಇದೆಯೇ? ಖಾಯಿಲೆಗಳಿಂದ ದೂರವಿರಲು ಹಣ್ಣುಗಳ ಸೇವನೆ ಉತ್ತಮ

Red Banana: ಕಣ್ಣಿಗೆ ತಂಪು ಕೆಂಪು ಬಾಳೆಹಣ್ಣು, ರಕ್ತದೊತ್ತಡ ನಿವಾರಣೆ, ಜೀರ್ಣಕ್ರಿಯೆಗೂ ಸಹಕಾರಿ

Published On - 9:52 am, Fri, 30 July 21