Health Tips: ಈ ಕೆಲವು ಆಹಾರವನ್ನು ಸೇವಿಸಿದ ತಕ್ಷಣವೇ ನೀರು ಕುಡಿಯುವ ಅಭ್ಯಾಸ ಒಳ್ಳೆಯದಲ್ಲ!
ಹಣ್ಣುಗಳನ್ನು ತಿಂದ ತಕ್ಷಣವೇ ನೀರು ಸೇವಿಸುವ ಅಗತ್ಯವಿರುವುದಿಲ್ಲ. 45 ನಿಮಿಷದ ಬಳಿಕ ನೀರು ಸೇವಿಸುವುದು ಉತ್ತಮ .
ನಮ್ಮ ದೇಹಕ್ಕೆ ನೀರು ಬಹಳ ಮುಖ್ಯ. ದೇಹದಲ್ಲಿ ನೀರಿನಾಂಶ(Water) ಇಲ್ಲದಿದ್ದೆರೆ ಆರೋಗ್ಯ ಸಮಸ್ಯೆಗಳು(Health Problem) ಬಹುಬೇಗ ಕಾಡುತ್ತವೆ. ನೀರು ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ಆದರೆ ಆಯುರ್ವೇದದಲ್ಲಿ ನೀರು ಕುಡಿಯುವ(Drinking Water) ಕೆಲವು ವಿಧಾನಗಳನ್ನು ತಿಳಿಯಬಹುದು. ಕೆಲವು ಆಹಾರವನ್ನು ತಿಂದ ತಕ್ಷಣವೇ ನೀರು ಸೇವಿಸುವುದು ಉತ್ತಮವಲ್ಲ ಎಂದು ಆಯುರ್ವೇದ ತಿಳಿಸುತ್ತದೆ.
ಹಣ್ಣುಗಳನ್ನು ಈಗಷ್ಟೇ ತಿಂದ ಬಳಿಕವೇ ನೀರು ಸೇವಿಸಬೇಡಿ. ಹಣ್ಣುಗಳನ್ನು ಶೇ.80ರಿಂದ 90ರಷ್ಟು ನೀರಿನಾಂಶ ಇರುತ್ತದೆ. ಇದು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಹಣ್ಣುಗಳಲ್ಲಿ ಸಕ್ಕರೆ ಅಂಶ ಹಾಗೂ ಸಿಟ್ರಿಕ್ ಆಮ್ಲವಿರುತ್ತದೆ. ಅದಕ್ಕಾಗಿಯೇ ಹಣ್ಣುಗಳನ್ನು ತಿಂದ ತಕ್ಷಣವೇ ನೀರು ಸೇವಿಸುವ ಅಗತ್ಯವಿರುವುದಿಲ್ಲ. 45 ನಿಮಿಷದ ಬಳಿಕ ನೀರು ಸೇವಿಸುವುದು ಉತ್ತಮ .
ಐಸ್ಕ್ರೀಂ ತಿಂದ ಬಳಿಕವೇ ನೀರು ಕುಡಿಯಬೇಡಿ. ಹೀಗೆ ಮಾಡುವುದರಿಂದ ಹಲ್ಲಿನ ಸಮಸ್ಯೆ ಉಂಟಾಗುತ್ತದೆ. ಒಸಡು ದುರ್ಬಲಗೊಳ್ಳುತ್ತದೆ. ಗಂಟಲು ನೋವಿನ ಸಮಸ್ಯೆಯನ್ನೂ ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಐಸ್ಕ್ರೀಂ ಸೇವಿಸಿದ 15 ನಿಮಿಷಗಳ ಬಳಿಕ ನೀರು ಕುಡಿಯುವುದು ಉತ್ತಮ.
ಚಹಾ, ಕಾಫಿ ಹೀಗೆ ಯಾವುದೇ ಬಿಸಿ ಪಾನೀಯವನ್ನು ಸೇವಿಸಿದ ನಂತರ ನೀರನ್ನು ಕುಡಿಯಬೇಡಿ. ತಂಪಾಗಿರುವ ಹಾಗೂ ಬಿಸಿಯಾಗಿರುವ ಸಂಯೋಜನೆಯನ್ನು ಎಂದಿಗೂ ಒಟ್ಟಾಗಿ ಸೇವಿಸಬಾರದು.
ಕಡಲೆಕಾಯಿ ಅಥವಾ ಶೇಂಗಾ ತಿಂದ ಬಳಿಕ ನೀರು ಕುಡಿಯುವ ಅಭ್ಯಾಸ ಒಳ್ಳೆಯದಲ್ಲ. ಈ ಎರಡು ಆಹಾರ ಪದಾರ್ಥಗಳು ವಿರೋಧಾತ್ಮಕ ಸಂಯುಕ್ತಗಳನ್ನು ಹೊಂದಿದೆ. ಕೆಮ್ಮು, ಗಂಟಲು ನೋವು ಜತೆಗೆ ವಾಯು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಎಂದಿಗೂ ಕಡಲೆ ಬೀಜವನ್ನು ಸೇವಿಸಿದ ತಕ್ಷಣ ನೀರು ಕುಡಿಯುವ ಅಭ್ಯಾಸ ಒಳ್ಳೆಯದಲ್ಲ.
ಸಿಹಿ ತಿಂದ ತಕ್ಷಣ ನೀರು ಬೇಕೆನ್ನಿಸುವುದು ಸಹಜ. ಆದರೆ ಹೊಟ್ಟೆ ತುಂಬ ಸಿಹಿ ತಿಂದು ತಕ್ಷಣವೇ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಕಾಡುವ ಅಪಾಯ ಹೆಚ್ಚಾಗಿರುತ್ತದೆ. ಇದರಿಂದ ದೇಹದಲ್ಲಿನ ಸಕ್ಕರ ಪ್ರಮಾಣ ಬಹುಬೇಗ ಹೆಚ್ಚಳವಾಗುತ್ತದೆ. ಇಂತಹ ಸಮಯದಲ್ಲಿ ಟೈಪ್-2 ಮಧುಮೇಹದ ಅಪಾಯ ಹೆಚ್ಚಾಗಬಹುದು.
ಅತಿ ವೇಗವಾಗಿ ಓಡಿದ ಬಳಿಕವೇ ನೀರು ಕುಡಿಯುವುದು ಒಳ್ಳೆಯದಲ್ಲ. ಇದು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸಬಹುದು. ಐದು ನಿಮಿಷದ ವಿಶ್ರಾಂತಿಯ ಬಳಿಕ ನೀರು ಕುಡಿಯುವ ಅಭ್ಯಾಸ ಒಳ್ಳೆಯದು.
ಇದನ್ನೂ ಓದಿ:
Health Tips: ನೀರು ಕುಡಿಯುವುದು ಒಳ್ಳೆಯ ಅಭ್ಯಾಸ, ಆದರೆ ಅತಿಯಾದ ನಿರ್ಜಲೀಕರಣ ಆರೋಗ್ಯಕ್ಕೆ ಹಾನಿಕಾರಕ